ದಶಕದ ಟೆಸ್ಟ್ ಕ್ರಿಕೆಟ್ ತಂಡ ಘೋಷಣೆ ಮಾಡಿದ ರಿಕಿ ಪಾಂಟಿಂಗ್ ! ಎಲ್ಲರನ್ನೂ ಮೀರಿಸಿ ನಾಯಕನಾದ ಹೆಮ್ಮೆಯ ಆಟಗಾರ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ನಾವು ಹೊಸ ದಶಕಕ್ಕೆ ಕಾಲಿಟ್ಟಿದ್ದೇವೆ, ಇದರ ಬೆನ್ನಲ್ಲೇ ಕಳೆದ ದಶಕದ ಎಲ್ಲಾ ವಿದ್ಯಮಾನಗಳನ್ನು ಮೆಲುಕು ಹಾಕಲಾಗುತ್ತಿದೆ. ಅದೇ ರೀತಿ ಕ್ರಿಕೆಟ್ ರಂಗದಲ್ಲಿಯೂ ಕೂಡ ಕಳೆದ ದಶಕದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಂದೆಡೆ ಸೇರಿಸಿಕೊಂಡು ತಂಡ ರಚನೆ ಮಾಡುವಲ್ಲಿ ಹಲವಾರು ಖ್ಯಾತ ಕ್ರಿಕೆಟಿಗರು ನಿರತರಾಗಿದ್ದಾರೆ. ಅದೇ ರೀತಿ ಆಸ್ಟ್ರೇಲಿಯಾ ತಂಡಕ್ಕೆ ಮೂರು ವಿಶ್ವಕಪ್ ಗೆಲ್ಲಿಸಿ ಕೊಟ್ಟಿರುವ ಮಾಜಿ ನಾಯಕ ರಿಕಿ ಪಾಂಟಿಂಗ್ ರವರು ಇದೀಗ ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಕಳೆದ ದಶಕದ ಟೆಸ್ಟ್ ತಂಡವನ್ನು ಪ್ರಕಟಣೆ ಮಾಡಿದ್ದಾರೆ.

ಈ ತಂಡದಲ್ಲಿ ಕೇವಲ ಒಬ್ಬ ಭಾರತೀಯ ಸ್ಥಾನ ಪಡೆಯಲು ಯಶಸ್ವಿಯಾಗಿದ್ದು, ಸ್ಥಾನ ಪಡೆಯುವುದಷ್ಟೇ ಅಲ್ಲದೇ ಕಳೆದ ದಶಕದ ಟೆಸ್ಟ್ ತಂಡದ ನಾಯಕನಾಗಿ ಹೊರ ಹೊಮ್ಮಿದ್ದಾರೆ. ಈ ತಂಡವನ್ನು ರಿಕಿ ಪಾಂಟಿಂಗ್ ರವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪ್ರಕಟಣೆ ಮಾಡಿದ್ದು ಅಚ್ಚರಿಯೆಂಬಂತೆ ಇಂಗ್ಲೆಂಡ್ ತಂಡದ ನಾಲ್ಕು ಆಟಗಾರರು ಸ್ಥಾನ ಪಡೆದಿದ್ದಾರೆ. ಸಂಪೂರ್ಣ ತಂಡ ಇಂತಿದೆ, ಡೇವಿಡ್ ವಾರ್ನರ್, ಆಲಿಸ್ಟಾರ್ ಕುಕ್, ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ (ನಾಯಕ), ಸ್ಟೀವ್ ಸ್ಮಿತ್, ಕುಮಾರ ಸಂಗಕ್ಕರ, ಬೆನ್ ಸ್ಟೋಕ್ಸ್, ಡೇಲ್ ಸ್ಟೈನ್, ನಾಥನ್ ಲಾಯನ್, ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಆಂಡರ್ಸನ್.

Facebook Comments

Post Author: Ravi Yadav