ಸ್ಪೋಟಗೊಂಡ ಭಿನ್ನಮತ- ಮೈತ್ರಿ ಗಳಲ್ಲಿ ಮತ್ತೊಂದು ಅಪಸ್ವರ ! ಬಿಜೆಪಿ ಅಂತೂ ಫುಲ್ ಖುಷ್ ! ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತಾ??

ಇಂದಿನ ರಾಜಕೀಯ ಬೆಳವಣಿಗೆಗಳಲ್ಲಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವುದು ಬಹಳ ಕ್ಲಿಷ್ಟಕರವಾಗಿದೆ. ಆದರೆ ಇದೀಗ ಮಹಾರಾಷ್ಟ್ರದಲ್ಲಿ ಬದ್ಧ ರಾಜಕೀಯ ವಿರೋಧಿಗಳಾಗಿದ್ದ ಶಿವಸೇನಾ, ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿವೆ. ಇನ್ನು ಸರ್ಕಾರ ರಚಿಸಿ ಬಹುಮತ ಸಾಬೀತುಗೂ ಮುನ್ನವೇ ಈ ಮೂರು ಮೈತ್ರಿ ಪಕ್ಷಗಳಲ್ಲಿ ಭಿನ್ನಮತ ಭುಗಿಲೆದ್ದಿದೆ.

ಈ ಮೂರು ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಮುಂದಾದಾಗ, ರಾಜಕೀಯ ಪಂಡಿತರು ಭಿನ್ನಮತಗಳ ಲೆಕ್ಕಾಚಾರಗಳನ್ನು ಹಾಕಿದ್ದರು. ಆದರೆ ಮೂರು ಪಕ್ಷಗಳು ಒಗ್ಗಟ್ಟಿನ ಮಂತ್ರವನ್ನು ಹೇಳಿ, ತಮ್ಮ ಮೂಲ ಸಿದ್ಧಾಂತಗಳಿಂದ ಹೊರ ಬಂದು ಮೈತ್ರಿಯ ಮೂಲಕ ಮಹಾರಾಷ್ಟ್ರ ರಾಜ್ಯದ ಅಭಿವೃದ್ಧಿ ಮಾಡುತ್ತೇವೆ ಎಂದು ಅಧಿಕಾರದ ಗದ್ದುಗೆ ಏರಿದರು. ಆದರೆ ಇದೀಗ ಈ ಎಲ್ಲಾ ಲೆಕ್ಕಾಚಾರಗಳು ಸತ್ಯ ವಾದಂತೆ ಕಾಣುತ್ತಿದೆ. ಈಗಾಗಲೇ ಹಲವು ಲೆಕ್ಕಾಚಾರಗಳ ನಡುವೆ ಮೂರು ಪಕ್ಷಗಳ ನಡುವೆ ಅಧಿಕಾರ ಹಂಚಿಕೆಯಾಗಿದೆ. ಹಲವಾರು ಸಭೆಗಳ ಬಳಿಕ ಕೊನೆಗೂ ಸ್ಥಾನಕ್ಕೆ ಉದ್ಧವ್ ಠಾಕ್ರೆ, ಡಿಸಿಎಂ ಸ್ಥಾನ ಎನ್ಸಿಪಿ ಪಕ್ಷಕ್ಕೆ ಹಾಗೂ ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಒಪ್ಪಿಗೆ ನೀಡಿತ್ತು. ಉಳಿದಂತೆ ಪಕ್ಷಗಳ ಆಧಾರಿತ ಸಚಿವ ಸ್ಥಾನಗಳು ಕೂಡ ಫೈನಲ್ ಆಗಿದ್ದವು. ಆದರೆ ಇದೀಗ ಮತ್ತೊಂದು ಭಿನ್ನಮತೀಯ ಒತ್ತಾಯ ಕೇಳಿಬಂದಿದೆ.

ಇದೀಗ ಕಾಂಗ್ರೆಸ್ ಪಕ್ಷವು ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ, ಮೊದಲು ಎರಡು ಉಪ ಮುಖ್ಯಮಂತ್ರಿಗಳು ಎಂದಿದ್ದ ಸರ್ಕಾರದಲ್ಲಿ ಕೊನೆಗೆ ಒಂದೇ ಉಪಮುಖ್ಯಮಂತ್ರಿ ಹುದ್ದೆ ಎಂದು ಫಿಕ್ಸ್ ಮಾಡಲಾಗಿತ್ತು. ಕೊನೆಗೆ ಕಾಂಗ್ರೆಸ್ ಪಕ್ಷ ಸ್ಪೀಕರ್ ಸ್ಥಾನಕ್ಕೆ ಒಪ್ಪಿಕೊಂಡಿತ್ತು, ಆದರೆ ಇದೀಗ ಕಾಂಗ್ರೆಸ್ ಪಕ್ಷವು ಉಪ ಮುಖ್ಯಮಂತ್ರಿ ಸ್ಥಾನ ಬೇಕು ಎಂದು ಪಟ್ಟುಹಿಡಿದಿದೆ. ಇವರ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿರುವ ಅಜಿತ್ ಪವಾರ್ ಅವರು, ಮೂರು ಪಕ್ಷಗಳು ಮಾಡಿಕೊಂಡ ಒಪ್ಪಂದದ ಪ್ರಕಾರ ಉಪ ಮುಖ್ಯಮಂತ್ರಿ ಸ್ಥಾನ ನಮಗೆ ದಕ್ಕಬೇಕು. ಕಾಂಗ್ರೆಸ್ ಪಕ್ಷವು ಮೊದಲೇ ಒಪ್ಪಿಕೊಂಡಂತೆ ಸ್ಪೀಕರ್ ಸ್ಥಾನಕ್ಕೆ ತೃಪ್ತಿಪಟ್ಟರು ಒಳಿತು ಎಂದು ಬಹಿರಂಗವಾಗಿ ಖಡಕ್ ಹೇಳಿಕೆ ನೀಡಿದ್ದಾರೆ. ಇದೀಗ ಈ ಭಿನ್ನಮತ ಹೊರಬಿದ್ದಿದ್ದು, ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Facebook Comments

Post Author: Ravi Yadav