ಭಾರತೀಯ ಸೇನೆಯ ತಾಕತ್ತಿಗೆ ಮನಸೋತ ಜಪಾನ್ ! ಮನವಿ ಮಾಡಿಕೊಂಡು ಕೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಭಾರತೀಯ ಸೇನೆಯ ತಾಕತ್ತು ಇದೀಗ ಇಡೀ ವಿಶ್ವಕ್ಕೆ ತಿಳಿದಿದೆ. ನೆರೆಹೊರೆಯ ದೇಶಗಳು ಯಾವ ರೀತಿಯ ಕುತಂತ್ರಿಗಳು ಎಂದು ಇಡೀ ವಿಶ್ವಕ್ಕೆ ತಿಳಿದಿದೆ. ಆದರೂ ಕೂಡ ಭಾರತ ಕಿಂಚಿತ್ತು ಅಲುಗಾಡದೆ ಇಂದು ಸುಭದ್ರವಾಗಿದೆ ಎಂದರೆ ಅದಕ್ಕೆ ಕಾರಣ ಭಾರತೀಯ ಸೇನೆ.

ಇದೇ ಭಾರತೀಯ ಸೇನೆಯ ತಾಕತ್ತಿಗೆ ಇದೀಗ ಜಪಾನ್ ದೇಶ ಮನ ಸೋತಿದೆ. ಕಳೆದ ಕೆಲವು ದಿನಗಳ ಹಿಂದೆ ಫ್ರಾನ್ಸ್ ದೇಶದಲ್ಲಿ ಫ್ರಾನ್ಸ್ ಸೈನಿಕರ ಜೊತೆ ರಫೇಲ್ ಯುದ್ಧ ವಿಮಾನವನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳುವ ಮುನ್ನ ನಡೆದ ತಾಲೀಮಿನಲ್ಲಿ ತಮ್ಮ ತಾಕತ್ತು ಪ್ರದರ್ಶನ ಮಾಡಿದ್ದ ಭಾರತೀಯ ಸೇನೆಗೆ ಪ್ರಾನ್ಸ್ ಸರ್ಕಾರ ಮನ ಸೋತಿದ್ದ ಘಟನೆ ಇನ್ನೂ ನಮ್ಮ ಕಣ್ಣ ಮುಂದೆಯೇ ಉಳಿದಿದೆ. ಅಷ್ಟರಲ್ಲಾಗಲೇ ಮತ್ತೊಂದು ದೇಶ ಭಾರತೀಯ ಸೇನೆಯ ತಾಕತ್ತಿಗೆ ಮನಸೋತು ಮಾಡಿಕೊಂಡಿರುವ ಮನವಿಯ ಬಗ್ಗೆ ನಿಮಗೆ ತಿಳಿದರೇ ಖಂಡಿತ ನೀವು ಹೆಮ್ಮೆಯಿಂದ ಬೀಗುತ್ತೀರಿ, ಹೌದು ಇದೀಗ ಜಪಾನ್ ದೇಶದ ಸೈನಿಕರು ಭಾರತೀಯ ಸೇನೆಯ ಕದ ತಟ್ಟಿದ್ದಾರೆ. ಅಷ್ಟಕ್ಕೂ ನಡೆದದ್ದೇನು ಗೊತ್ತಾ? ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಮುಂದಿನ ವರ್ಷ ಜಪಾನ್ ದೇಶವು ಇಡೀ ವಿಶ್ವವೇ ಕಾದು ಕುಳಿತಿರುವ ಒಲಿಂಪಿಕ್ ಕ್ರೀಡಾಕೂಟವನ್ನು ಏರ್ಪಡಿಸಲಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಟೋಕಿಯೋ ನಗರದಲ್ಲಿ ಆಯೋಜನೆ ಮಾಡುತ್ತಿರುವ ಈ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಬೆದರಿಕೆಗಳು ಇರುವುದು ಅಷ್ಟಿಷ್ಟಲ್ಲ. ಅದೇ ಕಾರಣಕ್ಕೆ ಜಪಾನ್ ದೇಶವು ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜನೆ ಮಾಡಲು ಹಾಗೂ ವಿಶ್ವದ ಕೆಲವು ಉಗ್ರಗಾಮಿ ಸಂಘಟನೆಗಳಿಂದ ಒಲಂಪಿಕ್ಸ್ ಕ್ರೀಡಾಕೂಟವನ್ನು ಸುರಕ್ಷಿತವಾಗಿ ಇಡಲು ಭಾರತೀಯ ಸೇನೆಯ ಮೊರೆಹೋಗಿದೆ. ಭಾರತೀಯ ಸೇನೆಯು ಇನ್ನು ಮುಂದೆ ಜಪಾನ್ ದೇಶದ ಸೇನೆಗೆ ಭಯೋತ್ಪಾದಕರನ್ನು ತಡೆಗಟ್ಟುವುದು ಹೇಗೆ ಹಾಗೂ ಯಾವುದೇ ಕಠಿಣ ಸಂದರ್ಭವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಹೇಳಿ ಕೊಡಲಿದೆ. ಜಪಾನ್ ದೇಶದ ಸೇನೆಯು ಭಾರತೀಯ ಸೇನೆಯಿಂದ ಎಲ್ಲ ರೀತಿಯ ಪಾಠಗಳನ್ನು ಕಲಿತು ಕೊಳ್ಳಲು ಇದೀಗ ಭಾರತ ದೇಶಕ್ಕೆ ಕಾಲಿಡುತ್ತಿದೆ. ಸತ್ಯ ಹೇಳುತ್ತೇವೆ ಇದರಲ್ಲಿ ಯಾವ ರಾಜಕೀಯದ ಮಾತು ಇಲ್ಲ, ಬದಲಾಗಿ ಇದು ಕೇವಲ ಭಾರತೀಯ ಸೇನೆಯ ತಾಕತ್ತು. ಜೈ ಭಾರತ್ ಮಾತಾ, ಜೈ ಜವಾನ್, ಜೈ ಹಿಂದ್

Facebook Comments

Post Author: Ravi Yadav