ದೀಪಿಕಾಗೆ ಬುದ್ಧಿ ಕಲಿಸಿದ ದೇಶಭಕ್ತರು ! ಟಿಕೆಟ್ ಕ್ಯಾನ್ಸಲ್ ಆಗಿದ್ದು ಸುಳ್ಳು ಎಂದು ಜನರಿಗೆ ಅಸಲಿ ಉತ್ತರ ಸಿಕ್ಕಿಬಿಟ್ಟಿತ್ತು ! ನಡೆಯುತ್ತಿರುವುದಾದರೂ ಏನು ಗೊತ್ತಾ??

ದೀಪಿಕಾಗೆ ಬುದ್ಧಿ ಕಲಿಸಿದ ದೇಶಭಕ್ತರು ! ಟಿಕೆಟ್ ಕ್ಯಾನ್ಸಲ್ ಆಗಿದ್ದು ಸುಳ್ಳು ಎಂದು ಜನರಿಗೆ ಅಸಲಿ ಉತ್ತರ ಸಿಕ್ಕಿಬಿಟ್ಟಿತ್ತು ! ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ದೀಪಿಕಾ ರವರು ತುಕಡೆ ಗ್ಯಾಂಗ್ ಗಳ ಬೆಂಬಲಕ್ಕೆ ನಿಂತಿದ್ದರು ಎಂಬ ಕಾರಣದಿಂದ ದೀಪಿಕಾ ರವರ ಚಪಕ್ ಮೂವಿಯನ್ನು ನಿಷೇಧಿಸುವಂತೆ ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆರಂಭಿಸಿದ್ದರು. ಇನ್ನು ಕೆಲವರು ಟಿಕೆಟ್ ಕ್ಯಾನ್ಸಲ್ ಮಾಡಿದ್ದೇವೆ ಎಂದು ಪೋಸ್ಟ್ ಮಾಡುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು.

ಆದರೆ ಕೆಲವು ನೆಟ್ಟಿಗರು ಒಂದೇ ಟಿಕೆಟ್ನ ಫೋಟೋ ಶೇರ್ ಮಾಡಿದ್ದ ಕಾರಣ ಇದು ಕೇವಲ ಅಭಿಯಾನವಷ್ಟೇ ಯಾವುದೇ ಟಿಕೆಟ್ಗಳು ಕ್ಯಾನ್ಸಲ್ ಆಗಿಲ್ಲ, ಬೆರಳೆಣಿಕೆಯ ಟಿಕೆಟ್ಗಳು ಮಾತ್ರ ಕ್ಯಾನ್ಸಲ್ ಆಗಿವೆ ಎಂದು ದೀಪಿಕಾ ರವರ ಬೆಂಬಲಕ್ಕೆ ನಿಂತಿದ್ದರು. ಆದರೆ ಎಲ್ಲಾ ಲೆಕ್ಕಾಚಾರಗಳ ನಡುವೆ ದೀಪಿಕಾ ರವರಿಗೆ ದೇಶಭಕ್ತರು ಸರಿಯಾದ ಬುದ್ಧಿ ಕಲಿಸಿದ್ದಾರೆ ಎಂದು ಇದೀಗ ಬಾಕ್ಸಾಫೀಸ್ ಗಳಿಕೆಯಲ್ಲಿನ ಅಂಕಿ ಅಂಶಗಳನ್ನು ಇಟ್ಟುಕೊಂಡು ನೆಟ್ಟಿಗರು ನಾವು ಗೆದ್ದಿದ್ದೇವೆ ಎಂದಿದ್ದಾರೆ. ದೀಪಿಕಾ ರವರ ವಿರುದ್ಧ ಅಭಿಯಾನ ಆರಂಭಿಸಿದ ನೆಟ್ಟಿಗರು, ಈ ಅಭಿಯಾನದಲ್ಲಿ ಪ್ರತಿಯೊಬ್ಬ ದೇಶಭಕ್ತರು Tanhaji ಚಿತ್ರ ನೋಡುವಂತೆ ಕರೆ ನೀಡಿದರು.

ಈ ಅಭಿಯಾನಗಳ ಬೆನ್ನಲ್ಲೇ ಇದೀಗ ಫಲಿತಾಂಶ ಹೊರಬಿದ್ದಿದ್ದು, ದೀಪಿಕಾ ರವರ ಸಿನಿಮಾಗೆ ಬೆಂಬಲ ನೀಡಿ ಕಾಂಗ್ರೆಸ್ಸಿಗರು ಹಲವಾರು ಕಡೆ ಸಂಪೂರ್ಣ ಥಿಯೇಟರ್ ಗಳನ್ನು ಬುಕ್ ಮಾಡಿದ್ದರೂ ಕೂಡ ಮೊದಲ ದಿನ ಕೇವಲ 4.77 ಕೋಟಿ ಗಳಿಸಿದೆ. ಇನ್ನು ಈ ಚಿತ್ರಕ್ಕೆ ಎದುರಾಳಿಯಾಗಿ ಬಿಡುಗಡೆಯಾದ Tanhaji ಚಿತ್ರವು ಬರೋಬ್ಬರಿ 15.10 ಕೋಟಿ ಗಳಿಸುವುದರಲ್ಲಿ ಯಶಸ್ವಿಯಾಗಿದೆ. ಅಜಯ್ ದೇವಗನ್ ರವರ ಸಿನಿಮಾ ಇಷ್ಟರ ಮಟ್ಟಿಗೆ ಯಶಸ್ಸು ಕಾಣ ಸಿಗಲು ಸಾಧ್ಯವೇ ಇರಲಿಲ್ಲ. ಆದರೆ ನೆಟ್ಟಿಗರು ಕ್ಷಣಮಾತ್ರದಲ್ಲಿ ಅಜಯ್ ದೇವಗನ್ ರವರ ಸಿನಿಮಾದ ಹಣೆ ಬರಹವನ್ನು ಸಂಪೂರ್ಣವಾಗಿ ಬದಲಾಯಿಸಿ, ಚಪಕ್ ಸಿನಿಮಾಗೆ ಟಕ್ಕರ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.