ಓಲಾ, ಉಬೇರ್ ಕ್ಯಾಬ್ ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾದ ನರೇಂದ್ರ ಮೋದಿ ! ಕ್ಯಾಬ್ ಚಾಲಕರೇ ಚಿಂತೆ ಬಿಡಿ !

ನಮಸ್ಕಾರ ಸ್ನೇಹಿತರೆ ಇಂದು ಕ್ಯಾಬ್ ಗಳನ್ನು ನಂಬಿಕೊಂಡು ಲಕ್ಷಾಂತರ ಚಾಲಕರು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಕ್ಯಾಬ್ ಗಳನ್ನು ಜನರಿಗೆ ಹುಡುಕುವುದು ಬಹಳ ಕಷ್ಟವಾಗಿತ್ತು, ಅದೇ ರೀತಿ ಕ್ಯಾಬ್ ಗಳನ್ನು ನಂಬಿಕೊಂಡು ಬದುಕುವುದು ಚಾಲಕರಿಗೆ ಮತ್ತಷ್ಟು ಕಷ್ಟದ ಜೀವನವಾಗಿತ್ತು. ಆದರೆ ಈ ಗ್ರಾಹಕ ಹಾಗೂ ಚಾಲಕರ ನಡುವಿನ ಸ್ಥಾನವನ್ನು ತುಂಬಿದ್ದು ಓಲಾ ಹಾಗೂ ಉಬೇರ್ ಕಂಪನಿಗಳು.

ಇಂದು ಈ ಎರಡು ಕಂಪನಿಗಳಲ್ಲಿ ದಿನಕ್ಕೆ ಕನಿಷ್ಠ 10 ಲಕ್ಷ ಮಂದಿ ಕ್ಯಾಬ್ ಗಳನ್ನು ಹತ್ತುತ್ತಾರೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಬಹುತೇಕ ಪ್ರತಿಷ್ಠಿತ ನಗರಗಳಲ್ಲಿ ಕ್ಯಾಬ್ ಸೇವೆಗಳು ಲಭ್ಯವಿದ್ದು, ಕೋಟ್ಯಂತರ ಚಾಲಕರು ಈ ಎರಡು ಕಂಪನಿಗಳನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಈ ಕ್ಯಾಬ್ ಕಂಪನಿಗಳು ಇತ್ತೀಚೆಗೆ ಚಾಲಕರನ್ನು ಹಾಗೂ ಗ್ರಾಹಕರನ್ನು ದೋಚಿಕೊಳ್ಳಲು ಆರಂಭಿಸಿವೆ. ಗ್ರಾಹಕರು ನೀಡಿದ ಹಣದಲ್ಲಿ ಶೇಕಡ 20 ರಷ್ಟು ಹಣವನ್ನು ಕ್ಯಾಬ್ ಕಂಪನಿಗಳು ಕೇವಲ ಮೆಂಟೇನೆನ್ಸ್ ಹಾಗೂ ಇನ್ನಿತರ ಸೌಲಭ್ಯಗಳಿಗಾಗಿ ಕಡಿತ ಮಾಡಿ ಚಾಲಕರಿಗೆ ಶೇಕಡ 80 ರಷ್ಟು ಹಣವನ್ನು ನೀಡುತ್ತಾರೆ. ಚಾಲಕರೇ ದುಡಿದಿರುವ ಸಂಪೂರ್ಣ ಹಣವನ್ನು ಕೇವಲ ಮೆಂಟೇನೆನ್ಸ್ ಹೆಸರಿನಲ್ಲಿ ಶೇಕಡ 20ರಷ್ಟು ಪಡೆಯುವುದು ನಿಜಕ್ಕೂ ಆಘಾತಕಾರಿ ವಿಷಯ. ಇದೇ ಕಾರಣಕ್ಕೆ ಇದೀಗ ನರೇಂದ್ರ ಮೋದಿರವರು ಮತ್ತೊಂದು ಕಠಿಣ ನಿರ್ಧಾರಕ್ಕೆ ಕೈಹಾಕಿದ್ದಾರೆ.

ಇದೀಗ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಲು ಸಿದ್ಧವಾಗಿದ್ದು, ಇನ್ನು ಮುಂದೆ ಯಾವುದೇ ಕ್ಯಾಬ್ ನಿರ್ವಹ ಕಂಪನಿಗಳು ಚಾಲಕರಿಗೆ ಕನಿಷ್ಠ ಅವರು ದುಡಿದ ಹಣದ 90 ರಷ್ಟು ಭಾಗವನ್ನು ನೀಡಬೇಕು ಎಂಬ ಕಾನೂನನ್ನು ಹೊರಡಿಸಲು ತಯಾರಿ ನಡೆಸುತ್ತಿದೆ. ಇದರಿಂದ ಇನ್ನು ಮುಂದೆ ಓಲಾ ಹಾಗೂ ಉಬರ್ ಕಂಪನಿ ಗಳಂತೆ ಇನ್ನುಳಿದ ಕಂಪನಿಗಳು ಕೂಡ ತನ್ನ ಭಾಗವನ್ನು ಗರಿಷ್ಠ ಶೇಕಡ 10ರಷ್ಟು ಮಾತ್ರ ಉಳಿಸಿಕೊಳ್ಳಬೇಕು, ಉಳಿದ ಶೇಕಡಾ 90 ರಷ್ಟು ಹಣವನ್ನು ಚಾಲಕರಿಗೆ ನೀಡಬೇಕು ಎಂದು ಆದೇಶ ಹೊರಡಿಸಲು ಸಿದ್ಧವಾಗಿದೆ. ಇದರಿಂದ ಸಾಮಾನ್ಯವಾಗಿ ಕಂಪನಿಗಳ ಲಾಭಾಂಶ ತಗ್ಗಲಿದೆ ಎಂಬುದು ಸರ್ಕಾರಕ್ಕೆ ತಿಳಿದಿದೆ. ಆದರೆ ಇದರಿಂದ ಯಾವುದೇ ನಷ್ಟವಾಗುವುದಿಲ್ಲ ಎಂಬ ವಾದವನ್ನು ಕೇಂದ್ರ ಸರ್ಕಾರ ಕಾನೂನಿನಲ್ಲಿ ನಮೂದಿಸಲು ಸಿದ್ಧವಾಗಿ ಈ ಕಠಿಣ ನಿರ್ಧಾರದತ್ತ ಗಮನ ಹರಿಸಿದೆ.

Facebook Comments

Post Author: Ravi Yadav