ಶಿವಸೇನಾ ಪಕ್ಷದ ಅಂತ್ಯಕ್ಕೆ ನಾಂದಿ ಹಾಡಿದ ರಾಜ್ಯಪಾಲರು !! ! ಮತ್ತೊಂದು ಮೆಗಾ ಟ್ವಿಸ್ಟ್

ಶಿವಸೇನಾ ಪಕ್ಷದ ಅಂತ್ಯಕ್ಕೆ ನಾಂದಿ ಹಾಡಿದ ರಾಜ್ಯಪಾಲರು !! ! ಮತ್ತೊಂದು ಮೆಗಾ ಟ್ವಿಸ್ಟ್.

ತನ್ನ ರಾಜಕೀಯ ಜೀವನದಲ್ಲಿ ಇಲ್ಲಿಯವರೆಗೂ ಕುಟುಂಬ ಅಧಿಕಾರಕ್ಕೆ ಆಸೆಪಡದೆ ಕೇವಲ ಹಿಂದುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಹೋರಾಟ ಮಾಡುತ್ತಿದ್ದ ಶಿವಸೇನಾ ಪಕ್ಷವು ಇದೀಗ ಮಹಾರಾಷ್ಟ್ರ ರಾಜ್ಯದಲ್ಲಿ ಶತಾಯಗತಾಯ ಮುಖ್ಯಮಂತ್ರಿ ಸ್ಥಾನಕ್ಕೆ ಏರಲು ಇನ್ನಿಲ್ಲದ ತಯಾರಿ ನಡೆಸುತ್ತಿದೆ. ಮಹಾಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಮುಂದಾಗಿರುವ ಶಿವಸೇನಾ ಪಕ್ಷಕ್ಕೆ ಇದೀಗ ರಾಜ್ಯಪಾಲರು ಶಾಕ್ ನೀಡಿದ್ದಾರೆ. ಈ ಮೂಲಕ ಶಿವಸೇನಾ ಪಕ್ಷವು ಬಹುತೇಕ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

ಈ ಮೊದಲು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವುದಾಗಿ ಘೋಷಣೆ ಮಾಡಿ, ನಾನೇ ಮುಖ್ಯಮಂತ್ರಿ ಎಂದು ಉದ್ಧವ್ ಠಾಕ್ರೆ ರವರು ಘೋಷಣೆ ಮಾಡಿದ ಕೆಲವೇ ಕೆಲವು ಗಂಟೆಗಳಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗುವ ದೊಡ್ಡ ದೊಡ್ಡ ತಿರುಗುಗಳು ನಡೆದು ಹೋಗಿವೆ. ಕಾಂಗ್ರೆಸ್ ಪಕ್ಷ ಬಾಹ್ಯ ಬೆಂಬಲವನ್ನು ನೀಡುತ್ತೇವೆ ಎಂದು ಘೋಷಣೆ ಮಾಡಿದ ಬಳಿಕ ಮಲ್ಲಿಕಾರ್ಜುನ ಖರ್ಗೆ ರವರು ಶಿವಸೇನಾ ಪಕ್ಷದ ಜೊತೆ ಮೈತ್ರಿ ಬೇಡ ಎಂದು ಸೋನಿಯಾ ಗಾಂಧಿ ರವರ ಕದ ತಟ್ಟಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿವಸೇನಾ ಪಕ್ಷವು ರಾಜ್ಯಪಾಲರ ಬಳಿ 48 ಗಂಟೆಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿತ್ತು.

ಬಿಜೆಪಿ ಪಕ್ಷ ಸರ್ಕಾರ ರಚನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಶಿವಸೇನ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡಿದ್ದ ರಾಜ್ಯಪಾಲರು ಇದೀಗ ಶಿವಸೇನಾ ಪಕ್ಷದ ಕಾಲಾವಕಾಶವನ್ನು ಹೆಚ್ಚಿಸಲು ಒಪ್ಪಿಗೆ ನೀಡದೇ ಎನ್ಸಿಪಿ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಶಿವಸೇನಾ ಪಕ್ಷ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುವುದಿಲ್ಲ ಎಂದು ತಿಳಿದಿರುವ ಎನ್ಸಿಪಿ ಪಕ್ಷವು ಸರ್ಕಾರ ರಚನೆಗೆ ಆಸಕ್ತಿ ತೋರಿಲ್ಲ. ಆದ ಕಾರಣ ರಾಜ್ಯಪಾಲರು ಕಾಂಗ್ರೆಸ್ ಪಕ್ಷವನ್ನು ಸರ್ಕಾರ ರಚನೆ ಮಾಡಲು ಆಹ್ವಾನ ನೀಡಲಿದ್ದಾರೆ ಎಂಬುದು ತಿಳಿದುಬಂದಿದೆ.

ಆದರೆ ಕಾಂಗ್ರೆಸ್ ಪಕ್ಷ ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದು ಈಗಾಗಲೇ ಎಲ್ಲರಿಗೂ ತಿಳಿದಿರುವ ಕಾರಣ, ರಾಜ್ಯಪಾಲರು ಇದೀಗ ಮಹಾರಾಷ್ಟ್ರ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ಕೆಲವು ದಿನಗಳ ಬಳಿಕ ರಾಷ್ಟ್ರಪತಿ ಆಡಳಿತ ಹೇರುವ ಸಾಧ್ಯತೆಗಳು ಹೆಚ್ಚಾಗಿವೆ. ಒಂದು ವೇಳೆ ಅದೇ ನಡೆದಲ್ಲಿ ಮುಂದಿನ ಚುನಾವಣೆಯಲ್ಲಿ ಇಷ್ಟೆಲ್ಲಾ ಅತಂತ್ರ ಸ್ಥಿತಿಗೆ ಕಾರಣವಾದ ಶಿವಸೇನಾ ಪಕ್ಷವು ನೆಲ ಕಚ್ಚುವುದು ಬಹುತೇಕ ಖಚಿತವಾಗಿದೆ.

ಇದೀಗ ತನ್ನ ಕಾರ್ಯಕರ್ತರ ಆಂತರಿಕ ಜಗಳದ ನಡುವೆ ಅಧಿಕಾರ ಕೈಗೆ ಸಿಗದೇ ಹೋದರೇ ಯಾರು ಶಿವ ಸೇನಾ ಪಕ್ಷಕ್ಕೆ ಮತ ನೀಡುವುದಿಲ್ಲ ಎಂದೇ ಹೇಳಲಾಗುತ್ತಿದೆ. ಕೇವಲ ಅಧಿಕಾರಕ್ಕಾಗಿ ತನ್ನ ಸಿದ್ದಂತಗಳನ್ನು ಪಕ್ಕಕ್ಕೆ ಇಟ್ಟು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದ ಶಿವಸೇನಾ ಪಕ್ಷದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಗಳು ಹಾಗೂ ಬಾಳ ಠಾಕ್ರೆ ರವರ ಕಟ್ಟಾ ಬೆಂಬಲಿಗರು ಸಿಡಿದೆದ್ದಿದ್ದಾರೆ. ಇವರೆಲ್ಲರ ಬೆಂಬಲವಿಲ್ಲದೇ ಶಿವ ಸೇನಾ ಪಕ್ಷ ಕೇವಲ ಬೆರಳೆಣಿಕೆಯ ಕ್ಷೇತ್ರಗಳಲ್ಲಿಯೂ ಗೆಲುವು ಬಿಡಿ ಠೇವಣಿ ಕೂಡ ಪಡೆದುಕೊಳ್ಳುವುದು ಅಸಾಧ್ಯವಾಗಿದೆ.

ಕಳೆದ ಬಾರಿ ಆಂತರಿಕ ಜಗಳವಿಲ್ಲದೇ ಬಿಜೆಪಿ ಪಕ್ಷದ ಸಖ್ಯ ತೊರೆದು ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಶಿವಸೇನಾ ಪಕ್ಷವು ಕೇವಲ ಬೆರಳೆಣಿಕೆಯ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿತ್ತು. ನೂರಾರು ಸ್ಥಳೀಯ ಕ್ಷೇತ್ರಗಳಲ್ಲಿ ಶಿವಸೇನಾ ಪಕ್ಷದ ಅಭ್ಯರ್ಥಿಗಳು ಕೇವಲ ಠೇವಣಿಯನ್ನು ಕೂಡ ಗಳಿಸಿ ಕೊಳ್ಳುವುದರಲ್ಲಿ ವಿಫಲರಾಗಿದ್ದರು. ಇದೇ ಕಾರಣಕ್ಕಾಗಿ ತದನಂತರ ಮತ್ತೊಮ್ಮೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಶಿವಸೇನಾ ಪಕ್ಷವು ಬಿಜೆಪಿ ಪಕ್ಷದ ಜೊತೆ ಕೈಜೋಡಿಸಿ ಹಲವಾರು ಸೀಟುಗಳನ್ನು ಗೆಲ್ಲುವ ಮೂಲಕ ಗಣನೀಯ ಪ್ರಮಾಣದಲ್ಲಿ ಬಿಜೆಪಿ ಪಕ್ಷದ ಪ್ರಭಾವವನ್ನು ಅರ್ಥ ಮಾಡಿಕೊಂಡಿದ್ದ ಘಟನೆಯನ್ನು ನಾವು ಸ್ಮರಿಸಬಹುದು.