ದೀಪಾವಳಿಗೆ 1.3 ಕೋ ಬಿಡುಗಡೆ ಮಾಡಿದಾಗ ರೊಚ್ಚಿಗೆದ್ದ ಸೆಲೆಬ್ರೇಟಿ, ಮೀಡಿಯಾಗಳು ಈಗ ಎಲ್ಲಿದ್ದಾರೆ?? ಇಲ್ಲಿ ಏನು ನಡೆಯುತ್ತಿದೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ರವರು ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪ ಹಚ್ಚಲು 1.3 ಕೋಟಿ ಹಣ ಬಿಡುಗಡೆ ಮಾಡಿದ್ದು ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಆದರೆ ಇದೀಗ ತೆಲಂಗಾಣದಲ್ಲಿ ನಡೆಯುತ್ತಿರುವ ಘಟನೆಯ ಕುರಿತು ಯಾರೂ ಧ್ವನಿ ಎತ್ತುತ್ತಿಲ್ಲ. ಯಾಕೆ ಎಂಬುದು ನಮ್ಮ ವಾದ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಯೋಧ್ಯೆ ಒಂದು ಪುಣ್ಯಕ್ಷೇತ್ರ, ಶ್ರೀರಾಮನ ಜನ್ಮಭೂಮಿ. ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಗಳಾಗಿರುವ ಯೋಗಿ ಆದಿತ್ಯನಾಥ್ ಅವರು ಈ ಪುಣ್ಯ ಭೂಮಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪಗಳನ್ನು ಹಚ್ಚಲು 1.3 ಕೋಟಿ ರೂ ಬಿಡುಗಡೆ ಮಾಡಿದರು. ಇದನ್ನೇ ಬಳಸಿಕೊಂಡ ಮೀಡಿಯಾಗಳು ಯೋಗಿ ಆದಿತ್ಯನಾಥ್ ಅವರು 133 ಕೋಟಿ ಹಣವನ್ನು ದೀಪ ಹಚ್ಚಲು ಬಿಡುಗಡೆ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಅದನ್ನೇ ನಂಬಿಕೊಂಡ ಸೋ ಕಾಲ್ಡ್ ಬುದ್ಧಿ ಜೀವಿಗಳು, ಸೆಲೆಬ್ರಿಟಿಗಳು ಹಾಗೂ ಮೀಡಿಯಾಗಳು ಮನಬಂದಂತೆ ಟೀಕೆ ಮಾಡಲು ಆರಂಭ ಮಾಡಿದರು. ಇದರ ಬದಲು ಊಟ ಕೊಡಬಹುದು, ವಿದ್ಯೆ ಕೊಡಬಹುದು ಹಾಗೂ ಪುಟ್ಟ ಬಾಲಕಿಯ ಹಳೆಯ ಫೋಟೋಗಳನ್ನು ಶೇರ್ ಮಾಡಿ ಇನ್ನಿಲ್ಲದ ಟೀಕೆ ಮಾಡಿದರು. ಆದರೆ ಅಲ್ಲಿನ ಸತ್ಯ 1.3 ಕೋಟಿ ಎಂಬುದು ಯಾರಿಗೂ ತಿಳಿಯಲಿಲ್ಲ, ಅಷ್ಟೇ ಅಲ್ಲದೆ ಆ ಮಣ್ಣಿನ ದೀಪಗಳನ್ನು ಹಚ್ಚುವುದರಿಂದ ಸಾವಿರಾರು ದೀಪ ಮಾರುವ ಕುಟುಂಬಗಳು ದೀಪಾವಳಿ ಆಚರಿಸಿವೆ ಎಂಬುದು ಯಾರಿಗೂ ಅರ್ಥವಾಗಲಿಲ್ಲ.

ಸರಿ ಅದು ಹೋಗಲಿ, ಆದರೆ ಇಲ್ಲಿ ತೆಲಂಗಾಣದಲ್ಲಿ ನಡೆಯುತ್ತಿರುವ ಘಟನೆಯು ಮಾತ್ರ ಯಾವ ಸೆಲೆಬ್ರಿಟಿ ಗಳಿಗೆ ಆಗಲಿ, ಬುದ್ಧಿ ಜೀವಿಗಳಿಗೆ ಆಗಲಿ ಅಥವಾ ತಾನು ಜನ ನಾಯಕ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮಾತನಾಡುವ ಯಾವುದೋ ಸಿನಿಮಾ ಹೀರೋಗಳಿಗೆ ಕಾಣಿಸುತ್ತಿಲ್ಲ. ಯಾಕೆ ಎಂಬುದು ನಮಗೆ ತಿಳಿಯುತ್ತಿಲ್ಲ !

ಹೌದು, ಸ್ನೇಹಿತರೇ ಇದೀಗ ತೆಲಂಗಾಣ ಸರ್ಕಾರ ಹೈದರಾಬಾದ್ ನಗರದಲ್ಲಿರುವ 200 ಚರ್ಚುಗಳಿಗೆ ತಲಾ 1 ಲಕ್ಷ ರೂ ನಂತೆ ಕ್ರಿಸ್ಮಸ್ ಹಬ್ಬಕ್ಕಾಗಿ ಮಂಜೂರು ಮಾಡಿದೆ. ಅಷ್ಟೇ ಅಲ್ಲದೇ ಪ್ರತಿ ಚರ್ಚಿಗೆ 500 ಉಡುಗೊರೆ ಪ್ಯಾಕ್ ಬಟ್ಟೆಗಳನ್ನು ಕಳುಹಿಸಿಕೊಟ್ಟಿದೆ. ಇದರಲ್ಲಿ ಭ್ರಷ್ಟಾಚಾರ ವಾಗಬಾರದು ಎಂಬ ಕಾರಣಕ್ಕೆ ನೇರವಾಗಿ ಸರ್ಕಾರದ ಅಕೌಂಟಿನಿಂದ ಚರ್ಚುಗಳ ಅಕೌಂಟಿಗೆ ಹಣ ಪಾವತಿ ಮಾಡಿ, ಪ್ರತಿಯೊಂದು ಡಿಸೆಂಬರ್ 5ರಿಂದ ಹತ್ತರವರೆಗೆ ಎಲ್ಲ ಉಡುಗರೆ ಪ್ಯಾಕೆಟ್ಗಳನ್ನು ತಲುಪಿಸಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಿದೆ. ಇದು ಯಾವ ಬುದ್ಧಿಜೀವಿಗಳಿಗೆ, ಜನನಾಯಕ ಎಂದುಕೊಳ್ಳುವ ಸಿನಿಮಾ ನಾಯಕರಿಗೂ ಅಥವಾ ಮೀಡಿಯಾಗಳಿಗೆ ಕಾಣಿಸುತ್ತಿಲ್ಲ ಎಂಬುದೇ ವಿಪರ್ಯಾಸ.

Facebook Comments

Post Author: Ravi Yadav