ಹಿಂದುಗಳಿಗೆ ಮತ್ತೊಂದು ಮಹತ್ವದ ಜಯ ನೀಡಲು ಐತಿಹಾಸಿಕ ನಿರ್ಧಾರದ ಕಡೆ ಹೆಜ್ಜೆಯಿಟ್ಟ ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್ ರವರು ಭಾರತದ ಇತಿಹಾಸವನ್ನು ಮರುಕಳಿ ಸುವಂತಹ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡು ಈಗಾಗಲೇ ಭಾರತದ ಗತ ವೈಭವದ ಇತಿಹಾಸಕ್ಕೆ ಎಷ್ಟು ಮಹತ್ವ ನೀಡುತ್ತೇವೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹೀಗಿರುವಾಗ ಇದೀಗ ಮತ್ತೊಂದು ಐತಿಹಾಸಿಕ ನಿರ್ಧಾರದ ಮೂಲಕ ಭಾರತದ ಇತಿಹಾಸವನ್ನು ಮರೆ ಮಾಚಲು ಮೊಘಲರು ತೆಗೆದುಕೊಂಡಿದ್ದ ನಿರ್ಧಾರವನ್ನು ವಾಪಸ್ಸು ಪಡೆಯಲು ಮುಂದಾಗಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಭಾರತ ದೇಶದಲ್ಲಿ ಮೊಘಲರು ಅತಿ ಕ್ರಮಣ ಮಾಡುವುದಷ್ಟೇ ಅಲ್ಲದೇ ತಾವು ರಾಜ್ಯ ಭಾರ ಮಾಡುತ್ತಿದ್ದ ಹಲವಾರು ನಗರಗಳ ಹೆಸರುಗಳನ್ನು ಬದಲಾಯಿಸಿದ್ದರು. ಮೊಘಲರು ಹೆಸರು ಬದಲಾಯಿಸಿದ್ದಾರೆ ಎಂಬುದಕ್ಕೆ ಹಲವಾರು ಐತಿಹಾಸಿಕ ಪುರಾವೆಗಳು ಕೂಡ ಇವೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ಯೋಗಿ ಆದಿತ್ಯನಾಥ್ ಅವರು ತಾವು ಅಧಿಕಾರಕ್ಕೆ ಬಂದ ಕೂಡಲೇ ಉತ್ತರ ಪ್ರದೇಶದಲ್ಲಿ ಮೊಘಲರ ಅತಿಕ್ರಮಣ ದಿಂದ ಬದಲಾಯಿಸಲಾಗಿದ್ದ ನಗರಗಳ ಹೆಸರುಗಳನ್ನು ಮತ್ತೊಮ್ಮೆ ಭಾರತದ ಐತಿಹಾಸಿಕ ಗತ ವೈಭವವನ್ನು ಮರಳಿ ತರಲು ಮರು ನಾಮಕರಣ ಮಾಡುತ್ತಿದ್ದಾರೆ. ಸುಖಾಸುಮ್ಮನೆ ಮರು ನಾಮಕರಣ ಮಾಡುತ್ತಿಲ್ಲ ಬದಲಾಗಿ, ಸಮಿತಿಗಳನ್ನು ರಚಿಸಿ ಇತಿಹಾಸವನ್ನು ಮತ್ತೊಮ್ಮೆ ಪರೀಕ್ಷಿಸಿ, ಮೊಘಲರು ಬದಲಾಯಿಸಿದ್ದ ಹೆಸರುಗಳನ್ನು ಮರು ನಾಮಕರಣ ಮಾಡುತ್ತಿದ್ದಾರೆ.

ಇದೀಗ ಇದೇ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿರುವ ಯೋಗಿ ಆದಿತ್ಯನಾಥ್ ರವರು ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದು ಕೊಂಡಿರುವ ಆಗ್ರಾ ನಗರದ ಹೆಸರನ್ನು ಅಗ್ರವಾನ್ ಎಂದು ಬದಲಾಯಿಸಲು ನಿರ್ಧಾರ ಮಾಡಿದ್ದು, ಈ ಕುರಿತಂತೆ ಸಂಶೋಧನೆ ನಡೆಸಿ ಹಲವಾರು ಇತಿಹಾಸಕಾರರನ್ನು ಭೇಟಿ ಮಾಡಿ ಹಾಗೂ ಐತಿಹಾಸಿಕ ಪುರಾವೆಗಳನ್ನು ಪರಿಶೀಲನೆಗೆ ಒಳಪಡಿಸಲು ಅಂಬೇಡ್ಕರ್ ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗಕ್ಕೆ ಸೂಚನೆ ನೀಡಿದ್ದಾರೆ. ಅಗ್ರವಾನ್ ಎಂಬ ಹೆಸರು ಯಾವ ಕಾರಣಕ್ಕೆ ಆಗ್ರಾ ಎಂದು ಬದಲಾಯಿತು, ಎಂಬುದರ ಬಗ್ಗೆ ಸಂಪೂರ್ಣವಾಗಿ ಪುರಾವೆಗಳನ್ನು ಕಲೆ ಹಾಕಿ ರಾಜ್ಯ ಸರ್ಕಾರಕ್ಕೆ ಆದಷ್ಟು ಬೇಗ ವರದಿ ಸಲ್ಲಿಸಲು ಯೋಗಿ ಆದಿತ್ಯನಾಥ್ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಇನ್ನು ಕೆಲವೇ ಕೆಲವು ದಿನಗಳಲ್ಲಿ ಆಗ್ರಾ ಎಂಬ ನಗರವು ಅಗ್ರವಾನ್ ಇಂದು ಬದಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Facebook Comments

Post Author: Ravi Yadav