ಶಿವಸೇನಗೆ ಮರ್ಮಾಘಾತ ! ಉದ್ಧವ್ ಠಾಕ್ರೆ ಮಾತು ಮೀರಿ ಮೋದಿ ನಿರ್ಧಾರಕ್ಕೆ ಜೈ ಎಂದು ಸಂಸದ ಮಾಡಿದ್ದೇನು ಗೊತ್ತಾ?

ಶಿವಸೇನಗೆ ಮರ್ಮಾಘಾತ ! ಉದ್ಧವ್ ಠಾಕ್ರೆ ಮಾತು ಮೀರಿ ಮೋದಿ ನಿರ್ಧಾರಕ್ಕೆ ಜೈ ಎಂದು ಸಂಸದ ಮಾಡಿದ್ದೇನು ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಶಿವಸೇನೆ ಪಕ್ಷವು ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ಪರವಾಗಿ ಮತ ಚಲಾಯಿಸಿತು, ಆದರೆ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿಯ ಕಾರಣ ರಾಜ್ಯಸಭೆಯಲ್ಲಿ ಬಿಜೆಪಿ ಪಕ್ಷಕ್ಕೆ ಕೈ ಕೊಟ್ಟು ಮತದಾನದಿಂದ ದೂರ ಇಳಿದಿತ್ತು. ಆದರೆ ಇದೀಗ ಇದೇ ಕಾರಣಕ್ಕೆ ಪಕ್ಷದಲ್ಲಿ ಭಿನ್ನಮತ ಕಾಣಿಸಿಕೊಂಡಿದೆ.

Hemanth Patil Uddav Taakre

ಹೌದು, ಈಗಾಗಲೇ ಈ ವಿಷಯಗಳ ಕುರಿತು ಹಲವಾರು ದಿನಗಳಿಂದ ಶಿವಸೇನಾ ಪಕ್ಷದಲ್ಲಿ ಅಸಮಾನಧ ಹೊಗೆ ಯಾಡುತ್ತಿತ್ತು. ಆದರೆ ಇದ್ಯಾವುದಕ್ಕೂ ಉದ್ಧವ್ ಠಾಕ್ರೆ ತಲೆ ಕೆಡಿಸಿಕೊಳ್ಳದೇ ಸರ್ಕಾರ ರಚನೆ, ಅಧಿಕಾರ ದಲ್ಲಿ ನಿರತರಾಗಿದ್ದರು. ಆದರೆ ಇದೀಗ ಭಿನ್ನಮತ ಮತ್ತೊಂದು ಹಂತಕ್ಕೆ ಬಂದು ನಿಂತಿದೆ. ಸಂಸದ ಹೇಮಂತ್ ಪಾಟೀಲ್ ರವರು ಅಸಮಾಧಾನವನ್ನು ಹೊರಹಾಕಿ, ಆಡಳಿತ ಪಕ್ಷಕ್ಕೆ ಪತ್ರ ಬರೆದಿದ್ದಾರೆ. ಉದ್ಧವ್ ಠಾಕ್ರೆ ರವರನ್ನು ಪಕ್ಕಕ್ಕೆ ಸರಿಸಿರುವ ಸಂಸದ, ನೇರವಾಗಿ ಅಧಿಕಾರಿಗಳಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದಾರೆ. ಇವರ ಈ ನಡೆಯನ್ನು ಕೆಲವು ನಾಯಕರು ಟೀಕೆ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನನ್ನ ನಿರ್ಧಾರ ಅಚಲ ಎಂದಿದ್ದಾರೆ.

ನಾನು ಸಭೆಗಳಲ್ಲಿ ಕಾರ್ಯನಿರತವಾಗಿದ್ದರಿಂದ ಸಿಎಎ ಮತ್ತು ಎನ್‌ಆರ್‌ಸಿಯನ್ನು ಬೆಂಬಲಿಸಿ ರ್ಯಾಲಿಯಲ್ಲಿ ಸೇರಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಲೋಕಸಭೆಯಲ್ಲಿ ನಾನು ಈ ಕಾಯ್ದೆಗಳನ್ನು ಬೆಂಬಲಿಸಿದ್ದೇನೆ. ಶಿವಸೇನೆ ಯಾವಾಗಲೂ ಹಿಂದುತ್ವ ಪಕ್ಷವಾಗಿದೆ. ಈ ಎರಡು ವಿಷಯಗಳನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಮತ್ತು ಅದಕ್ಕಾಗಿ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಆದರಿಂದ ಈ ಕೂಡಲೇ ಈ ಎರಡು ಕಾಯ್ದೆಗಳನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.