ಬಿಗ್ ನ್ಯೂಸ್: ಶಿವಸೇನಾ ಪತನ ಆರಂಭ, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತಾ??

ಬಿಗ್ ನ್ಯೂಸ್: ಶಿವಸೇನಾ ಪತನ ಆರಂಭ, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತಾ??

ಶಿವಸೇನಾ ಪಕ್ಷವು ಅಂದುಕೊಂಡಂತೆ ಬಿಜೆಪಿ ಪಕ್ಷದ ಜೊತೆ ಮೈತ್ರಿ ತೊರೆದುಕೊಂಡು ತನ್ನ ಸಿದ್ದಂತಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ತನ್ನ ಅಂತ್ಯಕ್ಕೆ ತಾನೇ ನಾಂದಿ ಹಾಡಿದಂತೆ ಕಾಣುತ್ತಿದೆ. ಮೊದಲಿಂದಲೂ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಹಿಂದುತ್ವದ ಮೊದಲ ಫೈರ್ ಬ್ರಾಂಡ್ ಬಾಳಾ ಠಾಕ್ರೆ ರವರ ಅನುಯಾಯಿಗಳು ಈ ಮೂರು ಪಕ್ಷಗಳ ಮೈತ್ರಿಗಳನ್ನು ವಿರೋಧಿಸುತ್ತ ಬಂದಿದ್ದರು.

ಇದೀಗ ಅಂದುಕೊಂಡಂತೆ ಮೈತ್ರಿ ಖಚಿತವಾದ ಮೇಲೆ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಇದೀಗ ರಾಜಕೀಯ ಪಂಡಿತರ ಪ್ರಕಾರ ಶಿವಸೇನಾ ಪಕ್ಷದ ಪರಿಸ್ಥಿತಿ ಕರ್ನಾಟಕ ರಾಜ್ಯದಲ್ಲಿ ತನ್ನದೇ ಆದ ಛಾಪು ಇದ್ದರೂ ಮೈತ್ರಿ ಮಾಡಿಕೊಂಡು ಮಂಡ್ಯ ಚುನಾವಣೆಯಲ್ಲಿ ಸೋಲನ್ನು ಕಂಡ ಜೆಡಿಎಸ್ ಪಕ್ಷದ ಕಥೆಯಾದಂತೆ ಆಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಷ್ಟು ದಿವಸ ಕೆಲವ ಹೇಳಿಕೆಗಳು, ಆಕ್ರೋಶದ ಮಾತುಗಳಿಗೆ ಸೀಮಿತವಾಗಿದ್ದ ಶಿವಸೇನಾ ಕಾರ್ಯಕರ್ತರ ಹಾಗೂ ನಾಯಕರ ಆಕ್ರೋಶ ಇದೀಗ ರಾಜೀನಾಮೆ ಹಂತಕ್ಕೆ ಬಂದು ತಲುಪಿದೆ.

ಇಷ್ಟು ದಿವಸ ಶಿವಸೇನಾ ಕಾಯಕರ್ತರು ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ವಿರೋಧಿಸಿ ಹಿಂದೂ ವಿರೋಧಿ ಎನ್ನುತ್ತಾ ಹೋರಾಟ ಮಾಡುತ್ತಿದ್ದರು. ಆದರೆ ಈ ಮೈತ್ರಿಯಾದ ಕೆಲವೇ ಗಂಟೆಗಳಲ್ಲಿ ನಾಯಕರು ಬೇಸತ್ತಿದ್ದಾರೆ. ಮೊದಲ ವಿಕೆಟ್ ಆಗಿ ಶಿವಸೇನಾ ಪಕ್ಷದ ಕಟ್ಟಾ ನಾಯಕ ರಮೇಶ್ ಸೋಲಂಕಿ ರವರು ರಾಜೀನಾಮೆ ನೀಡಿದ್ದಾರೆ. ತನ್ನ 12 ನೇ ವಯಸ್ಸಿನಿಂದ ಧರ್ಮ ಉಳಿಸಲು ಶಿವಸೇನಾ ಪಕ್ಷಕ್ಕೆ ಸೇರಿಕೊಂಡೆ, ಕಾಂಗ್ರೆಸ್ ವಿರುದ್ಧ ಹೋರಾಡಲು ಆರಂಭಮಾಡಿದೆ. ಎಷ್ಟೇ ಜನ ನಾಯಕನಾದರೂ ಎಂದು ಟಿಕೆಟ್ ಅಥವಾ ಯಾವುದೇ ಸ್ಥಾನವನ್ನು ಆಶಿಸಲಿಲ್ಲ. ಆದರೆ ಇಂದು ನನ್ನ ಶಿವಸೇನಾ ಪಕ್ಷ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ನನ್ನ ಆತ್ಮಸಾಕ್ಷಿ ಇದಕ್ಕೆ ಒಪ್ಪುತ್ತಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ದಂತಗಳಿಗೆ ನಾನು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ರಾಜೀನಾಮೆ ನೀಡಿದ್ದಾರೆ. ಪಕ್ಷ ಹೀನಾಯ ಸೋಲನ್ನು ಕಂಡರೂ ನಾನು ಪಕ್ಷ ಬಿಡಲಿಲ್ಲ ಆದರೆ ಇಂದು ನನ್ನ ಜೀವನ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.