ಗೋಡ್ಸೆ ಕುರಿತು ಹೇಳಿಕೆ ನೀಡಿದ್ದ ಪ್ರಜ್ಞಾ ಸಿಂಗ್ ರವರಿಗೆ ಬಿಜೆಪಿ ಪಕ್ಷ ಮಾಡಿದ್ದೇನು ಗೊತ್ತಾ?

ಬಿಜೆಪಿ ಪಕ್ಷದ ಸಂಸದೆ ಪ್ರಜ್ಞಾ ಸಿಂಗ್ ರವರನ್ನು ಇದೀಗ ಬಿಜೆಪಿ ಪಕ್ಷ ಮತ್ತಷ್ಟು ಗಂಭೀರವಾಗಿ ತೆಗೆದುಕೊಂಡಿದೆ. ಇತ್ತೀಚಿಗೆ ಪ್ರಜ್ಞಾ ಸಿಂಗ್ ರವರ ನಡವಳಿಕೆ ಬಿಜೆಪಿ ಪಕ್ಷದ ಹೈ ಕಮಾಂಡ್ ಗೆ ಅಷ್ಟಾಗಿ ಇಷ್ಟವಾಗುತ್ತಿಲ್ಲ. ಬಲಾಢ್ಯ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ರವರ ವಿರುದ್ಧ ಜಯಭೇರಿ ಬಾರಿಸಿ ಸಂಸತ್ ಪ್ರವೇಶ ಪಡೆಸಿರುವ ಪ್ರಜ್ಞಾ ಸಿಂಗ್ ರವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿ ಇದ್ದಾರೆ.

ಕಳೆದ ಕೆಲವು ಗಂಟೆಗಳ ಹಿಂದಷ್ಟೇ ನಡೆದ ಲೋಕಸಭಾ ಅಧಿವೇಶನದಲ್ಲಿ ಪ್ರಜ್ಞಾ ಸಿಂಗ್ ರವರು ಭಾಷಣ ಮಾಡುವ ಅವಕಾಶವನ್ನು ಪಡೆದು ಕೊಂಡಿದ್ದರು. ಮಾತನಾಡುವ ವೇಳೆ ಪ್ರಜ್ಞಾ ಸಿಂಗ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಗಾಂಧೀಜಿ ರವರನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ರವರನ್ನು ದೇಶ ಭಕ್ತ ಎಂದಿದ್ದರು. ಈ ಹಿಂದೆಯೂ ಈ ರೀತಿಯ ಹಲವಾರು ಹೇಳಿಕೆಗಳು ದೇಶದಲ್ಲಿ ಕೇಳಿ ಬಂದಿವೆ. ಇವರ ನಂತರ ಬಿಜೆಪಿ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ನಾಥುರಾಮ್ ಗೋಡ್ಸೆ ರವರು ದೇಶ ಭಕ್ತರೇ ಆದರೆ ಒಂದು ಚಿಕ್ಕ ತಪ್ಪು ಮಾಡಿದ್ದಾರೆ ಎಂದು ಹೇಳಿ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದರು. ಕೂಡಲೇ ಇದನ್ನು ಗಮನಿಸಿದ ಬಿಜೆಪಿ ಪಕ್ಷದ ಹೈ ಕಮಾಂಡ್ ಕಠಿಣ ಆದೇಶ ಹೊರಡಿಸಿದೆ.

ಮಹಾತ್ಮ ಗಾಂಧೀ ರವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ನಾಥುರಾಮ್ ಗೋಡ್ಸೆ ರವರು ದೇಶ ಭಕ್ತ ಎಂದು ಲೋಕಸಭೆಯ ಭಾಷಣದ ವೇಳೆ ಹೇಳಿದ್ದ ಕಾರಣ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ರಕ್ಷಣಾ ಸಂಸತ್ತಿನ ಕಮಿಟಿಯಿಂದ ಹೊರಗಿಡಲು ಶಿಫಾರಸ್ಸು ಮಾಡಲಾಗಿದೆ ಅಷ್ಟೇ ಅಲ್ಲದೇ, ಜೊತೆಗೆ ಬಿಜೆಪಿ ಪಕ್ಷದ ಸಂಸದೀಯ ಸಭೆಗೆ ಪ್ರಜ್ಞಾ ಸಿಂಗ್ ಅವರನ್ನು ಆಹ್ವಾನ ಮಾಡಬಾರದು ಎಂದು ಆದೇಶ ಹೊರಡಿಸಿದೆ. ಇನ್ನು ಇದರ ಕುರಿತು ಅಭಿಪ್ರಾಯ ಹೊರಹಾಕಿರುವ ಬಿಜೆಪಿ ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ಪ್ರಜ್ಞಾ ಸಿಂಗ್ ರವರ ಈ ರೀತಿಯ ಹೇಳಿಕೆಗಳನ್ನು ನಮ್ಮ ಪಕ್ಷ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

Facebook Comments

Post Author: Ravi Yadav