ವಾಜಪೇಯಿ ರವರ ಮಾತಿನ ಮರ್ಮ ತಿಳಿಯದೇ ಬೆಪ್ಪಾಗಿ ಉಳಿದ ಕಾಂಗ್ರೆಸ್ಸಿಗರು !ಹೀಗೆ ನಡೆದಿತ್ತು ಒಂದು ಪ್ರಸಂಗ ! ಒಮ್ಮೆ ಓದಿ.. ನಕ್ಕು ಬಿಡಿ

ನಮಸ್ಕಾರ ಸ್ನೇಹಿತರೇ, ಅಟಲ್ ಬಿಹಾರಿ ವಾಜಪೇಯಿ ರವರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಇಡೀ ಭಾರತ ದೇಶದ ಸಾಮಾನ್ಯ ರಾಜಕೀಯ ನಾಯಕರ ಸಾಲಿನಲ್ಲಿ ಇವರು ನಿಲ್ಲುವುದಿಲ್ಲ. ಕೇವಲ ಬಿಜೆಪಿ ಪಕ್ಷದ ದವರಿಗಷ್ಟೇ ಅಲ್ಲದೇ ಉಳಿದ ಪಕ್ಷದ ಬೆಂಬಲಿಗರೂ ಕೂಡ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ. ಅದೇ ಕಾರಣದಿಂದ ಇವರನ್ನು ಅಜಾತ ಶತ್ರು ಎಂದು ಕೂಡ ಕರೆಯುತ್ತಾರೆ. ಇವರಿಗಾಗಿಯೇ ಪ್ರತ್ಯೇಕ ಸ್ಥಾನವನ್ನು ಭಾರತೀಯರು ನೀಡಿದ್ದಾರೆ.

ಇಂತಹ ಜನಪ್ರಿಯ ನಾಯಕ ಅಭಿವೃದ್ಧಿ, ಅಧಿಕಾರ ಹಾಗೂ ರಾಜಕೀಯದ ವಿಷಯಗಳನ್ನು ಹೊರತು ಪಡಿಸಿದರೇ, ತಮ್ಮದೇ ಆದ ಹಾಸ್ಯ ಪ್ರಜ್ಞೆಯ ಮೂಲಕ ಹಲವಾರು ಬಾರಿ ವ್ಯಂಗ್ಯ ಮಾತುಗಳ ಮೂಲಕ ವಿರೋಧ ಪಕ್ಷದ ಕಾಲೆಳೆದಿದ್ದರು. ಅದೇ ರೀತಿ ನಡೆದ ಒಂದು ಪ್ರಸಂಗವನ್ನು ಇಂದು ನಾವು ನಿಮ್ಮ ಮುಂದೆ ಇಡುತ್ತೇವೆ. ವಿಪರ್ಯಾಸವೆಂದರೇ, ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರಿಗೆ ಅಂದು ವಾಜಪೇಯಿ ರವರ ಮಾತಿನ ಮರ್ಮ ಅರ್ಥವಾಗದೇ ಬೆಪ್ಪಾಗಿದ್ದರು. ಅಷ್ಟಕ್ಕೂ ವಿಷಯ ಏನು ಗೊತ್ತಾ? ತಿಳಿಯಲು ಕೆಳಗಡೆ ಓದಿ

ಒಮ್ಮೆ ಸಂಸತ್ತಿನಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ವಾಜಪೇಯಿ ರವರು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರುತ್ತಿದ್ದರು. ಅದೇ ಸಮಯದಲ್ಲಿ ಮಾತನಾಡುವಾಗ ಕಾಂಗ್ರೆಸ್ ಪಕ್ಷದ ಅರ್ಧದಷ್ಟು ಸದಸ್ಯರು ಮೂರ್ಖರು ಎಂದರು, ಒಮ್ಮೆಲೇ ಸಂಸತ್ ನಲ್ಲಿ ಬಾರಿ ಕೋಲಾಹಲ ಸೃಷ್ಟಿಯಾಯಿತು. ಕಾಂಗ್ರೆಸ್ ಪಕ್ಷದ ನಾಯಕರು ರೆಕಾರ್ಡ್ ಇಂದ ಈ ಮಾತನ್ನು ತೆಗೆಯಬೇಕು ಹಾಗೂ ಈ ಕೂಡಲೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಅಧ್ಯಕ್ಷರು ಕೂಡ ವಾಜಪೇಯಿ ರವರನ್ನು ಕ್ಷಮೆ ಕೇಳುವಂತೆ ಆದೇಶ ಹೊರಡಿಸಿದರು. ಕೂಡಲೇ ಕ್ಷಮೆ ಕೇಳಿದ ವಾಜಪೇಯಿ ರವರು, ನಾನು ನನ್ನ ಮಾತನ್ನು ವಾಪಸ್ಸು ತೆಗೆದುಕೊಳ್ಳುತ್ತೇನೆ, ಕಾಂಗ್ರೆಸ್ ಪಕ್ಷದ ಅರ್ಧದಷ್ಟು ಸದಸ್ಯರು ಮೂರ್ಖರಲ್ಲ ಎಂದರು.
ವಿಪರ್ಯಾಸವೆಂದರೇ ಮತ್ತೊಮ್ಮೆ ಸಂಸತ್ ನಗುವಿನಲ್ಲಿ ತೇಲಾಡಿತು. ಕಾಂಗ್ರೆಸ್ ಪಕ್ಷದ ಕೆಲವು ನಾಯಕರಿಗೆ ಇದು ಅರ್ಥ ವಾದರೂ ಏನು ಮಾಡಲು ಸಾಧ್ಯವಿರಲಿಲ್ಲ ಇನ್ನು ಕೆಲವರು ಕ್ಷಮೆ ಕೇಳಿದ್ದಾರೆ ಎಂದು ಸುಮ್ಮನಾದರು.

Facebook Comments

Post Author: RAVI