ಶಿವಸೇನೆಗೆ ಮೊದಲ ಸೋಲು ! ಹೆಚ್ಚು ಸದಸ್ಯರು ಇದ್ದರೂ ಕೊನೆಯ ಕ್ಷಣದಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ನಡೆದದ್ದೇನು ಗೊತ್ತಾ?

ಶಿವಸೇನೆಗೆ ಮೊದಲ ಸೋಲು ! ಹೆಚ್ಚು ಸದಸ್ಯರು ಇದ್ದರೂ ಕೊನೆಯ ಕ್ಷಣದಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ನಡೆದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಅದ್ಯಾಕೋ ಅಧಿಕಾರಕ್ಕೆ ಏರಿದ ಕ್ಷಣದಿಂದಲೂ ಶಿವಸೇನಾ ಪಕ್ಷದ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ. ಶಿವಸೇನಾ ಪಕ್ಷದ ಸಿದ್ಧಾಂತವನ್ನು ನಂಬಿಕೊಂಡು ಬಂದ ಶಾಸಕರು ಹಾಗೂ ಹಲವಾರು ನಾಯಕರು ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ.

ಮತ್ತೊಂದೆಡೆ ಕೆಲವರು ಈಗಾಗಲೇ ಪಕ್ಷ ತೊರೆದು ಕಾರ್ಯಕರ್ತರ ಬೆಂಬಲದೊಂದಿಗೆ ಬಿಜೆಪಿ ಪಕ್ಷ ಸೇರಿಕೊಳ್ಳುತ್ತಿದ್ದಾರೆ. ಇಂತಹ ಸಂದಿಗ್ಧ ಸಮಯದಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷದಲ್ಲಿ ಬಂಡಾಯಗಳು ಭುಗಿಲೆದ್ದಿದೆ. ಒಳಗೊಳಗೆ ಮೈತ್ರಿಯಲ್ಲಿ ಬಿರುಕು ಮೂಡಿದರು ಕೂಡ ಚುನಾವಣೆಯಲ್ಲಿ ಒಂದಾಗಿ ಉಸ್ಮಾನಾಬಾದ್ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಗೆಲ್ಲುವ ಕನಸು ಕಾಣುತ್ತಿದ್ದರು. ಆದರೆ ಶಿವಸೇನಾ ಪಕ್ಷದಲ್ಲಿ ಬಂಡಾಯದ ಬಾವುಟ ಹಾರಿಸಿರುವ ಶಾಸಕ ತಾನಾಜಿ ಸಾವಂತ್ ರವರು ಕೊನೆಯ ಕ್ಷಣದಲ್ಲಿ ಶಿವಸೇನಾ ಪಕ್ಷಕ್ಕೆ ಶಾಕ್ ನೀಡಿದಷ್ಟೇ ಅಲ್ಲದೆ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿ, ಮಹಾರಾಷ್ಟ್ರ ರಾಜ್ಯದ ಉಸ್ಮಾನಾಬಾದ್ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಕೊಂಡು ಬಂದಿದ್ದಾರೆ.

ಕಾಂಗ್ರೆಸ್, ಎನ್ಸಿಪಿ ಹಾಗೂ ಶಿವಸೇನಾ ಪಕ್ಷಗಳು ಜಿಲ್ಲಾ ಪರಿಷತ್ ಚುನಾವಣೆಯಲ್ಲಿ 30 ಸದಸ್ಯರ ಬೆಂಬಲದೊಂದಿಗೆ ಅಧಿಕಾರಕ್ಕೆ ಏರುವ ಕನಸು ಕಾಣುತ್ತಿದ್ದರು. ಆದರೆ ಕೊನೆ ಕ್ಷಣದಲ್ಲಿ ಜಿಲ್ಲಾ ಪರಿಷತ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಅಸ್ಮಿತಾ ಕಾಂಬ್ಳಿ ರವರಿಗೆ ತಾನಾಜಿ ಸಾವಂತ್ ರವರು ಬೆಂಬಲ ಸೂಚಿಸಿದ ಕಾರಣ, ಇವರ ಆದೇಶದಂತೆ 7 ಶಿವಸೇನಾ ಪಕ್ಷದ ಸದಸ್ಯರು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದಾರೆ. ಆದ ಕಾರಣ ಮೈತ್ರಿ ಅಭ್ಯರ್ಥಿ ಶೇರ್ಖಾನೆ ರವರಿಗೆ ಕೇವಲ 23 ಮತಗಳು ಲಭಿಸಿದ್ದು ಬಿಜೆಪಿ ಪಕ್ಷದ ಅಭ್ಯರ್ಥಿ ಅಸ್ಮಿತಾ ಕಾಂಬ್ಳಿ ಅವರು ಮೂವತ್ತು ಮತಗಳನ್ನು ಪಡೆದುಕೊಂಡು ಜಿಲ್ಲಾ ಪರಿಷತ್ ಅಧ್ಯಕ್ಷರಾಗಿ ಗೆದ್ದು ಬೀಗಿದ್ದಾರೆ.