ಬಿಜೆಪಿ ಫುಲ್ ಕುಶ್ ! ಸೋನಿಯಾ ಆಟ ಶುರು ಇಕ್ಕಟ್ಟಿಗೆ ಸಿಲುಕಿದ ಶಿವಸೇನಾ ! ಕಾಂಗ್ರೆಸ್ ನಡೆ ಅನುಸರಿಸಿದರೇ ಶಿವಸೇನಾ ಪರಿಸ್ಥಿತಿ ಏನಾಗಲಿದೆ ಗೊತ್ತಾ?

ಬಿಜೆಪಿ ಫುಲ್ ಕುಶ್ ! ಸೋನಿಯಾ ಆಟ ಶುರು ಇಕ್ಕಟ್ಟಿಗೆ ಸಿಲುಕಿದ ಶಿವಸೇನಾ ! ಕಾಂಗ್ರೆಸ್ ನಡೆ ಅನುಸರಿಸಿದರೇ ಶಿವಸೇನಾ ಪರಿಸ್ಥಿತಿ ಏನಾಗಲಿದೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ದೇಶದ ಎಲ್ಲೆಡೆ ಸದ್ದು ಮಾಡಿದ್ದ ಮಹಾ ಮೈತ್ರಿ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಏರಿ ಅಧಿಕಾರ ನಡೆಸುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಇದೇ ರೀತಿ ಮೈತ್ರಿ ಮಾಡಿಕೊಂಡು ಸಿದ್ದಾಂತಗಳನ್ನು ಒಪ್ಪಲಾರದೇ ಹಲವಾರು ಭಿನ್ನಮತೀಯ ಮಾತುಗಳು ಕೇಳಿಬಂದಿದ್ದ ಕಾರಣ, ಮಹಾ ರಾಷ್ಟ್ರದಲ್ಲಿಯೂ ಕೆಲವು ದಿನಗಳಲ್ಲಿಯೇ ಸಿದ್ದಾಂತಗಳ ಆದರದ ಮೇಲೆ ಇಕ್ಕಟ್ಟಿಗೆ ಸಿಲುಕಲಿದ್ದಾರೆ ಎಂಬ ಮಾತುಗಳು ರಾಜಕೀಯ ಪಂಡಿತರ ಬಾಯಿಂದ ಕೇಳಿ ಬಂದಿದ್ದವು.

ಹೌದು ರಾಜಕೀಯ ಪಂಡಿತರ ಲೆಕ್ಕಾಚಾರಗಳು ಇದೀಗ ಸತ್ಯವಾಗುವಂತೆ ಕಾಣುತ್ತಿವೆ. ಈಗಾಗಲೇ ಕಾಂಗ್ರೆಸ್ ಹಾಗೂ ಶಿವಸೇನಾ ಪಕ್ಷಗಳ ನಡುವೆ ಸಿದ್ದಾಂತಗಳ ವಿಚಾರದಲ್ಲಿ ಭಿನ್ನಮತೀಯ ಮಾತಿಗಳು ಕೇಳಿ ಬರಲು ಆರಂಭಿಸಿವೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಇದೀಗ ದೇಶದ ಎಲ್ಲೆಡೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲು ಬಿಜೆಪಿ ಸರ್ಕಾರ ಭರ್ಜರಿ ತಯಾರು ನಡೆಸುತ್ತಿದೆ. ಅಷ್ಟೇ ಅಲ್ಲದೇ NRC ಜಾರಿಗೆ ಕೂಡ ಬೇಕಾಗಿರುವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಎರಡು ನಿರ್ಧಾರಗಳಿಗೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸುತ್ತಿದೆ, ಅದೇ ರೀತಿ ಈ ಎರಡು ನಿರ್ಧಾರಗಳನ್ನು ಶಿವಸೇನಾ ಪಕ್ಷವು ತನ್ನ ಪ್ರಣಾಳಿಕೆಯಲ್ಲಿಯೇ ಹಾಕಿಕೊಂಡು ಮತ ಯಾಚನೆ ಮಾಡಿದೆ.

ಆದರೆ ಇದೀಗ ಮೈತ್ರಿ ಮಾಡಿಕೊಂಡಿರುವ ಕಾರಣ ಶಿವಸೇನಾ ಪಕ್ಷವು ಕಾಂಗ್ರೆಸ್ ಪಕ್ಷದ ನಿರ್ಧಾರಕ್ಕೆ ಬೆಂಬಲ ನೀಡದೇ ಬೇರೆ ವಿಧಿಯಿಲ್ಲ. ಯಾಕೆಂದರೆ ಮೊದಲಿಗೆ ಮೊನ್ನೆಯಷ್ಟೇ NRC ಹಾಗೂ ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದ್ದ ಉದ್ಧವ್ ಠಾಕ್ರೆ ರವರು ಇದೀಗ ಯು ಟರ್ನ್ ಹೊಡೆದಿದ್ದಾರೆ. ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ಹಲವಾರು ಶಿವಸೇನಾ ಬೆಂಬಲಿಗರ ಕಣ್ಣು ಕೆಂಪಗಾಗಿದೆ. ಯಾಕೆಂದರೆ ನಾವೆಲ್ಲರೂ ಮತ ನೀಡಿರುವ ಪ್ರಣಾಳಿಕೆಯನ್ನು ಉದ್ಧವ್ ಠಾಕ್ರೆ ಪಕ್ಕಕ್ಕೆ ಇತ್ತು ಅಧಿಕಾರ ನಡೆಸುತ್ತಿದ್ದಾರೆ ಎಂದು ಕೆಲವು ಶಾಸಕರು ಕೂಡ ಧ್ವನಿ ಎತ್ತಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಇದೀಗ ಉದ್ಧವ್ ಠಾಕ್ರೆ ರವರು ಕಾಂಗ್ರೆಸ್ ಹಾಗೂ ಶಿವಸೇನಾ ಸಿದ್ದಾಂತಗಳ ನಡುವೆ ಸಿಲುಕಿದ್ದಾರೆ ಮುಂದೆ ಇವರು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಶಿವಸೇನಾ ಭವಿಷ್ಯ ನಿಂತಿದೆ, ಕೊಂಚ ಯಾಮಾರಿದರೂ ಶಿವಸೇನಾ ಇಡೀ ಮಹಾ ರಾಷ್ಟ್ರಫಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬುದು ಸುಳ್ಳಲ್ಲ.