ಒಹ್ ಹೊ: ಮಮತಾ ಕೋಟೆಗೆ ಸೈನಿಕರಂತೆ ನುಗ್ಗಲು ಸಜ್ಜಾದ ಬಿಜೆಪಿ ಕಾರ್ಯಕರ್ತರು ! ಎಷ್ಟು ಸಾವಿರ ಮತ್ತು ಯಾಕೆ ಗೊತ್ತಾ??

ಒಹ್ ಹೊ: ಮಮತಾ ಕೋಟೆಗೆ ಸೈನಿಕರಂತೆ ನುಗ್ಗಲು ಸಜ್ಜಾದ ಬಿಜೆಪಿ ಕಾರ್ಯಕರ್ತರು ! ಎಷ್ಟು ಸಾವಿರ ಮತ್ತು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಬಿಜೆಪಿ ಪಕ್ಷಕ್ಕೆ ಇದೀಗ ದೇಶದಲ್ಲಿ ಹಲವಾರು ಸವಾಲುಗಳು ಎದುರಾಗುತ್ತಿವೆ. ಅದರಲ್ಲಿಯೂ ಕಠಿಣವಾದ ಮಸೂದೆ ಗಳನ್ನೂ ಮಂಡಿಸುತ್ತಿರುವ ಕಾರಣ ಬಹುತೇಕ ಬಾರಿ ತಪ್ಪು ಮಾಹಿತಿಗಳಿಂದ ಬಿಜೆಪಿ ಪಕ್ಷಕ್ಕೆ ವಿರೋಧದ ಟೀಕೆಗಳು ಕೇಳಿ ಬರುತ್ತಿವೆ. ವಿಪಕ್ಷಗಳು ಬಹತೇಕ ಬಾರಿ ತಪ್ಪು ಮಾಹಿತಿಗಳ ಮೂಲಕ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ, ಅದರಲ್ಲಿಯೂ ಈ ನಡೆಯಲ್ಲಿ ಮಮತಾ ರವರು ಮುಂದೆ ಇದ್ದಾರೆ.

ಹೌದು, ಈಗಾಗಲೇ ಲೋಖಾಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಭೂತ ಪೂರ್ವ ಸಾಧನೆ ಮಾಡಿರುವುದರಿಂದ ತಲೆ ಕೆಡಿಸಿ ಕೊಂಡಿರುವ ಮಮತಾ ರವರು, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟಿಕೊಂಡು ಕೇಂದ್ರದ ಮೇಲೆ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಚತುರ ಪ್ರಶಾಂತ್ ಕಿಶೋರ್ ರವರ ಪ್ಲಾನ್ ಅಡಗಿದೆ ಎಂಬುದು ಸಹ ತಿಳಿದುಬಂದಿದೆ. ಆದರೆ ಈ ಎಲ್ಲ ಸವಾಲುಗಳನ್ನು ಎದುರಿಸಲು ಬಿಜೆಪಿ ಪಕ್ಷ ತನ್ನ ಕಾರ್ಯಕರ್ತರನ್ನು ಅಖಾಡಕ್ಕೆ ಇಳಿಸಲು ಸಜ್ಜಾಗಿದೆ. ಈ ಮೂಲಕ ಮಮತಾಗೆ ಸೆಡ್ಡು ಹೊಡೆಯಲು ಹೊಸ ಯೋಜನೆ ರೂಪಿಸಿದೆ.

ಹೌದು ಇದೀಗ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ ರವರು ಹಿರಿಯ ಮುಖಂಡರೊಂದಿಗೆ ಸಭೆ ಮಾಡಿದ ನಂತರ ಪಶ್ಚಿಮ ಬಂಗಾಳದಲ್ಲಿ CAA ಕುರಿತು ಅರಿವು ಮೂಡಿಸಲು ಬರೋಬ್ಬರಿ 30,000 ಕಾರ್ಯ ಕರ್ತರನ್ನು ಕಳುಹಿಸಲು ಮುಂದಾಗಿದ್ದಾರೆ. ಈ ಕಾರ್ಯಕರ್ತರು ಬಂಗಾಳದಲ್ಲಿ ಮನೆ ಮನೆಗೆ ತೆರಳಿ CAA ಮಸೂದೆಯಿಂದ ನಿಮಗೆ ಯಾವುದೇ ತೊಂದರೆ ಇಲ್ಲ. ಇದು ಕೇವಲ ಅನ್ಯದೇಶೀ ಪ್ರಜೆಗಳಿಗೆ ಅನ್ವಯವಾಗುತ್ತದೆ ಎಂದು ವಿವರಣೆ ನೀಡಲಿದ್ದಾರೆ. ಈ ಮೂಲಕ ಮುಂದಿನ ವಿಧಾಸಭಾ ಚುನಾವಣೆ ಹಾಗೂ CAA ಕುರಿತು ಅರಿವು ಮೂಡಿಸಲು ಬಿಜೆಪಿ ಹೈ ಕಮಾಂಡ್ ಮುಂದಾಗಿದೆ.