ಹಳೇ ವಿಡಿಯೋ ಎಂದ ಕುಮಾರಸ್ವಾಮಿ ರವರಿಗೆ ಸಾಮಾನ್ಯ ಜ್ಞಾನದ ಉತ್ತರಗಳ ಮೂಲಕ ತಿರುಗೇಟು ನೀಡಿದ ಪ್ರೀತಂ ಗೌಡ ! ಬಾರಿ ವೈರಲ್ ಆದ ಹೇಳಿಕೆ ಏನು ಗೊತ್ತಾ??

ಹಳೇ ವಿಡಿಯೋ ಎಂದ ಕುಮಾರಸ್ವಾಮಿ ರವರಿಗೆ ಸಾಮಾನ್ಯ ಜ್ಞಾನದ ಉತ್ತರಗಳ ಮೂಲಕ ತಿರುಗೇಟು ನೀಡಿದ ಪ್ರೀತಂ ಗೌಡ ! ಬಾರಿ ವೈರಲ್ ಆದ ಹೇಳಿಕೆ ಏನು ಗೊತ್ತಾ??

ಮಂಗಳೂರು ಪ್ರತಿಭಟನೆಯ ಸಮಯದಲ್ಲಿ ಪೊಲೀಸರು ನಡೆದ ಘಟನಾವಳಿಗಳ ವಿಡಿಯೋ ಸಾಕ್ಷಿಗಳನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ವಿರುದ್ಧ ಕೇಳಿ ಬರುತ್ತಿದ್ದ ವಿಪಕ್ಷ ನಾಯಕರ ಆರೋಪಗಳಿಗೆ ಸಾಕ್ಷಿ ನೀಡಿದ್ದರು. ಆದರೆ ಶಾಸಕರಾಗಿರುವ ಕುಮಾರ ಸ್ವಾಮಿ ರವರು ವಿಡಿಯೋ ಸಾಕ್ಷಿಗಳನ್ನು ಕೂಡ ನಂಬದೇ, ಈ ವಿಡಿಯೋ ಗಳು ಸತ್ಯ ಎಂದು ಹೇಗೆ ನಂಬುವುದು? ವಿಡಿಯೋ ಗಳು ಹಳೆಯದು ಇರಬಹುದು, ನಾನು ಒಬ್ಬ ವಿರೋಧ ಪಕ್ಷದ ಸದಸ್ಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ನಿಟ್ಟಿನಲ್ಲಿ ರಾಜ್ಯದ ಪೊಲೀಸರೇ ಪಿತೂರಿ ನಡೆಸಿದರೇ ಸುಮ್ಮನೆ ಕೂರಲು ಸಾಧ್ಯವೇ ಇಲ್ಲ, ಈ ವಿಡಿಯೋ ಗಳು 1996 ವಿಡಿಯೋ ಗಳು ಎಂದು ಹೇಳಿಕೆ ನೀಡಿದ್ದರು.

ಇದೀಗ ಇವರ ಹೇಳಿಕೆ ಕೇಳಿ ಬಿಜೆಪಿ ಪಕ್ಷದ ಯುವ ನಾಯಕ ಪ್ರೀತಂ ಗೌಡ ರವರು, ಕುಮಾರ ಸ್ವಾಮಿ ರವರಿಗೆ ಸಾಮಾನ್ಯ ಜ್ಞಾನದ ಉತ್ತರಗಳ ಮೂಲಕ ತಿರುಗೇಟು ನೀಡಿದ್ದಾರೆ. 1996 ಇಸವಿಯಲ್ಲಿ ಯಾವುದೇ ಆಪೇ ಆಟೋ ಇರಲಿಲ್ಲ. (ವಿಡಿಯೋಗಳಲ್ಲಿ ಆಪೇ ಆಟೋ ಗಳಲ್ಲಿ ಕಲ್ಲು ತುಂಬಿಸಿ ತರಲಾಗಿತ್ತು), ಆ ಕಾಲದಲ್ಲಿ ಇನ್ನು CCTV ಗಳು ಕೂಡ ಇರಲಿಲ್ಲ. ಆರೋಪ ಮಾಡುವ ಮುನ್ನ ಸತ್ಯ ಸಂಗತಿಯನ್ನು ಕುಮಾರಸ್ವಾಮಿ ರವರು ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಇವರ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದ್ದು, ಮಾಜಿ ಮುಖ್ಯಮಂತ್ರಿಗಳಿಗೆ ಇಷ್ಟು ಕೂಡ ಸಾಮಾನ್ಯ ಜ್ಞಾನ ಇಲ್ಲ ಎಂದು ಟೀಕೆ ಮಾಡಿದ್ದಾರೆ.