ಬಯಲಾಯಿತು ಮಾಧ್ಯಮಗಳ ಕುತಂತ್ರ ! ಮೋದಿ ಹಾಗೂ ದೇಶದ ವಿರುದ್ಧ ಮಾಧ್ಯಮಗಳು ನಡೆಸುತ್ತಿರುವ ಮಹಾ ಕುತಂತ್ರದ ಅಸಲಿ ಕಥೆ ! ವಿಡಿಯೋ ಸಮೇತ ಸತ್ಯ ಬಹಿರಂಗ

ನಮಸ್ಕಾರ ಸ್ನೇಹಿತರೇ, ಇದೀಗ ಜೆಎನ್ಯು ಕಾಲೇಜ್ ವಿದ್ಯಾರ್ಥಿಗಳು ದೇಶದ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ವಿರುದ್ಧ ಕಿಡಿ ಕಾರುತ್ತಿರುವ ಜೆಎನ್ಯು ಕಾಲೇಜು ವಿದ್ಯಾರ್ಥಿಗಳು ಹಾಗೂ ಮಾಧ್ಯಮಗಳು ನಡೆಸುತ್ತಿರುವ ಕುತಂತ್ರದ ಕುರಿತು ಸತ್ಯ ಬಯಲಾಗಿದೆ.

ದೇಶದ ಪ್ರತಿಷ್ಠಿತ ಮಾಧ್ಯಮ ಎನಿಸಿಕೊಂಡಿರುವ ಇಂಡಿಯಾ ಟುಡೇ ಎಂಬ ಸಂಸ್ಥೆಯು ಈ ರೀತಿ ಮಾಡುತ್ತದೆ ಎಂದು ಯಾರೂ ಊಹಿಸಲು ಕೂಡ ಸಾಧ್ಯವಿರಲಿಲ್ಲ. ಇವರು ಈ ರೀತಿ ಮಾಡಿದರೇ ನಮಗೆ ಒಂದು ಪ್ರಶ್ನೆ ಮೂಡುತ್ತಿದೆ, ಆ ಪ್ರಶ್ನೆಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ ನೀವೇ ಉತ್ತರಿಸಿ. ಈ ವಿಡಿಯೋದಲ್ಲಿ ವಿದ್ಯಾರ್ಥಿಗಳು ಯಾವ ರೀತಿ ಮಾತನಾಡಬೇಕು ಎಂದು ಇಂಡಿಯಾ ಟುಡೇ ಜರ್ನಲಿಸ್ಟ್ ಗಳು ವಿವರವಾಗಿ ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಿದ್ದಾರೆ. ನೀವು ಇದೇ ರೀತಿ ವಿಡಿಯೋ ಮುಂದೆ ಮಾತನಾಡಿ ಕಿಡಿಕಾರಿ ಎಂದು ಪ್ರಚೋದನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಈ ಕೆಳಗಿನ ವಿಡಿಯೋ ಸಂಪೂರ್ಣವಾಗಿ ನೋಡಿ.

ಅಂದ ಹಾಗೇ ಇವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿ ಬೇಕು ಎಂದರೆ ನೇರವಾಗಿ ಕಿಡಿಕಾರಬಹುದು, ಆದರೆ ಈ ರೀತಿಯ ಕುತಂತ್ರಗಳು ಮಾಡಿದರೇ ನೀವು ಹೋರಾಟ ಮಾಡುತ್ತಿರುವುದು ಕೇಂದ್ರ ಸರ್ಕಾರದ ವಿರುದ್ಧವೋ ಅಥವಾ ದೇಶದ ವಿರುದ್ಧವೋ ಎಂಬ ಅನುಮಾನ ಮೂಡುತ್ತಿದೆ. ಈ ರೀತಿ ಕುತಂತ್ರಗಳನ್ನು ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಕತ್ತಿ ಮಸೆಯುವ ಕಾರ್ಯ ಮಾಡಿದರೇ ನಿಮಗೆ ಏನು ಸಿಗುತ್ತದೆ? ಕೇವಲ ಟಿ ಆರ್ ಪಿ ಗಾಗಿ ಈ ರೀತಿಯ ಕೆಲಸಗಳು ನಡೆಯುತ್ತವೆ ಎಂದರೆ ಪತ್ರಿಕೋದ್ಯಮದ ಮೇಲೆ ಅನುಮಾನ ಮೂಡುತ್ತದೆ. ಇದ್ದದ್ದನ್ನು ಇದ್ದಹಾಗೆ ತೋರಿಸಿ ಟಿಆರ್ಪಿ ಪಡೆದುಕೊಳ್ಳಿ ಪ್ರಯತ್ನಪಡಿ ಎಂಬುದು ನಮ್ಮ ವಾದ. ಇಲ್ಲಿ ನಾವು ಯಾವ ಪಕ್ಷದ ಪರವಾಗಿಯೂ ಮಾತನಾಡುತ್ತಿಲ್ಲ, ಬದಲಾಗಿ ದೇಶದ ತುಕಡೆ ಗ್ಯಾಂಗ್ ಗಳ ಪರವಾಗಿ ನಿಂತಿರುವ ನಿಮ್ಮಂತಹ ಮಾಧ್ಯಮಗಳ ವಿರುದ್ಧವಾಗಿ ಮಾತನಾಡುತ್ತಿದ್ದೇವೆ. ದೇಶ ದೇಶ ಮೊದಲು ಆ ನಂತರ ಉಳಿದದ್ದು.

Facebook Comments

Post Author: Ravi Yadav