ಬಿಗ್ ನ್ಯೂಸ್: ತುಕಡೆ ಗ್ಯಾಂಗ್ ಗಳ ಪರ ನಿಲ್ಲುವ ತಾರೆಗಳಿಗೆ ಮುಂದಿದೆಯೇ ಮಾರಿಹಬ್ಬ? ಸ್ಮೃತಿ ಇರಾನಿ ಹೇಳಿದ್ದೇನು ಗೊತ್ತಾ??

ಬಿಗ್ ನ್ಯೂಸ್: ತುಕಡೆ ಗ್ಯಾಂಗ್ ಗಳ ಪರ ನಿಲ್ಲುವ ತಾರೆಗಳಿಗೆ ಮುಂದಿದೆಯೇ ಮಾರಿಹಬ್ಬ? ಸ್ಮೃತಿ ಇರಾನಿ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ದೇಶದಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ JNU ಕಾಲೇಜಿನಲ್ಲಿ ನಡೆದ ಘಟನೆಗೆ ದೆಹಲಿ ಪೊಲೀಸರು ಸಾಕ್ಷಿ ಸಮೇತ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಮೂಲಕ ತಪ್ಪು ಯಾರದ್ದು ಎಂಬುದರ ಸ್ಪಷ್ಟ ಚಿತ್ರಣ ನೀಡಿದ್ದಾರೆ.

ಪ್ರತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಹಲವಾರು ಬಾರಿ ಸಂಘರ್ಷಗಳು ನಡೆದಿರುತ್ತವೆ. ಆದರೆ JNU ಕಾಲೇಜು ಮಾತ್ರ ಪ್ರತ್ಯೇಕ ಸಾಲಿನಲ್ಲಿ ನಿಲ್ಲುತ್ತದೆ, ಸದಾ ದೇಶದ ವಿರುದ್ಧದ ಘೋಷಣೆಗಳಿಂದ ಸದ್ದು ಮಾಡುತ್ತಿದ್ದ ಈ ಕಾಲೇಜು ಈ ಬಾರಿ ಕಹಿ ಘಟನೆಯಿಂದ ಸದ್ದು ಮಾಡಿತ್ತು. ಇದಕ್ಕೆಲ್ಲ ಕಾರಣ ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ, ಬದಲಾಗಿ ದೇಶದ ವಿರುದ್ಧ ಘೋಷಣೆ ಕೂಗಿದರೂ ಕೂಡ ಪ್ರಚಾರ ಗಿಟ್ಟಿಸಿಕೊಳ್ಳಲು, ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ನೇರವಾಗಿ ಕಿಡಿ ಕಾರಲು ರಾಜಕೀಯದ ಬಣ್ಣ ಬಳೆದು ಯಾವುದೇ ಸುದ್ದಿಯನ್ನು ಆಗಲಿ ಬಹಳ ಚರ್ಚೆಗೆ ಗ್ರಾಸವಾಗುವಂತೆ ಮಾಡಲು ರಾಜಕೀಯ ನಾಯಕರು ಹಾಗೂ ತಾರಾ ಬಳಗ ಅವರ ಬೆಂಬಲಕ್ಕೆ ನಿಂತಿರುತ್ತದೆ. ಇದೀಗ ಕೇಂದ್ರ ಸರ್ಕಾರದ ಚಿತ್ತ ಅವರತ್ತ ನೆಟ್ಟಿದೆ.

ಸಾಕ್ಷಿಗಳು ಬಿಡುಗಡೆಯಾಗುವ ಮುನ್ನ ಈ ಘಟನೆಯ ಕುರಿತು ಮಾತನಾಡಿದ ಕೇಂದ್ರ ಸಚಿವೆ ಸೃತಿ ಇರಾನಿ ರವರು, ನಾವು ದೀಪಿಕಾ ಪಡುಕೋಣೆ ಅವರ ಹಕ್ಕನ್ನು ಕಸಿದುಕೊಳ್ಳುವುದಿಲ್ಲ ಆದರೆ ಭಾರತ ದೇಶದ ವಿರುದ್ಧ ಕಿಡಿಕಾರಿ ದೇಶವನ್ನು ವಿಭಜನೆ ಮಾಡುತ್ತೇವೆ ಎನ್ನುವ ಮೂಲ ಸಿದ್ಧಾಂತವನ್ನು ಹೊಂದಿರುವ ವಿದ್ಯಾರ್ಥಿಗಳ ಸಂಘ ಹಾಗೂ ತನ್ನ ಸಹಪಾಠಿಗಳ ಮೇಲೆಯೇ ಹ.ಲ್ಲೆ ಮಾಡುತ್ತಿರುವ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದಾರೆ. ಇಂತಹ ತಾರೆಗಳನ್ನು ನಾವು ದೊಡ್ಡ ಸ್ಟಾರ್ ಗಳಾಗಿ ಮಾಡಿದ್ದೇವೆ. ಒಟ್ಟಿನಲ್ಲಿ ಇನ್ನು ಮುಂದೆ ತುಕಡೆ ಗ್ಯಾಂಗ್ ಗಳ ಪರವಾಗಿ ನಿಲ್ಲುವ ಎಲ್ಲಾ ತಾರೆಗಳಿಗೆ ತಕ್ಕ ಪಾಠವನ್ನು ಕಲಿಸುವ ಸಮಯ ಇದಾಗಿದೆ ಎಂದು ಹೇಳಿಕೆ ನೀಡಿದ್ದಾರೆ.