ಡಿಕೆಶಿ ಯೇಸು ಶಿಲುಬೆಯನ್ನು ನಿರ್ಮಾಣದ ಕನಸಿಗೆ ತಣ್ಣೀರೆರೆಚಲು ನಿರ್ಧಾರ ಮಾಡಿದರೇ ಅಶೋಕ್ ! ಮಾಡುತ್ತಿರುವುದಾದರೂ ಏನು ಗೊತ್ತಾ??

ಡಿಕೆಶಿ ಯೇಸು ಶಿಲುಬೆಯನ್ನು ನಿರ್ಮಾಣದ ಕನಸಿಗೆ ತಣ್ಣೀರೆರೆಚಲು ನಿರ್ಧಾರ ಮಾಡಿದರೇ ಅಶೋಕ್ ! ಮಾಡುತ್ತಿರುವುದಾದರೂ ಏನು ಗೊತ್ತಾ??

ಇದೀಗ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆಯಲ್ಲಿ ವಿಶ್ವದ ಅತಿ ಎತ್ತರದ ಯೇಸು ಶಿಲುಬೆಯನ್ನು ನಿರ್ಮಾಣ ಮಾಡಲು ಹೊರಟಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಹಲವಾರು ಜನರ ಕೆಂಗಣ್ಣಿಗೆ ಗುರಿಯಾಗಿರುವ ಈ ನಿರ್ಧಾರಕ್ಕೆ ಬ್ರೇಕ್ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ. ಸಂಪೂರ್ಣ ಮಾಹಿತಿಗಳಿಗಾಗಿ ಕೆಳಗಡೆ ಓದಿ.

ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿರುವ ಟಿವಿ9 ಚಾನೆಲ್ ನಲ್ಲಿ ಈ ಸುದ್ದಿ ಇದೀಗ ವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ. ಡಿಕೆ ಶಿವಕುಮಾರ್ ಅವರ ಈ ನಿರ್ಧಾರದ ಬಗ್ಗೆ ಬಹುತೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಅವರು ಇದು ಒಂದು ರೀತಿಯ ಸಮಾಜ ಸೇವೆ ಎಂದು ಬಿಜೆಪಿ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದರು. ಆದರೆ ಎಲ್ಲ ವಾದ-ವಿವಾದಗಳ ನಡುವೆ ಸರ್ಕಾರಿ ಜಾಗ ಹೇಗೆ ಮಂಜೂರಾಯಿತು ಎನ್ನುವ ಅಂಶವನ್ನು ಕೆದಕಿ ನೋಡಿದಾಗ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ವೇಳೆಯಲ್ಲಿ ರಾಮನಗರದ ಕಪಾಲ ಬೆಟ್ಟದಲ್ಲಿ 10 ಎಕರೆ ಸರ್ಕಾರಿ ಜಾಗವನ್ನು ಕುಮಾರಸ್ವಾಮಿ ರವರು ಸರ್ಕಾರಿ ಒಡೆತನದಿಂದ ಬಿಡುಗಡೆ ಮಾಡಿದ್ದರು.

ಇದೇ ಅಂಶವನ್ನು ಗಮನಿಸಿರುವ ರಾಜ್ಯ ಸರ್ಕಾರವು ಇದೀಗ ಡಿಕೆಶಿ ರವರ ಕನಸಿಗೆ ಅಡ್ಡಗಾಲು ಹಾಕಲು ಹೊರಟಿದೆ. ಬಿಜೆಪಿ ಪಕ್ಷದ ಶಾಸಕರಾಗಿರುವ ಆರ್ ಅಶೋಕ್ ರವರು ರಾಮನಗರ ಜಿಲ್ಲಾಧಿಕಾರಿಗೆ ಸರ್ಕಾರದ ಗೋಮಾಳದ ಬಗ್ಗೆ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಿ ಈ ಕೂಡಲೇ ರಿಪೋರ್ಟ್ ನೀಡುವಂತೆ ಆದೇಶ ನೀಡಿದ್ದಾರೆ.(ಮೇಲಿನ ವಿಡಿಯೋ ನೋಡಿ). ಈ ಭೂಮಿಯನ್ನು ಸರ್ಕಾರವು ಮತ್ತೊಮ್ಮೆ ಮರು ಸ್ವಾಧೀನ ಮಾಡಿಕೊಳ್ಳಲು ಆರ್ ಅಶೋಕ್ ರವರು ನಿರ್ಧಾರ ಮಾಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಆದರೆ ಜಿಲ್ಲಾಧಿಕಾರಿಯ ಅಧಿಕೃತ ಆದೇಶದ ವರೆಗೂ ಯಾವುದೇ ನಿರ್ಣಯ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಇದೀಗ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ರಾಜ್ಯ ಸರ್ಕಾರದ ನಡೆಗೆ ಬಾರಿ ಪ್ರಶಂಸೆಗಳು ವ್ಯಕ್ತವಾಗಿವೆ.