ಮುಂದಿನ ಟಿ20 ವಿಶ್ವಕಪ್ ಗೆ ತನ್ನದೇ ಆದ ಭಾರತ ತಂಡ ಘೋಷಣೆ ಮಾಡಿದ ವಿವಿಎಸ್ ಲಕ್ಷ್ಮಣ್ !ಕನ್ನಡಿಗನಿಗೂ ಸ್ಥಾನ ನೀಡಿದ ಲಕ್ಷ್ಮಣ್ ! ಸ್ಥಾನ ಪಡೆದ ಆಟಗಾರರು ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ವಿಶ್ವದಲ್ಲಿಯೇ ಬಲಾಡ್ಯ ತಂಡವಾಗಿ ದ್ದರೂ ಕಳೆದ ಬಾರಿ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾದ ಕೊಹ್ಲಿ ನೇತೃತ್ವದ ತಂಡವು ಇದೀಗ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ತನ್ನ ಬಲವನ್ನು ವಿಶ್ವಕ್ಕೆ ಸಾರಬೇಕು ಎಂದು ಈಗಾಗಲೇ ಟಿ20 ವಿಶ್ವಕಪ್ಗೆ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದೆ. ಇದೇ ಸಮಯದಲ್ಲಿ ಭಾರತದ ಹಿರಿಯ ಆಟಗಾರರಲ್ಲಿ ಪ್ರಮುಖರ ಸಾಲಿನಲ್ಲಿ ನಿಲ್ಲುವ ವಿವಿಎಸ್ ಲಕ್ಷ್ಮಣ್ ರವರು ತಮ್ಮದೇ ಆದ ತಂಡವನ್ನು ಘೋಷಣೆ ಮಾಡಿದ್ದಾರೆ, ಈ ತಂಡದಲ್ಲಿ ಇರುವ ಆಟಗಾರರು ಮುಂದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದು, ಈಗ ಸದ್ಯದ ಪರಿಸ್ಥಿತಿಯಲ್ಲಿ ಈ ತಂಡವೇ ಬಲಿಷ್ಠ ತಂಡವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಚ್ಚರಿಯೆಂಬಂತೆ ಆರಂಭಿಕ ಆಟಗಾರ ಶಿಖರ್ ಧವನ್ ರವರನ್ನು ತಮ್ಮ ತಂಡದಿಂದ ಕೈಬಿಟ್ಟಿದ್ದಾರೆ.

ಇನ್ನು ಕನ್ನಡಿಗ ಮನೀಶ್ ಪಾಂಡೆ ರವರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿರುವ ವಿವಿಎಸ್ ಲಕ್ಷ್ಮಣ್ ರವರು ಪ್ರಮುಖ ಸ್ಪಿನ್ನರ್ ಗಳಾದ ಚಹಲ್ ಹಾಗೂ ಕುಲದೀಪ್ ಯಾದವ್ ರವರಿಗೆ ಸ್ಥಾನ ನೀಡಿದ್ದಾರೆ. ಉಳಿದಂತೆ ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಜೆಸ್ವಿತ್ ಬುಮ್ರಾ, ಯುಜೇಂದ್ರ ಚಹಲ್, ಕುಲದೀಪ್ ಯಾದವ್, ಮನೀಶ್ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜಾ, ಮಹಮದ್ ಶಮಿ, ದೀಪಕ್ ಚಹರ್ ಹಾಗೂ ಭುವನೇಶ್ವರ್ ಕುಮಾರ್. ಇನ್ನು ಯುವ ಆಟಗಾರ ವಾಷಿಂಗ್ಟನ್ ಸುಂದರ್, ವಿವಿಎಸ್ ಲಕ್ಷ್ಮಣ್ ರವರ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಬಹಳ ಅಳೆದು-ತೂಗಿ ಈ ತಂಡವನ್ನು ತಯಾರು ಮಾಡಿರುವುದಾಗಿ ವಿವಿಎಸ್ ಲಕ್ಷ್ಮಣ್ ರವರು ತಿಳಿಸಿದ್ದಾರೆ. ಈ ತಂಡದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

Facebook Comments

Post Author: Ravi Yadav