ಸದಾ ಭಾರತದ ಕೈ ಹಿಡಿಯುವ ಆಪ್ತ ಮಿತ್ರ ಇಸ್ರೇಲ್ ದೇಶಕ್ಕೆ ಉದ್ಧವ್ ಠಾಕ್ರೆ ಮಾಡಲು ಹೊರಟಿರುವುದು ಏನು ಗೊತ್ತಾ?

ಸದಾ ಭಾರತದ ಕೈ ಹಿಡಿಯುವ ಆಪ್ತ ಮಿತ್ರ ಇಸ್ರೇಲ್ ದೇಶಕ್ಕೆ ಉದ್ಧವ್ ಠಾಕ್ರೆ ಮಾಡಲು ಹೊರಟಿರುವುದು ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತ ದೇಶವು ಇಸ್ರೇಲ್ ದೇಶದೊಂದಿಗೆ ಯಾವ ರೀತಿಯ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂಬುದನ್ನು ನಿಮಗೆ ವಿವರಿಸಬೇಕಾದ ಅಗತ್ಯವಿಲ್ಲ ಎನಿಸುತ್ತದೆ. ಭಾರತ ದೇಶದೊಂದಿಗೆ ಹಲವಾರು ಒಪ್ಪಂದಗಳನ್ನು ಮಾಡಿಕೊಂಡಿರುವ ಇಸ್ರೇಲ್ ದೇಶವು ತನ್ನ ಆಂತರಿಕ ವಿಷಯಗಳನ್ನು ಕೂಡ ಯಾವುದೇ ಭೀತಿಯಿಲ್ಲದೆ ಹಂಚಿಕೊಂಡು ಭಾರತೀಯ ಸೇನೆಗೆ ಬಲಿಷ್ಠವಾದ ಶಸ್ತ್ರಾಸ್ತ್ರಗಳನ್ನು ರವಾನೆ ಮಾಡುತ್ತಿರುತ್ತದೆ.

ಇಸ್ರೇಲ್ ದೇಶ ಒಂದು ಪುಟ್ಟ ರಾಷ್ಟ್ರವಾಗಿದ್ದರೂ ಕೂಡ ವಿಶ್ವಮಟ್ಟದಲ್ಲಿ ತನ್ನ ಟೆಕ್ನಾಲಜಿಯಿಂದ ತನ್ನದೇ ಆದ ಛಾಪು ಮೂಡಿಸಿದೆ, ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. ಇಡೀ ಪ್ರದೇಶದಲ್ಲಿ ಅತ್ಯಾಧುನಿಕ ಟೆಕ್ನಾಲಜಿಯ ಮೂಲಕ ಕೃಷಿ ಕ್ಷೇತ್ರದಿಂದ ಹಿಡಿದು ರಕ್ಷಣಾ ಕ್ಷೇತ್ರದವರಿಗೂ ವಿಶ್ವವೇ ಬೆರಗು ಮೂಡುವಂತಹ ಸಾಧನೆಗಳನ್ನು ಮಾಡಿದೆ. ಇಂತಹ ಇಸ್ರೇಲ್ ದೇಶ ಭಾರತದ ಆಪ್ತ ಮಿತ್ರ ರಾಷ್ಟ್ರ ಎಂದು ಕರೆಸಿಕೊಂಡಿದೆ, ಈ ದೇಶ ಕೆಲವು ತಿಂಗಳುಗಳ ಹಿಂದೆ ಮಹಾರಾಷ್ಟ್ರದಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಿ ಭಾರತದ ಕಠಿಣ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿತ್ತು. ಹೌದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ದೇಶದಲ್ಲಿ ಜನಸಂಖ್ಯೆ ಹೆಚ್ಚು, ನೀರು ಹೆಚ್ಚಾಗಿ ಬೇಕಾಗುತ್ತದೆ‌. ಬರೋಬ್ಬರಿ 7800 ಕಿಲೋಮೀಟರ್ ಸಮುದ್ರ ತೀರವನ್ನು ಭಾರತ ಹೊಂದಿರುವ ಕಾರಣ ಒಂದು ವೇಳೆ ಭಾರತದೇಶವು ಸಮುದ್ರದ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ ಭಾರತ ದೇಶವು ಬರಗಾಲವನ್ನು ನೋಡುವ ಸಾಧ್ಯತೆಯೇ ಬರುವುದಿಲ್ಲ.

ಇದೇ ಕಾರಣಕ್ಕಾಗಿ ಸಮುದ್ರ ನೀರನ್ನು ಕುಡಿಯುವ ನೀರಿಗೆ ಹಾಗೂ ಕೃಷಿ ನೀರಾಗಿ ಪರಿವರ್ತನೆ ಮಾಡಲು ಇಸ್ರೇಲ್ ಸರ್ಕಾರ ಮುಂದಾಗಿತ್ತು. ಮಹಾರಾಷ್ಟ್ರ ರಾಜ್ಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದ ಇಸ್ರೇಲ್ ದೇಶವು ಸಾವಿರಾರು ಕೋಟಿ ರೂ ಗಳನ್ನು ಹೂಡಿಕೆ ಮಾಡಿ Desalination (ಡಜಲಿಕರಣ) ಎಂಬ ಟೆಕ್ನಾಲಜಿಯಿಂದ ಸಮುದ್ರದ ನೀರನ್ನು ಪರಿವರ್ತನೆ ಮಾಡಿ ದೇಶದ ವಿವಿಧ ಭಾಗಗಳಿಗೆ ಪೈಪುಗಳ ಮೂಲಕ ಸರಬರಾಜು ಮಾಡುವ ಯೋಜನೆ ಇದಾಗಿತ್ತು. ಆದರೆ ಈ ಮಿತ್ರ ದೇಶಕ್ಕೆ ಇದೀಗ ಉದ್ಧವ್ ಠಾಕ್ರೆ ಅವರು ಶಾಕ್ ನೀಡಲು ಮುಂದಾಗಿದ್ದಾರೆ. ಈಗಾಗಲೇ ಈ ಯೋಜನೆಗಾಗಿ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿರುವ ಎರಡು ದೇಶಗಳ ನಡುವಿನ ಒಪ್ಪಂದವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ನಡೆಸಬಾರದು ಎಂಬ ಆದೇಶ ಹೊರಡಿಸಲು ಮುಂದಾಗಿದ್ದಾರೆ. ಒಂದು ವೇಳೆ ಇದೇ ನಡೆದಲ್ಲಿ ಭಾರತದಿಂದ ಯೋಜನೆ ಕೈತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ. ಅಳೆದೂ ತೂಗಿ ಇಸ್ರೇಲ್ ದೇಶವು ತನಗೆ ಬೇಕಾದ ಸೌಲಭ್ಯಗಳು ಇರುವಂತಹ ಪ್ರದೇಶವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಆಯ್ಕೆ ಮಾಡಿತ್ತು. ಆದರೆ ಇದೀಗ ಉದ್ದ ಹಾಕ್ರಿ ರವರು ಒಪ್ಪಂದವನ್ನು ಮುರಿಯುವ ಸಾಹಸಕ್ಕೆ ಕೈಹಾಕಿದ್ದಾರೆ. ಕಾರಣ ಇನ್ನೂ ತಿಳಿದುಬಂದಿಲ್ಲ.