ಸಂಜಯ್ ರಾವತ್ ಗೆ ಭಾರಿ ಮುಖಭಂಗ ! ಗೋವಾದಲ್ಲಿ ಸರ್ಕಾರ ರಚಿಸಿ ಬಿಜೆಪಿಗೆ ಶಾಕ್ ನೀಡುತ್ತೇವೆ ಎಂದ ಸಂಜಯ್ ರಾವತ್ ಗೆ ಶಾಕ್ ನೀಡಿದ ಕಾಂಗ್ರೆಸ್ !

ಓದುಗರೇ, ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಎಂಬ ಸುನಾಮಿಗೆ ಇಡೀ ದೇಶದಲ್ಲಿ ಹಲವಾರು ಪಕ್ಷಗಳು ಕೊಚ್ಚಿಕೊಂಡು ಹೋಗಿವೆ. ನೂರು ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷವು ಕೂಡ ಅಧಿಕಾರದ ಗದ್ದುಗೆ ಬಿಡಿ ಕೇವಲ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಶಿವಸೇನಾ ಪಕ್ಷದ ನಾಯಕ ಒಂದು ಹೇಳಿಕೆ ನೀಡುವ ಮೂಲಕ ಭಾರಿ ನಗೆಪಾಟಲಿಗೆ ಗುರಿಯಾಗಿದ್ದರು.

ಮಹಾರಾಷ್ಟ್ರ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದ ನಂತರ ನಾವು ದೆಹಲಿಯ ಗದ್ದುಗೆ ಏರಿದರು ಕೂಡ ಅಚ್ಚರಿ ಪಡಬೇಡಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತೇವೆ ಎಂದು ಹೇಳಿಕೆ ನೀಡಿದ ಕಾರಣ, ಶಿವಸೇನಾ ಪಕ್ಷದ ನಾಯಕನನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಟ್ರೋಲ್ ಗಳನ್ನು ಮಾಡಿದ್ದರು. ಇಷ್ಟು ಸಾಲದು ಎಂಬಂತೆ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು, ಗೋವಾ ರಾಜಕಾರಣದಲ್ಲಿ ನಾವು ಎಂಟ್ರಿ ಕೊಡುತ್ತೇವೆ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೆಳಗೆ ತಿಳಿಸುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದರು. ಈ ಹೇಳಿಕೆಯನ್ನು ಹಲವಾರು ಜನ ಟ್ರೋಲ್ ಮಾಡಿದ್ರು ಕೂಡ, ಬಹುಶಃ ಕಾಂಗ್ರೆಸ್ ಪಕ್ಷದ ಜೊತೆ ಶಿವಸೇನೆ ಕೈಜೋಡಿಸಿ ಶಾಸಕರನ್ನು ಸೆಳೆಯುವ ಕೆಲಸ ಮಾಡಲಿದೆ ಎಂದು ಕೊಂಡಿದ್ದರು.

ಆದರೆ ಇದೀಗ ಸಂಜಯ್ ರಾವತ್ ರವರಿಗೆ ಗೋವಾ ಕಾಂಗ್ರೆಸ್ ದೊಡ್ಡ ಶಾಕ್ ನೀಡಿದೆ. ಸಂಜಯ್ ರಾವತ್ ರವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ, ಗೋವಾ ಕಾಂಗ್ರೆಸ್ ನಾವು ಗೋವಾ ರಾಜ್ಯದಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತು ಕೊಂಡಿದ್ದೇವೆ. ಇನ್ನು ಮುಂದೆ ಕೂಡ ನಾವು ವಿರೋಧ ಪಕ್ಷ ಸ್ಥಾನದಲ್ಲಿಯೇ ಇರುತ್ತೇವೆ, ಅಧಿಕಾರದ ಅವಧಿ ಮುಗಿದು, ಮುಂದಿನ ಚುನಾವಣೆ ಬರುವವರೆಗೂ ನಮ್ಮ ಸ್ಥಾನದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಟಾಂಗ್ ನೀಡಿದ್ದಾರೆ. ಈಗಾಗಲೇ 40 ಶಾಸಕರಲ್ಲಿ 30 ಶಾಸಕರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ, ಕೇವಲ 10 ಶಾಸಕರನ್ನು ಇಟ್ಟುಕೊಂಡು ನಾವು ಸರ್ಕಾರ ರಚಿಸುವುದು ಹೇಗೆ ಸಾಧ್ಯ. ಎಂದು ಸಂಜಯ್ ರಾವತ್ ಅವರಿಗೆ ತಿರುಗೇಟು ನೀಡಿದ್ದಾರೆ. ಇದರಿಂದ ಗೋವಾ ರಾಜ್ಯದಲ್ಲಿಯೂ ಕೂಡ ತನ್ನ ರಾಜಕೀಯ ಆರಂಭಿಸುವ ಕನಸು ಕಂಡಿದ್ದ ಸಂಜಯ್ ರಾವತ್ ರವರಿಗೆ ಭಾರಿ ಮುಜುಗರ ಉಂಟಾಗಿದೆ.

Facebook Comments

Post Author: Ravi Yadav