ಶಬರಿಮಲೆ ತೀರ್ಪಿನ ವಿಚಾರಣೆ ನಡೆಸುವಾಗ ಮಸೀದಿಗೆ ಮುಸ್ಲಿಂ ಮಹಿಳೆಯರ ಕುರಿತು ಹೊಸ ಆದೇಶ ಹೊರಡಿಸಿದ ಸುಪ್ರೀಂಕೋರ್ಟ್ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೆ ಇದೀಗ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಕೆಲವು ದಿನಗಳ ಹಿಂದಷ್ಟೇ ತೀರ್ಪನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಕೆಯಾಗಿದೆ.

ಇದೀಗ ಸುಪ್ರೀಂಕೋರ್ಟ್ ಹೊಸ ಆದೇಶ ಹೊರಡಿಸಿದ್ದು ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ತೋರಲಾಗುತ್ತಿದೆ ಎಂದು ಸಲ್ಲಿಸಿರುವ ಆಕ್ಷೇಪಕಾರಿ ಅರ್ಜಿಯನ್ನು ಕೈಗೆತ್ತುಕೊಂಡು ಹಿರಿಯ ವಕೀಲರಿಗೆ ಹೊಸ ಆದೇಶ ಹೊರಡಿಸಿದೆ. ಇಂದು ಶಬರಿಮಲೆ ತೀರ್ಪಿನ ಮರುಪರಿಶೀಲನೆ ಅರ್ಜಿಯನ್ನು ಕೈಗೆತ್ತಿಕೊಂಡ ಸಿಜೆಐ ಎಸ್ ಎ ಬೊಬ್ಡೆ ರವರ ನೇತೃತ್ವದ 9 ಸದಸ್ಯರ ನ್ಯಾಯಪೀಠವು ಇದೀಗ ನಾವು ಕೇವಲ ಶಬರಿಮಲೆ ಅಯ್ಯಪ್ಪ ದೇಗುಲದ ವಿಚಾರವನ್ನು ಮಾತನಾಡಲು ಅಥವಾ ಪರಿಗಣಿಸಲು ಸಾಧ್ಯವಿಲ್ಲ. ಯಾವುದೇ ರೀತಿಯ ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ತಾರತಮ್ಯ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ ಎಂದು ಹೇಳಿದೆ. ಆದ ಕಾರಣದಿಂದ ಈ ಎಲ್ಲಾ ವಿಷಯಗಳನ್ನು ಚರ್ಚೆ ಮಾಡಲು ಜನವರಿ 17 ರಂದು ನಾಲ್ವರು ವಕೀಲರ ಸಭೆ ಕರೆದಿದೆ.

ಈ ಪ್ರಕರಣದ ಅಡಿಯಲ್ಲಿ ಮಸೀದಿಗಳಿಗೆ ಮಹಿಳೆಯರ ಪ್ರವೇಶದ ನಿರ್ಬಂಧ ಹೇರಿರುವ ಬಗ್ಗೆ ಹಾಗೂ ಪಾರ್ಸಿ ಸಮುದಾಯದ ಮಹಿಳೆಯರು ಅನ್ಯಧರ್ಮೀಯರ ಮದುವೆಗೆ ಹೋಗಲು ವಿಧಿಸಿರುವ ನಿರ್ಬಂಧದ ಬಗ್ಗೆ, ಅಷ್ಟೇ ಅಲ್ಲದೆ ಬೊಹ್ರಾ ಮುಸ್ಲಿಂ ಸಮುದಾಯದ ಮಹಿಳೆಯರ ಜನಾಂಗವನ್ನು ಊನಗೊಳಿಸುವ ವಿಚಾರಗಳು ಸೇರಿದಂತೆ ಈ ಹಿಂದೆ ಈ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದ ಪಂಚ ಸದಸ್ಯರ ನ್ಯಾಯಪೀಠದ ಧಾರ್ಮಿಕ ಆಚರಣೆ, ಮೂಲಭೂತ ಹಕ್ಕುಗಳ ವಿಚಾರಣೆ ಹಾಗೂ ದೇಶದ ಪ್ರತಿಯೊಬ್ಬ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟು ಕೊಂಡು ಸದಸ್ಯ ನ್ಯಾಯ ಪೀಠವು ಕೇಳಿದ ಏಳು ಪ್ರಶ್ನೆಗಳನ್ನು ಗಮನದಲ್ಲಿ ಮುಂದಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳ ಲಾಗುತ್ತದೆ ಎಂದು ಘೋಷಣೆ ಮಾಡಿದೆ.

Credit: Vijaya Karnataka

Facebook Comments

Post Author: Ravi Yadav