ಶಿವಾಜಿ, ವೀರ ಸಾವರ್ಕರ್ ಅವರನ್ನು ಮರೆತ ನಂತರ ಇದೀಗ ದೇಶಭಕ್ತಿಯನ್ನು ಮರೆತ ಶಿವಸೇನೆ ! ಮಾಡಿದ್ದೇನು ಗೊತ್ತಾ?? ಭಾರೀ ಆಕ್ರೋಶ.

ನಮಸ್ಕಾರ ಸ್ನೇಹಿತರೇ, ಶಿವಸೇನಾ ಪಕ್ಷವು ಇದೀಗ ತನ್ನ ಮೂಲ ಸಿದ್ಧಾಂತಗಳಿಂದ ಸಂಪೂರ್ಣವಾಗಿ ಹೊರ ಬಂದಿದ್ದು, ಕೇವಲ ಅಧಿಕಾರಕ್ಕಾಗಿ ತನ್ನ ಎಲ್ಲಾ ಸಿದ್ಧಾಂತಗಳನ್ನು ಬದಲಾಯಿಸಿಕೊಳ್ಳಲು ಸಿದ್ಧವಾಗಿ ಅಧಿಕಾರದ ಗದ್ದುಗೆ ಏರಿದೆ. ಮೊದಲು ಇಡೀ ದೇಶದಲ್ಲಿ ಸದ್ದು ಮಾಡಿದ ವೀರ ಸಾವರ್ಕರ್ ರವರಿಗೆ ಭಾರತ ರತ್ನ ನೀಡುವ ವಿಚಾರದಲ್ಲಿ ಅವರನ್ನು ಕೈಬಿಟ್ಟಿದ್ದ ಶಿವಸೇನೆ ಇದೀಗ ದೇಶಭಕ್ತಿಯನ್ನು ಸಹ ಬಿಟ್ಟಂತೆ ಕಾಣುತ್ತಿದೆ.

ಚುನಾವಣೆಯ ಸಮಯದಲ್ಲಿ ವೀರ ಸಾರ್ವರ್ಕರ್ ರವರಿಗೆ ಭಾರತ ರತ್ನ ನೀಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಜೈ ಎಂದಿದ್ದ ಶಿವಸೇನ ಪಕ್ಷವು ತದನಂತರ ಕಾಂಗ್ರೆಸ್ ಪಕ್ಷದ ನಿಲುವಿಗೆ ಒಪ್ಪಿಕೊಂಡು ವೀರ ಸಾವರ್ಕರ್ ಅವರಿಗೆ ಭಾರತರತ್ನ ನೀಡುವುದು ದೇಶದಲ್ಲಿ ಶಾಂತಿ ಕದಡುವ ಸಾಧ್ಯತೆ ಇದೆ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿತ್ತು. ಅಷ್ಟೇ ಅಲ್ಲದೆ ಶಿವಾಜಿ ಮಹಾರಾಜರ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇವೆಂದು ಪಕ್ಷ ನಡೆಸುತ್ತಿದ್ದ ಶಿವಸೇನಾ ಪಕ್ಷವು, ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಹಿಂದುತ್ವದ ಹೇಳಿಕೆಗಳನ್ನು ಬಹಿರಂಗವಾಗಿ ನೀಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ವಿಧಿಸಿದ್ದ ಶರತ್ತಿಗೆ ಒಪ್ಪಿಗೆ ನೀಡಿತ್ತು. ಇದೀಗ ಇದೇ ರೀತಿ ಮತ್ತೊಂದು ಹೆಜ್ಜೆ ಇಟ್ಟಿರುವ ಶಿವಸೇನಾ ಪಕ್ಷವು ಹಲವಾರು ವರ್ಷಗಳಿಂದ ನಡೆದು ಕೊಂಡು ಬಂದ ಸಂಪ್ರದಾಯವನ್ನು ಮುರಿದಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಪ್ರತಿ ಸದನ ಆರಂಭವಾಗುವ ಮುನ್ನ ಇಷ್ಟು ದಿವಸ ಮಹಾರಾಷ್ಟ್ರ ರಾಜ್ಯದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಲಾಗುತ್ತಿತ್ತು. ಆದರೆ ಈ ಬಾರಿ ಈ ನಿಯಮವನ್ನು ಉಲ್ಲಂಘಿಸಲಾಗಿದೆ. ಇದರಿಂದ ಕುಪಿತ ಗೊಂಡಿರುವ ಮಾಜಿ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ರವರು, ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಿದ ತಕ್ಷಣ ವಂದೇ ಮಾತರಂ ಗೀತೆಯನ್ನು ನಿಲ್ಲಿಸಲು ಆದೇಶ ಹೊರಡಿಸಿದ್ದ ಸನ್ನಿವೇಶವನ್ನು ನೆನೆಸಿಕೊಂಡು ಶಿವಸೇನಾ ಪಕ್ಷವು ಇದೇ ಕಾರಣಕ್ಕಾಗಿ ವಂದೇ ಮಾತರಂ ಗೀತೆಯನ್ನು ಹಾಡಿಲ್ಲ ಎಂದು ಕಿಡಿಕಾರಿ ಸಭಾ ತ್ಯಾಗ ಮಾಡಿದ್ದಾರೆ. ಶಿವಸೇನೆಯ ಈ ನಿರ್ಧಾರಕ್ಕೆ ಇಡೀ ದೇಶದಲ್ಲಿ ಭಾರೀ ಆಕ್ರೋಶ ಕೇಳಿ ಬಂದಿದ್ದು, ಈ ದೇಶಭಕ್ತಿ ಗೀತೆಯನ್ನು ಕೇವಲ ಮಹಾರಾಷ್ಟ್ರದಲ್ಲಿ ಮಾತ್ರವಲ್ಲ ಬೇರೆ ಎಲ್ಲ ರಾಜ್ಯಗಳಲ್ಲಿಯೂ ಪ್ರತಿಯೊಂದು ಆಗುವ ಮುನ್ನ ಹಾಡಬೇಕು ಎಂಬ ಕಾನೂನನ್ನು ಕೇಂದ್ರ ಸರ್ಕಾರ ಹೊರಡಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

Facebook Comments

Post Author: Ravi Yadav