ಅಜಿತ್ ಬೆಂಬಲಿಗರನ್ನು ಸೆಳೆಯಲು ಹೋದ ಶರದ್ ಗೆ ಶಾಕ್ ನೀಡಿದ ಶಾಸಕರು ! ಬಿಜೆಪಿ ಪಕ್ಷದ ಕಡೆ ವಾಲಿದ ಶಾಸಕರು ಎಷ್ಟು ಗೊತ್ತಾ?? ಬಿಜೆಪಿ ಗೆ ಆನೆಬಲ

ಅಜಿತ್ ಬೆಂಬಲಿಗರನ್ನು ಸೆಳೆಯಲು ಹೋದ ಶರದ್ ಗೆ ಶಾಕ್ ನೀಡಿದ ಶಾಸಕರು ! ಬಿಜೆಪಿ ಪಕ್ಷದ ಕಡೆ ವಾಲಿದ ಶಾಸಕರು ಎಷ್ಟು ಗೊತ್ತಾ?? ಬಿಜೆಪಿ ಗೆ ಆನೆಬಲ

ಮಹಾರಾಷ್ಟ್ರ ರಾಜಕೀಯ ಕ್ಷಣಕೊಂದು ತಿರುವು ಪಡೆದು ಕೊಳ್ಳುತ್ತಿದೆ, ಬಿಜೆಪಿ ಪಕ್ಷಕ್ಕೆ 30ನೇ ತಾರೀಖಿ ನವರೆಗೂ ಕಾಲಾವಕಾಶ ನೀಡಲಾಗಿದ್ದು ನವೆಂಬರ್ 30 ನೇ ತಾರೀಖಿನಂದು ಬಿಜೆಪಿ ಪಕ್ಷ ಬಹುಮತ ವನ್ನು ಸಾಬೀತು ಪಡಿಸ ಬೇಕಾಗಿದೆ. ಬಿಜೆಪಿ ಪಕ್ಷದ ಮುಂದೆ ಎರಡು ಆಯ್ಕೆಗಳಿದ್ದು ಯಾವುದಾದರೂ ಒಂದು ಆಯ್ಕೆಯನ್ನು ಸಮಯಕ್ಕೆ ತಕ್ಕಂತೆ ಬಿಜೆಪಿ ಪಕ್ಷ ಆಯ್ಕೆ ಮಾಡಿಕೊಳ್ಳಲಿದೆ.

ಮೊದಲನೆಯದಾಗಿ ಬಿಜೆಪಿ ಪಕ್ಷವು ಎನ್ಸಿಪಿ ಪಕ್ಷದ ಶಾಸಕರ ಬೆಂಬಲವನ್ನು ಪಡೆದು ಕೊಂಡು ಹಾಗೂ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸುವ ಸಾಹಸಕ್ಕೆ ಕೈ ಹಾಕಬಹುದು. ಎರಡನೆಯದಾಗಿ ಒಂದು ವೇಳೆ ಶರದ್ ಪವರ್ ರವರ ಬಣ ಬಿಜೆಪಿ ಪಕ್ಷದ ಜೊತೆ ಕೈಜೋಡಿಸಲು ಒಪ್ಪದೇ ಇದ್ದಲ್ಲಿ, ಈಗಾಗಲೇ ಬಿಜೆಪಿ ಪಕ್ಷದ ಕಡೆಗೆ ವಾಲಿರುವ ಶಿವಸೇನೆಯ 20ಕ್ಕೂ ಹೆಚ್ಚು ಶಾಸಕರು ಹಾಗೂ ಎನ್ಸಿಪಿ ಪಕ್ಷದ ಶಾಸಕರನ್ನು ವಿಧಾನಸಭಾ ಕಲಾಪ ದಿಂದ ಹೊರ ಹೋಗುವಂತೆ ಮಾಡಿ, ಬಹುಮತಕ್ಕೆ ಬೇಕಾದ ಸೀಟುಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡು ತನ್ನ ಬಳಿ ಇರುವ ಸಂಖ್ಯೆ ಹಾಗೂ ಪಕ್ಷೇತರರ ಸಹಾಯ ಪಡೆದು ಕೊಂಡು ಮ್ಯಾಜಿಕ್ ನಂಬರ್ ಅನ್ನು ಬಹಳ ಸುಲಭವಾಗಿ ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದೆ.

ಈ ಎಲ್ಲಾ ಲೆಕ್ಕಾಚಾರಗಳ ನಡುವೆ ಶರತ್ ಪವಾರ್ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕರು ಇಂದು ಶರತ್ ಪವಾರ್ ಅವರಿಗೆ ಕೈ ಕೊಟ್ಟಿದ್ದಾರೆ. ಮೊದಲು ಅಜಿತ್ ಪವರ್ ರವರ ಬೆಂಬಲಕ್ಕೆ ತೆರಳಿದ ಶಾಸಕರು ಮರಳಿಗೂಡಿಗೆ ವಾಪಸಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಶರತ್ ಪವರ್ ಅವರಿಗೆ ತಮ್ಮದೇ ಆದ ಶಾಸಕರು ಇಂದು ಶರದ್ ಪವಾರ್ ಅವರು ಕರೆದ ಪಕ್ಷದ ಶಾಸಕಾಂಗ ಸಭೆಗೆ ಗೈರಾಗಿದ್ದಾರೆ. 17ಕ್ಕೂ ಹೆಚ್ಚು ಶಾಸಕರು ಈಗ ಸಂಪರ್ಕಕ್ಕೆ ಸಿಗದೇ ಶರತ್ ಪವಾರ್ ಅವರಿಗೆ ಹೊಸ ಚಿಂತೆ ಎದುರಾಗಿದೆ. ಇಪ್ಪತ್ತಕ್ಕೂ ಹೆಚ್ಚು ಶಾಸಕರ ಬೆಂಬಲವನ್ನು ಪಡೆದುಕೊಂಡಿದ್ದ ಅಜಿತ್ ಪವಾರ್ ಅವರು ಇದೀಗ ಮತ್ತಷ್ಟು ಶಾಸಕರ ಬೆಂಬಲವನ್ನು ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿದೆ. ಇದರಿಂದ ಶರತ್ ಪವಾರ್ ಅವರಿಗೆ ಭಾರಿ ಮುಜುಗರ ಉಂಟಾಗಿದ್ದು, ಪವಾರ್ ಅವರ ಬೆಂಬಲಿಗರನ್ನು ಸೆಳೆಯುವ ಸಾಹಸದಲ್ಲಿ ತಮ್ಮದೇ ಬೆಂಬಲದ ಶಾಸಕರನ್ನು ಕಳೆದುಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ವ್ಯಂಗ್ಯವಾಡಿದ್ದಾರೆ.