ಕೊನೆಗೂ ಛತ್ರಪತಿ ಶಿವಾಜಿ ರವರನ್ನು ನೆನಪು ಮಾಡಿಕೊಂಡ ಶಿವಸೇನೆ! ರಾಜಕೀಯ ದಾಳ ! ಹೋಲಿಕೆ ಮಾಡಿಕೊಂಡು ಹೇಳಿದ್ದೇನು ಗೊತ್ತಾ??

ಕೊನೆಗೂ ಛತ್ರಪತಿ ಶಿವಾಜಿ ರವರನ್ನು ನೆನಪು ಮಾಡಿಕೊಂಡ ಶಿವಸೇನೆ! ರಾಜಕೀಯ ದಾಳ ! ಹೋಲಿಕೆ ಮಾಡಿಕೊಂಡು ಹೇಳಿದ್ದೇನು ಗೊತ್ತಾ??

ಮಹಾರಾಷ್ಟ್ರ ದಲ್ಲಿ ಒಂದು ತಿಂಗಳ ರಾಜಕೀಯ ಬಿಕ್ಕಟ್ಟಿಗೆ ಪ್ರಮಾಣ ವಚನವನ್ನು ಸ್ವೀಕರಿಸುವ ಮೂಲಕ ದೇವೇಂದ್ರ ಫಡ್ನವಿಸ್ ರವರು ಅಂತ್ಯ ಹಾಡಿದ್ದರು. ಬಿಜೆಪಿ ಪಕ್ಷದ ಮೈತ್ರಿ ಕಳಚಿಕೊಂಡು ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ಶಿವಸೇನಾ ಪಕ್ಷದ ಕನಸಿಗೆ ತಣ್ಣೀರೆರಚುವ ಮುನ್ನ ತಾವು ಬದ್ಧ ವೈರಿಗಳಂತೆ ಕಾದಾಡುತ್ತಿದ್ದ ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಹೊರಟಾಗ ಛತ್ರಪತಿ ಶಿವಾಜಿ ರವರ ಮೌಲ್ಯಗಳನ್ನು ಮರೆತಂತೆ ಕಾಣುತ್ತಿತ್ತು.

ಕಳೆದ ಹಲವಾರು ವರ್ಷಗಳಿಂದ ಬದ್ಧ ವೈರಿಗಳಂತೆ ಕಾದಾಟ ನಡೆಸಿ ನಮಗೂ ಹಾಗೂ ಎನ್ಸಿಪಿ, ಕಾಂಗ್ರೆಸ್ ಪಕ್ಷಗಳ ಸಿದ್ಧಾಂತಗಳಿಗೆ ಒಪ್ಪಿ ಬರುವುದಿಲ್ಲ ಎಂದು ಮತಯಾಚನೆ ಮಾಡಿ ಹಿಂದುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಪಥ ಮಾಡಿ ಛತ್ರಪತಿ ಶಿವಾಜಿ ರವರ ಹಾದಿಯಲ್ಲಿ ನಡೆದು ಹೋಗುತ್ತೇವೆ ಎಂದು ಪ್ರತಿ ಬಾರಿಯೂ ಛತ್ರಪತಿ ಶಿವಾಜಿ ರವರ ಹೆಸರನ್ನು ಬಳಸಿಕೊಂಡು ಮತಯಾಚನೆ ಮಾಡುತ್ತಿದ್ದ ಶಿವಸೇನ ಪಕ್ಷವು ಇದೀಗ ಮುಖ್ಯಮಂತ್ರಿ ಕುರ್ಚಿ ತನಗೆ ಸಿಗುತ್ತದೆ ಎಂಬ ಆಸೆಯಿಂದ ಎಲ್ಲಾ ಮೌಲ್ಯಗಳನ್ನು ಹಾಗೂ ಸಿದ್ಧಾಂತಗಳನ್ನು ಪಕ್ಕಕ್ಕಿಟ್ಟು ತನ್ನ ಸಿದ್ಧಾಂತಗಳಿಗೆ ವಿರುದ್ಧವಾದ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿತ್ತು.

ಇದರ ಪರಿಣಾಮ ನೇರವಾಗಿ ಪಕ್ಷದ ಕಾರ್ಯಕರ್ತರ ಮೇಲೆ ಬಿದ್ದು ಹಲವಾರು ಕಾರ್ಯಕರ್ತರು ಹಾಗೂ ಶಾಸಕರು ನಾವು ಛತ್ರಪತಿ ಶಿವಾಜಿ ರವರ ಮೌಲ್ಯಗಳಿಂದ ನಿಮ್ಮ ಪಕ್ಷ ಸೇರಿದ್ದೇವೆ ಎಂದು ಹೇಳಿ ಬೀದಿಗಿಳಿದು ಘೋಷಣೆಗಳನ್ನು ಕೂಡ ಕೂಗುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ವಲಸೆ ಹೋಗುವ ಮಾತುಗಳು ಕೂಡ ಕೇಳಿಬಂದಿದೆ. ಅಷ್ಟರಲ್ಲಾಗಲೇ ಶಿವಸೇನಾ ಪಕ್ಷಕ್ಕೆ ಛತ್ರಪತಿ ಶಿವಾಜಿ ರವರ ನೆನಪಾಗಿದೆ, ಈ ಬಾರಿ ಛತ್ರಪತಿ ಶಿವಾಜಿ ಅವರ ಹೆಸರನ್ನು ಬಳಸಿಕೊಂಡು ಬಿಜೆಪಿ ಪಕ್ಷದ ವಿರುದ್ಧ ಕಿಡಿಕಾರಿರುವ ಶಿವಸೇನಾ ಪಕ್ಷವು ಮಹಾರಾಷ್ಟ್ರ ನೆಲದಲ್ಲಿ ಛತ್ರಪತಿ ಶಿವಾಜಿ ರವರಂತಹ ಮಹಾನ್ ವ್ಯಕ್ತಿಗಳು ಜನಿಸಿದ್ದಾರೆ, ಇಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದಂತೆ ಬಿಜೆಪಿ ಪಕ್ಷ ನಡೆದುಕೊಂಡಿದೆ. ಈ ರೀತಿ ದ್ರೋಹ ಬಗೆಯುವುದು ಶಿವಾಜಿ ರವರ ನೆಲದಲ್ಲಿ ಅಕ್ಷಮ್ಯ ಅಪರಾಧ, ಒಮ್ಮೆ ಇದೇ ರೀತಿ ಬೆನ್ನ ಹಿಂದೆ ದಾಳಿ ನಡೆಸಿದಾಗ ಛತ್ರಪತಿ ಶಿವಾಜಿ ಅವರು ಏನು ಮಾಡಿದರು ಎಂಬುದು ಎಲ್ಲರಿಗೂ ತಿಳಿದಿದೆ ಅದೇ ರೀತಿ ನಾವು ಬಿಜೆಪಿ ಪಕ್ಷಕ್ಕೆ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ. ಆದರೆ ಇಷ್ಟು ದಿವಸ ಇದೇ ಕೆಲಸವನ್ನು ಶಿವಸೇನ ಪಕ್ಷವು ಮಾಡಲು ಹೊರಟಿದ್ದು ಎಂಬುದೇ ವಿಪರ್ಯಾಸ.