ಮತ್ತೊಂದು ಐತಿಹಾಸಿಕ ನಿರ್ಧಾರ ! ಗತವೈಭವವನ್ನು ಕಾಶ್ಮೀರದಲ್ಲಿ ಮರಳಿ ತರಲು ಮೋದಿ ಸರ್ಕಾರ ಮಾಡುತ್ತಿರುವುದಾದರೂ ಏನು ಗೊತ್ತಾ???

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಮತ್ತು ರಾಜ್ಯವನ್ನು 2 ಕೇಂದ್ರಾಡಳಿತ ಪ್ರದೇಶಗಳಾಗಿ ಮರು ಸಂಘಟಿಸಿದ ನಂತರ, ಕೇಂದ್ರ ಸರ್ಕಾರವು ಕಣಿವೆಯಲ್ಲಿ ಮತ್ತೊಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲು ನಿರ್ಧಾರ ಮಾಡಿದೆ. ಈ ಮೂಲಕ ಜಮ್ಮು ಹಾಗೂ ಕಾಶ್ಮೀರದ ಗತ ವೈಭವವನ್ನು ಮರಳಿ ತರಲು ಕೇಂದ್ರ ದಿಟ್ಟ ಹೆಜ್ಜೆ ಇಟ್ಟಿದೆ.

ಒಂದು ಕಾಲದಲ್ಲಿ ಕಾಶ್ಮೀರಿ ಪಂಡಿತರು ಜಮ್ಮು ಹಾಗೂ ಕಾಶ್ಮೀರವನ್ನು ಭೂಮಿಯ ಮೇಲಿನ ಸ್ವರ್ಗದಂತೆ ನೋಡಿ ಕೊಂಡಿದ್ದರು. ಆದರೆ ಕೆಲವು ಕಹಿ ಘಟನೆಗಳಿಂದ ಕಾಶ್ಮೀರಿ ಪಂಡಿತರು, ಕಾಶ್ಮೀರದಿಂದ ಪಲಾಯನ ಮಾಡುವಂತಾಯಿತು. ತದ ನಂತರ ಭಯೋತ್ಪಾದಕರು ಉಳಿದ ಕಾಶ್ಮೀರಿಗಳ ಮೇಲೆ ದಬ್ಬಾಳಿಕೆ ಆರಂಭ ಮಾಡಿದರು. ಅಷ್ಟೇ ಅಲ್ಲದೇ, ಸಾವಿರಾರು ದೇವಾಲಯಗಳನ್ನು ನಾಶ ಪಡಿಸಿದರು. ಸುಮಾರು ೫೦೦೦೦ ದೇವಾಲಯಗಳನ್ನು ನಾಶಪಡಿಸುವುದರ ಮೂಲಕ ಕಾಶ್ಮೀರದ ಗತ ವೈಭವವನ್ನು ಹೀನಾಯ ಸ್ಥಿತಿ ತಲುಪವಂತೆ ಮಾಡಿದರು. ಆದರಲ್ಲಿಯೂ ಪ್ರಸಿದ್ಧ ಶೋಪಿಯಾದಲ್ಲಿರುವ ವಿಷ್ಣುವಿನ ದೇವಾಲಯ ಹಾಗೂ ಪಹಲ್ಗಂನಲ್ಲಿ ಶಿವನ ಪುರಾತನ ದೇವಾಲಯಗಳು ಇನ್ನು ಮುಚ್ಚಲ್ಪಟ್ಟಿವೆ.

ಆದರೆ ಇದೀಗ ಇದರ ಕುರಿತು ಮಹತ್ವದ ಹೆಜ್ಜೆ ಇಟ್ಟಿರುವ ಮೋದಿ ಸರ್ಕಾರವು, ಕಣಿವೆಯಲ್ಲಿ ಮುಚ್ಚಿದ ದೇವಾಲಯಗಳ ಬಗ್ಗೆ ಸರ್ಕಾರ ಸಮೀಕ್ಷೆ ನಡೆಸಲು ಆದೇಶ ನೀಡಿ, ನೋಟೀಸ್ ಹೊರಡಿಸಿದೆ. ಗೃಹ ರಾಜ್ಯ ಸಚಿವ ರೆಡ್ಡಿ ಮಾತನಾಡಿ, ಕಾಶ್ಮೀರ ಕಣಿವೆಯಲ್ಲಿ ಮುಚ್ಚಿದ ಶಾಲೆಗಳ ಸಮೀಕ್ಷೆಗಾಗಿ ನಾವು ಸಮಿತಿಯನ್ನು ರಚಿಸಿದ್ದೇವೆ ಮತ್ತು ಅವುಗಳನ್ನು ಮತ್ತೆ ತೆರೆಯಲಾಗುವುದು. ಕಳೆದ ಕೆಲವು ವರ್ಷಗಳಲ್ಲಿ, ಸುಮಾರು 50 ಸಾವಿರ ದೇವಾಲಯಗಳನ್ನು ಮುಚ್ಚಲಾಗಿದೆ, ಅವುಗಳಲ್ಲಿ ಕೆಲವು ನಾಶವಾಗಿವೆ ಮತ್ತು ವಿಗ್ರಹಗಳು ಮುರಿದುಹೋಗಿವೆ. ಅಂತಹ ದೇವಾಲಯಗಳ ಸಮೀಕ್ಷೆಗೆ ಆದೇಶಿಸಿದ್ದೇವೆ ‘ಎಂದು ಹೇಳಿದರು. ಈ ಮೂಲಕ ಮತ್ತೊಮ್ಮೆ ಕಾಶ್ಮೀರವನ್ನು ಭೂಮಿಯ ಸ್ವರ್ಗ ಮಾಡಿ, ಪ್ರವಾಸಿ ತಾಣವನ್ನಾಗಿ ಮಾಡಿ,ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಮೂಲಕ ಗತ ವೈಭವವನ್ನು ಮರಳಿ ಸ್ಥಾಪನೆ ಮಾಡಲು ಆದೇಶ ನೀಡಿದ್ದಾರೆ.

Facebook Comments

Post Author: Ravi Yadav