ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಯಿತು ಸಿಎಎ ಬೆಂಬಲಿಗರ ಅಬ್ಬರ ! ಕ್ರೀಡಾಂಗಣದಲ್ಲಿ ಸಿಎಎ ವಿರುದ್ಧ ಘೋಷಣೆ ಮಾಡಿದವರ ಪರಿಸ್ಥಿತಿ ಹೇಗಾಯಿತು ಗೊತ್ತಾ??

ನಮಸ್ಕಾರ ಸ್ನೇಹಿತರೇ, ದೇಶದಲ್ಲಿ ಇದೀಗ ಪೌರತ್ವ ತಿದ್ದುಪಡಿ ಮಸೂದೆ ಯನ್ನು ಕುರಿತು ಬೆಂಬಲ ನೀಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದೆ. ಮೊದಲಿಗೆ ಕೇವಲ ಬಿಜೆಪಿ ಬೆಂಬಲಿಗರು ಹಾಗೂ ಮಿತ್ರಪಕ್ಷಗಳ ಬೆಂಬಲಿಗರು ಮಾತ್ರ ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿದ್ದರು.

ಆದರೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಬಿಜೆಪಿ ಪಕ್ಷವು ಮನೆ ಮನೆಗೆ ತಲುಪಿಸುತ್ತಿರುವ ಸಂದರ್ಭದಲ್ಲಿ ಹಲವಾರು ವಿರೋಧ ಪಕ್ಷದ ನಾಯಕರು ಪೌರತ್ವ ತಿದ್ದುಪಡಿ ಮಸೂದೆಗೆ ಜೈ ಎಂದಿದ್ದಾರೆ. ಕಾಂಗ್ರೆಸ್, ಟಿಎಂಸಿ, ಬಿಎಸ್ಪಿ ಹೀಗೆ ಹಲವಾರು ಪಕ್ಷದ ಕೆಲವು ಶಾಸಕರು ಕೂಡ ಪೌರತ್ವ ತಿದ್ದುಪಡಿ ಮಸೂದೆಗೆ ಬೆಂಬಲ ಸೂಚಿಸಿದ್ದಾರೆ. ಆದರೆ ವಿರೋಧಿಸುವವರೂ ಇದ್ದಾರೆ, ಹೀಗಿರುವಾಗ ಪೌರತ್ವ ತಿದ್ದುಪಡಿ ಮಸೂದೆ ರಾಜಕೀಯವು ನಿನ್ನೆ ನಡೆದ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಪಂದ್ಯದ ಮೈದಾನಕ್ಕೆ ಎಂಟ್ರಿಕೊಟ್ಟಿತ್ತು. ಮಾಧ್ಯಮಗಳಲ್ಲಿ ತೋರಿಸಿದಂತೆ ದೇಶದ ಬಹುತೇಕ ಜನರು ಹೇಗೆ ವಿರುದ್ಧವಾಗಿ ಇಲ್ಲ ಎಂಬುದು ಮತ್ತೊಮ್ಮೆ ಮೈದಾನದಲ್ಲಿ ಸಾಬೀತಾಯಿತು ಎಂದರೆ ತಪ್ಪಾಗಲಾರದು. ಅಷ್ಟಕ್ಕೂ ಅಲ್ಲಿ ನಡೆದ ಘಟನೆಯನ್ನು ಗೊತ್ತಾ? ಕೆಳಗಿನ ವಿಡಿಯೋ ನೋಡುವ ಮುನ್ನ ಸಂಪೂರ್ಣ ಓದಿ. ನಿನ್ನೆ ಮೈದಾನದಲ್ಲಿ ಕೆಲವು ಯುವಕರು ಎನ್ಆರ್ಸಿ ಹಾಗೂ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು, ಅದೇ ರೀತಿ CAA, NRC ವಿರೋಧ ನೀತಿಯ ಟೀ ಶರ್ಟ್ ಗಳನ್ನು ಕೂಡ ತೊಟ್ಟು ಬಂದಿದ್ದರು.

ಕೂಡಲೇ ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ ಯುವಕರ ಮನವೊಲಿಸಿ ಸುಮ್ಮನಾಗಿಸಲು ಪ್ರಯತ್ನಪಟ್ಟರು, ಆದರೆ ಯುವಕರು ಭದ್ರತಾ ಸಿಬ್ಬಂದಿಗಳ ಜೊತೆ ವಾದಕ್ಕೆ ಇಳಿದರು. ಇದನ್ನು ಗಮನಿಸಿದ ಸಾಮಾನ್ಯ ಜನ ಎಂದಿನಂತೆ ಮೋದಿ ಮೋದಿ ಎಂದು ಘೋಷಣೆ ಕೂಗಲು ಆರಂಭಿಸಿದರು. ಕೇವಲ ಎರಡೇ ಎರಡು ನಿಮಿಷಗಳಲ್ಲಿ ಇಡೀ ಮೈದಾನದಲ್ಲಿ ಮೋದಿ ಮೋದಿ ಎಂಬ ಕೂಗು ಜೋರಾಗಿತ್ತು, ಶೇಕಡ 99ರಷ್ಟು ಜನ ಮೋದಿ ಮೋದಿ ಎಂದು ಕೂಗಲು ಆರಂಭಿಸಿದರು, ಇದನ್ನು ಗಂಭೀರವಾಗಿ ತೆಗೆದುಕೊಂಡ ಭದ್ರತಾ ಸಿಬ್ಬಂದಿಗೆ ಪೌರತ್ವ ತಿದ್ದುಪಡಿ ಮಸೂದೆಯ ವಿರೋಧದ ಗುಂಪನ್ನು ಕೂಡಲೇ ಮೈದಾನದಿಂದ ಹೊರಕ್ಕೆ ದಬ್ಬೀದರು. ಕೊನೆಗೆ ಮೋದಿ ಮೋದಿ ಎಂಬ ಘೋಷಣೆ ನಿಲ್ಲಿಸಲು ಈ ಗುಂಪು ಭಾರತ್ ಮಾತಾ ಕೀ ಜಯ್ ಹಾಗೂ ಒಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗಲಾರಂಭಿಸಿದರು. ಕೊನೆಗೆ ಮೈದಾನದಲ್ಲಿ ಶಾಂತಿ ವಾತಾವರಣ ನಿರ್ಮಿಸಲು ಎಲ್ಲರೂ ಸುಮ್ಮನಾದರು, ಈ ಗುಂಪು ಮೈದಾನದಿಂದ ಹೊರ ಹೋಯಿತು.

Facebook Comments

Post Author: Ravi Yadav