ಚಿದುಗೆ ಭಾರಿ ಮುಜುಗರ ! ಆರ್ಥಿಕತೆ ವಿರುದ್ಧ ಕಿಡಿಕಾರಿದ ಚಿದಂಬರಂಗೆ ತಕ್ಕ ತಿರುಗೇಟು ನೀಡಿದ ಬಿಜೆಪಿ !

ಚಿದುಗೆ ಭಾರಿ ಮುಜುಗರ ! ಆರ್ಥಿಕತೆ ವಿರುದ್ಧ ಕಿಡಿಕಾರಿದ ಚಿದಂಬರಂಗೆ ತಕ್ಕ ತಿರುಗೇಟು ನೀಡಿದ ಬಿಜೆಪಿ !

ಇದೀಗ ದೇಶದ ಎಲ್ಲೆಡೆ ಹಲವಾರು ವಿಷಯಗಳ ನಡುವೆ ಭಾರತದ ಆರ್ಥಿಕತೆಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಕೆಲವೊಂದು ಕಂಪನಿಗಳು ನಷ್ಟದಲ್ಲಿ ತೊಡಗಿದ್ದಾರೆ ಎಂಬ ಕಾರಣಕ್ಕೆ ಭಾರತದ ಆರ್ಥಿಕತೆ ಹಳ್ಳ ಹಿಡಿದಿದೆ ಎಂಬ ಮಾತುಗಳು ಕೂಡ ಕೇಳಿಬಂದಿವೆ, ಆದರೆ ಇದು ಇಷ್ಟಕ್ಕೆ ಸೀಮಿತವಾಗಿಲ್ಲ, ಬದಲಾಗಿ ಇನ್ನೂ ಕೆಲವು ಕಂಪನಿಗಳು ಅತಿ ಹೆಚ್ಚು ಲಾಭ ಮಾಡಿರುವ ಕಾರಣ ಆರ್ಥಿಕತೆಗೆ ಯಾವುದೇ ತೊಂದರೆ ಇಲ್ಲ ಎಂದು ಪರ-ವಿರೋಧದ ಹೇಳಿಕೆಗಳು ಸಾಮಾನ್ಯವಾಗಿವೆ.

ಇದರ ನಡುವೆ ಇತ್ತೀಚೆಗಷ್ಟೇ ತಿಹಾರ್ ಜೈಲಿನಲ್ಲಿ 100 ದಿನಗಳನ್ನು ಕಳೆದು ವಾಪಸ್ಸಾಗಿರುವ ಚಿದಂಬರಂ ರವರು ಎಂದಿನಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜಾರ್ಖಂಡ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಾರ್ಖಂಡ್ ಜನತೆಯ ಕುರಿತು ಮಾತನಾಡುವಾಗ ಇದೇ ಆರ್ಥಿಕತೆಯ ವಿಚಾರವನ್ನು ಕೆಣಕಿದ ಚಿದಂಬರಂ ರವರು ಭಾರತದ ಆರ್ಥಿಕತೆ ಹಳ್ಳ ಹಿಡಿದಿದೆ, ಇದರ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ದೃಡ ನಿರ್ಧಾರ ಗಳನ್ನು ತೆಗೆದುಕೊಳ್ಳುತ್ತಿಲ್ಲ. ಹೀಗೆ ಮುಂದುವರೆದರೇ ಭಾರತ ಬಡ ರಾಷ್ಟ್ರವಾಗುತ್ತದೆ, ಭಾರತದ ಆರ್ಥಿಕತೆ ಮತ್ತಷ್ಟು ಕೆಳಮಟ್ಟಕ್ಕೆ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಕಳವಳ ವ್ಯಕ್ತಪಡಿಸಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಇದೀಗ ಇವರ ಹೇಳಿಕೆಗೆ ಪರ-ವಿರೋಧದ ಚರ್ಚೆಗಳು ಹೆಚ್ಚಾಗಿದ್ದು ಬಿಜೆಪಿ ಪಕ್ಷ ತಿರುಗೇಟು ನೀಡಿದೆ.

ಬಿಜೆಪಿ ಪಕ್ಷದ ತಿರುಗೇಟಿನಿಂದ ಚಿದಂಬರಂ ಅವರಿಗೆ ಭಾರಿ ಮುಜುಗರ ಉಂಟಾಗಿದೆ, ಆರ್ಥಿಕತೆಯ ವಿರುದ್ಧ ಕಿಡಿಕಾರಿದ ಚಿದಂಬರಂ ಅವರಿಗೆ ಬಿಜೆಪಿ ಪಕ್ಷವು ಯಾರು ಆರ್ಥಿಕತೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಭಾರತದ ವಿತ್ತ ಸಚಿವರಾಗಿ ಕೆಲಸ ಮಾಡಿದ ಚಿದಂಬರಂ ಆರ್ಥಿಕತೆಯ ಹಗರಣದಲ್ಲಿ ನೂರು ದಿನಗಳನ್ನು ತಿಹಾರ್ ಜೈಲಿನಲ್ಲಿ ಕಳೆದಿದ್ದಾರೆ, ಇವರು ಆರ್ಥಿಕತೆಯ ಬಗ್ಗೆ ಉಪನ್ಯಾಸ ನೀಡುತ್ತಿದ್ದಾರೆ. ಜಿಡಿಪಿ ದರವು ಕಡಿಮೆ ಯಾಗಿರಬಹುದು, ಆದರೆ ಮನಮೋಹನ್ ಸಿಂಗ್ರವರ ಆಡಳಿತದಲ್ಲಿ ಭಾರತ ದೇಶದ ಜಿಡಿಪಿ ಪ್ರಸ್ತುತ ಮಟ್ಟಕ್ಕಿಂತ ಬಹಳ ಕಡಿಮೆಯಾಗಿತ್ತು ಎಂದು ಹೇಳಿದೆ. ಅದರಲ್ಲಿಯೂ ಆರ್ಥಿಕ ಹಗರಣದಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ವ್ಯಕ್ತಿಯು ಭಾರತದ ಆರ್ಥಿಕತೆಯ ಬಗ್ಗೆ ಉಪನ್ಯಾಸ ನೀಡುವುದು ಬಹಳ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಪಕ್ಷದ ನಾಯಕ ಶಹದೋ ಹೇಳಿದ್ದಾರೆ.