ಅಧಿಕಾರಕ್ಕಾಗಿ ಮೂರು ಕಠಿಣ ಷರತ್ತುಗಳಿಗೆ ಒಪ್ಪಿದ ಶಿವಸೇನೆ: ಸಾರ್ವರ್ಕರ್,ಶಿವಾಜಿ ರವರನ್ನು ಕೈಬಿಟ್ಟು ಮಾಡುತ್ತಿರುವುದಾದರೂ ಏನು ಗೊತ್ತಾ ??

ಅಧಿಕಾರಕ್ಕಾಗಿ ಮೂರು ಕಠಿಣ ಷರತ್ತುಗಳಿಗೆ ಒಪ್ಪಿದ ಶಿವಸೇನೆ: ಸಾರ್ವರ್ಕರ್,ಶಿವಾಜಿ ರವರನ್ನು ಕೈಬಿಟ್ಟು ಮಾಡುತ್ತಿರುವುದಾದರೂ ಏನು ಗೊತ್ತಾ ??

ಇದೀಗ ಮಹಾರಾಷ್ಟ್ರ ರಾಜ್ಯದಲ್ಲಿ ಎಲ್ಲಾ ಪಕ್ಷಗಳು ಅಧಿಕಾರದ ಗದ್ದುಗೆಯೇರಲು ಪ್ರಯತ್ನ ಪಡುತ್ತಿವೆ. ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಶಿವಸೇನಾ ಪಕ್ಷದ ಜೊತೆ ಅಧಿಕಾರವನ್ನು ಹಂಚಿಕೊಳ್ಳದ ನಿರ್ಧಾರ ಮಾಡಿದ್ದಕ್ಕಾಗಿ ಬಿಜೆಪಿ ಪಕ್ಷವು ಉಳಿದ ಯಾವುದೇ ಪಕ್ಷಗಳ ಜೊತೆ ಮೈತ್ರಿ ಇಲ್ಲ, ನಾವು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ದವಿದ್ದೇವೆ ಎಂದು ನಿರ್ಧಾರ ಮಾಡಿದೆ. ಆದರೆ ಶಿವಸೇನಾ ಪಕ್ಷವು ಮಾತ್ರ ಅಧಿಕಾರದ ಹಿಂದೆ ಬಿದ್ದಿದೆ.

ಇಷ್ಟು ದಿವಸ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ತನ್ನ ಮೂಲ ಸಿದ್ಧಾಂತಗಳಿಗೆ ತದ್ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಎಲ್ಲೆಡೆ ಹೇಳಿಕೆ ನೀಡಿತ್ತಿದ್ದ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಕುರ್ಚಿಯನ್ನು ಶಿವಸೇನಾ ಪಕ್ಷಕ್ಕೆ ದಕ್ಕಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಮುಂದೆ ಮಂಡಿಯೂರಿದ್ದಾರೆ. ಮೊದಲು ತಮ್ಮ ಮಗ ಆದಿತ್ಯ ಠಾಕ್ರೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಎಲ್ಲಾ ಪಕ್ಷಗಳ ಮುಂದೆ ಬೇಡಿಕೆ ಇಡುತ್ತಿದ್ದ ಉದ್ಧವ್ ಠಾಕ್ರೆ ಅವರು ಇದೀಗ ತಾವೇ ಮುಖ್ಯಮಂತ್ರಿ ಯಾಗಲು ನಿರ್ಧಾರ ಮಾಡಿದ್ದಾರೆ. ಈ ಎಲ್ಲಾ ವಿದ್ಯಮಾನಗಳ ನಡುವೆ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ಕಠಿಣ ಮೂರು ಷರತ್ತುಗಳನ್ನು ವಿಧಿಸಿ ಶಿವಸೇನ ಪಕ್ಷಕ್ಕೆ ಅಧಿಕಾರ ನೀಡಲು ಮುಂದೆ ಬಂದಿವೆ.

ಇತ್ತೀಚಿಗೆ ದೇಶದ ಎಲ್ಲೆಡೆ ಭಾರಿ ಸದ್ದು ಮಾಡಿದ ವೀರ ಸಾರ್ವರ್ಕರ್ ರವರಿಗೆ ಭಾರತ ರತ್ನ ನೀಡುವ ಕುರಿತು ಇದೀಗ ಶಿವಸೇನಾ ಪಕ್ಷವು ಉಲ್ಟಾ ಹೊಡೆದಿದ್ದು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಮೈತ್ರಿಗಾಗಿ ವೀರ ಸಾರ್ವರ್ಕರ್ ಅವರಿಗೆ ಭಾರತ ರತ್ನ ನೀಡಲು ಒಪ್ಪುವುದಿಲ್ಲ ಎಂಬ ನಿಲುವು ತಾಳಿದೆ. ಎರಡನೇಯದಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ನೆಲೆಸಿರುವ ಮುಸ್ಲಿಮರಿಗಾಗಿ ಇಷ್ಟು ದಿವಸ ಇರುವ ಸೌಲಭ್ಯಗಳು ಸಾಕು ಇನ್ನು ಮುಂದೆ ಯಾವುದೇ ಮೀಸಲಾತಿ ಬೇಡ ಎನ್ನುತ್ತಿದ್ದ ಶಿವಸೇನಾ ಪಕ್ಷವು ಇದೀಗ ಕಾಂಗ್ರೆಸ್ ಪಕ್ಷ ಹಾಗೂ ಎನ್ಸಿಪಿ ಪಕ್ಷಗಳನ್ನು ಮನವೊಲಿಸಲು ಇಡೀ ರಾಜ್ಯದಲ್ಲಿ ಎಲ್ಲಾ ಹುದ್ದೆಗಳಲ್ಲಿಯೂ ಹಾಗೂ ಸರ್ಕಾರದ ಪ್ರತಿಯೊಂದು ನಡೆಯಲ್ಲಿ ಶೇಕಡಾ ಐದರಷ್ಟು ಮೀಸಲಾತಿ ನೀಡಲು ನಿರ್ಧಾರ ಮಾಡಿದೆ. ಅಷ್ಟೇ ಅಲ್ಲದೆ ತನ್ನ ಸಂಪೂರ್ಣ ಅಧಿಕಾರದ ಅವಧಿಯಲ್ಲಿ ತನ್ನ ಮೂಲ ಶಿವಾಜಿ ಮಹಾರಾಜ್ ರವರ ಸಿದ್ಧಾಂತವಾದ ಹಿಂದುತ್ವ ವಾದವನ್ನು ಎಲ್ಲೂ ಪ್ರತಿಪಾದನೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಹೇಳಿರುವ ಕಾರಣ ಈ ಷರತ್ತಿಗೆ ಒಪ್ಪಿಗೆ ನೀಡುವ ಮೂಲಕ ಸಂಪೂರ್ಣವಾಗಿ ತನ್ನ ಮೂಲ ಸಿದ್ಧಾಂತಗಳನ್ನು ಪಕ್ಕಕ್ಕಿಟ್ಟು ಅಧಿಕಾರಕ್ಕೆ ಏರುತ್ತಿದೆ.