ಸೇನಾ ಮುಖ್ಯಸ್ಥರು ಎಂಬುದನ್ನು ನೋಡದೇ ಕಠಿಣ ಶಬ್ದಗಳಿಂದ ಭಾಷಣ ಮಾಡಿದ ಚಿದಂಬರಂ ಹೇಳಿದ್ದೇನು ಗೊತ್ತಾ?

ಸೇನಾ ಮುಖ್ಯಸ್ಥರು ಎಂಬುದನ್ನು ನೋಡದೇ ಕಠಿಣ ಶಬ್ದಗಳಿಂದ ಭಾಷಣ ಮಾಡಿದ ಚಿದಂಬರಂ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ರವರು ಪೌರತ್ವ ತಿದ್ದುಪಡಿ ಮಸೂದೆಯನ್ನು ಕುರಿತು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರು ಹಿಂಸಾಚಾರದ ದಾರಿಯಲ್ಲಿ ಇಳಿದಿದ್ದನ್ನು ಕಂಡು, ಇವರನ್ನು ಪ್ರೇರೇಪಿಸಿರುವ ನಾಯಕರ ಕುರಿತು ತಪ್ಪು ದಾರಿಯಲ್ಲಿ ಕರೆದುಕೊಂಡು ಹೋಗುವನು ಎಂದಿಗೂ ನಾಯಕನಾಗಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದರು.

ಇದರ ಕುರಿತು ಮಾತನಾಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಭಾರತದ ಮಾಜಿ ವಿತ್ತ ಸಚಿವ ಚಿದಂಬರಂ ರವರು ಕಟು ಶಬ್ದಗಳಿಂದ ಟೀಕೆ ಮಾಡಿದ್ದಾರೆ. ಇಂದು ಕೇರಳದ ತಿರುವಂತನಪುರ ನಲ್ಲಿ ಕಾಂಗ್ರೆಸ್ ಪಕ್ಷ ಆಯೋಜನೆ ಮಾಡಿದ್ದ ಸಭೆಯಲ್ಲಿ ಮಾತನಾಡಿದ ಪಿ ಚಿದಂಬರಂ ರವರು ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಯೋಜನೆಗಳು ಸಂಪೂರ್ಣವಾಗಿ ಭಾರತದ ಸಂವಿಧಾನಕ್ಕೆ ವಿರುದ್ಧವಾಗಿ ಇವೆ, ಈ ಕೂಡಲೇ ಎರಡು ಮಸೂದೆಗಳನ್ನು ರದ್ದು ಪಡಿಸಿ ಆದೇಶ ಹೊರಡಿಸ ಬೇಕು ಎಂಬುದು ನಮ್ಮ ಬೇಡಿಕೆ. ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಇನ್ನು ಬಿಪಿನ್ ರಾವತ್ ರವರ ಕುರಿತು ಮಾತನಾಡಿದ ಚಿದಂಬರಂ ರವರು, ಪೊಲೀಸ್ ಮಹಾನಿರ್ದೇಶಕರು ಹಾಗೂ ಸೇನಾ ಮುಖ್ಯಸ್ಥರು ಇದೀಗ ರಾಜಕೀಯ ವಿಷಯಗಳಿಗೆ ಸಂಬಂಧ ಪಟ್ಟಂತೆ ಕೇಂದ್ರ ಸರ್ಕಾರವನ್ನು ವಹಿಸಿಕೊಂಡು ಮಾತನಾಡುತ್ತಿದ್ದಾರೆ. ಇದು ಬಹಳ ನಾಚಿಕೆಗೇಡಿನ ಸಂಗತಿ, ಬಿಪಿನ್ ರಾವತ್ ರವರು ಭಾರತೀಯ ಸೇನೆಯ ಮುಖ್ಯಸ್ಥ, ಅವರು ತಮ್ಮ ಕೆಲಸವನ್ನು ತಾವು ನೋಡಿಕೊಂಡರೇ ಸಾಕು. ಯಾವುದೇ ರಾಜಕೀಯ ವ್ಯಕ್ತಿಗಳು ಏನು ಮಾಡಬೇಕು ಎಂದು ಹೇಳುವ ಕೆಲಸ ಮುಖ್ಯಸ್ಥರದಲ್ಲ. ಬದಲಾಗಿ ಯುದ್ಧ ಹೇಗೆ ಮಾಡಬೇಕು, ಶತ್ರು ರಾಷ್ಟ್ರಗಳನ್ನು ಯಾವ ರೀತಿ ಯುದ್ಧ ಭೂಮಿಯಲ್ಲಿ ಹಿಮ್ಮೆಟ್ಟಿಸಬೇಕು ಎಂಬುದರ ಬಗ್ಗೆ ಗಮನ ಹರಿಸಿ ಸಲಹೆ ಕೊಡಲಿ, ಇದು ಕೂಡ ರಾಜಕಾರಣಿಗಳ ಕೆಲಸವಲ್ಲ. ಯಾರು ಯಾವ ಕೆಲಸ ಮಾಡಬೇಕು ಅವರು ಅದನ್ನೇ ಮಾಡ ಬೇಕು. ಅವರವರ ಕೆಲಸಗಳನ್ನು ಅವರ ನೋಡಿಕೊಂಡರೇ ಬಹಳ ಒಳ್ಳೆಯದು ಎಂದಿದ್ದಾರೆ.