ಮಹಾ ಮೈತ್ರಿಗೆ ಮರ್ಮಾಘಾತ: ಶಿವಸೇನಾ ಮೈತ್ರಿಗೆ ಬೇಸತ್ತ ಕಾಂಗ್ರೆಸ್ ಕೌನ್ಸಿಲರ್ ಗಳು ಮಾಡಿದ್ದೇನು ಗೊತ್ತಾ? ಮುಂಬೈನಲ್ಲಿ ಬಿಜೆಪಿಗೆ ಭರ್ಜರಿ ಗುಡ್ ನ್ಯೂಸ್ !

ಮಹಾ ಮೈತ್ರಿಗೆ ಮರ್ಮಾಘಾತ: ಶಿವಸೇನಾ ಮೈತ್ರಿಗೆ ಬೇಸತ್ತ ಕಾಂಗ್ರೆಸ್ ಕೌನ್ಸಿಲರ್ ಗಳು ಮಾಡಿದ್ದೇನು ಗೊತ್ತಾ? ಮುಂಬೈನಲ್ಲಿ ಬಿಜೆಪಿಗೆ ಭರ್ಜರಿ ಗುಡ್ ನ್ಯೂಸ್ !

ನಮಸ್ಕಾರ ಸ್ನೇಹಿತರೆ ಕಾರ್ಯಕರ್ತರು ವಲಸೆ ಹೋಗುತ್ತಿರುವ ಬೆನ್ನಲ್ಲಿ ಈಗಾಗಲೇ ಸರ್ಕಾರ ರಚನೆಮಾಡಿ ಹಲವಾರು ಸರ್ಕಾರದ ಯೋಜನೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿ ಬೀಗುತ್ತಿರುವ ಶಿವಸೇನಾ ಪಕ್ಷದ ಮಹಾಮೈತ್ರಿ ಗೆ ಇದೀಗ ಮೊದಲ ಶಾಕ್ ಎದುರಾಗಿದೆ. ಕಾಂಗ್ರೆಸ್ ಪಕ್ಷದ ಕೌನ್ಸಿಲರ್ ಶಿವಸೇನಾ ಪಕ್ಷದ ಜೊತೆ ಬೇಸರಗೊಂಡು ಯಾರು ಊಹಿಸದ ರೀತಿ ಹೆಜ್ಜೆ ಇಟ್ಟಿದ್ದಾರೆ. ಅಷ್ಟಕ್ಕೂ ನಡೆದದ್ದೇನು ಗೊತ್ತಾ? ತಿಳಿಯಲು ಒಮ್ಮೆ ಸಂಪೂರ್ಣವಾಗಿ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮುಂಬೈ ನಗರದ ಭಿಂವಾಡಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 90 ಮಂದಿ ಕೌನ್ಸಿಲರ್ ಗಳು ಇದ್ದಾರೆ. ಈ ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆ ಏರಬೇಕು ಎಂದರೇ ಕನಿಷ್ಠ 46 ಸ್ಥಾನಗಳ ಕೌನ್ಸಿಲರ್ ಗಳ ಬೆಂಬಲ ಪಡೆಯಲೇ ಬೇಕು. ಈಗಾಗಲೇ ಮಹಾರಾಷ್ಟ್ರ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಶಿವಸೇನಾ ಪಕ್ಷವು ಎನ್ಸಿಪಿ ಪಕ್ಷದ ಜೊತೆ ಮೈತ್ರಿಯನ್ನು ಮಾಡಿಕೊಂಡು ಸರ್ಕಾರ ರಚನೆ ಮಾಡಿರುವ ಕಾರಣ ಈ ಪಾಲಿಕೆಯ ಚುನಾವಣೆಯಲ್ಲಿಯೂ ಎರಡು ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದರು. ಕಾಂಗ್ರೆಸ್ ಪಕ್ಷವು ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆಯನ್ನು ಏಕಮತೀಯವಾಗಿ ಹೊಂದಿತ್ತು. ಅಂದರೆ ಕಾಂಗ್ರೆಸ್ ಪಕ್ಷ ಒಟ್ಟು 47 ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದ್ದ ಕಾರಣ ಶಿವಸೇನಾ ಪಕ್ಷದ ಜೊತೆ ಸೇರಿಕೊಂಡರೇ 12 ಸೀಟುಗಳ ಮತ್ತಷ್ಟು ಬಲದೊಂದಿಗೆ ಒಟ್ಟು 59 ಸೀಟುಗಳ ಮೂಲಕ ಸರ್ಕಾರ ರಚನೆ ಮಾಡುವ ಕನಸು ಕಂಡಿತ್ತು.

ಉಳಿದಂತೆ ಬಿಜೆಪಿ ಪಕ್ಷವು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಕಾರಣ ಒಟ್ಟು 37 ಕೌನ್ಸಿಲರ್ ಗಳ ಬೆಂಬಲವನ್ನು ಪಡೆದುಕೊಂಡು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುತ್ತದೆ ಎಂದು ಎಲ್ಲರೂ ಅಂದು ಕೊಂಡಿದ್ದರು. ಆದರೆ ಏಕಾ ಏಕಿ ಕಾಂಗ್ರೆಸ್ ಪಕ್ಷದ ಅದಿನೆಂಟು ಕೌನ್ಸೆಲರ್ ಗಳು ಶಿವಸೇನಾ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಇಚ್ಚಿಸದೆ, ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಮತ ಚಲಾವಣೆ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಪಕ್ಷವು 31 ತನ್ನ ಕೌನ್ಸಲರ್ ಗಳು ಹಾಗೂ ಅದಿನೆಂಟು ಕಾಂಗ್ರೆಸ್ ಪಕ್ಷದ ಕೌನ್ಸಿಲರ್ ಗಳ ಮತದೊಂದಿಗೆ ಒಟ್ಟು 49 ಮತಗಳನ್ನು ಪಡೆಯುವ ಮೂಲಕ ಮೇಯರ್ ಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರಿಂದ ಕಾಂಗ್ರೆಸ್ ಹಾಗೂ ಶಿವಸೇನಾ ಪಕ್ಷಗಳಿಗೆ ಭಾರಿ ಮುಜುಗರ ಉಂಟಾಗಿದ್ದು ಮುಂದೆ ಯಾವ ರೀತಿಯ ಹೆಜ್ಜೆಯನ್ನು ಇಡಲಿವೆ ಎಂಬುದನ್ನು ಕಾದುನೋಡಬೇಕಿದೆ.