ಸೇನೆಗೆ ಭರ್ಜರಿ ಗುಡ್ ನ್ಯೂಸ್ ! ಐತಿಹಾಸಿಕ ಘೋಷಣೆ ಮಾಡಿದ ಅಮಿತ್ ಶಾ !

ಭಾರತೀಯ ಸೈನಿಕರು ಹಗಲು ರಾತ್ರಿ ಎನ್ನದೇ ನಮ್ಮ ದೇಶದ ಗಡಿ ಕಾಯುತ್ತಿರುತ್ತಾರೆ. ಒಮ್ಮೆ ಸೇನೆ ಸೇರಿದ ನಂತರ ನಿವೃತ್ತಿ ಆಗುವವರೆಗೂ ಒಂದು ಕ್ಷಣ ಮೈಮರೆತರು ಅಪಾಯ ಕಟ್ಟಿಟ್ಟ ಬುತ್ತಿ. ನೆರೆಹೊರೆಯ ರಾಷ್ಟ್ರಗಳಿಂದ ನಮ್ಮನ್ನು ರಕ್ಷಿಸಲು ಭಾರತೀಯ ಸೈನಿಕರ ತ್ಯಾಗವನ್ನು ನಾವು ವಿವರಣೆ ನೀಡಲು ಸಾಧ್ಯವೇ ಇಲ್ಲ. ತ್ಯಾಗ ಗಳನ್ನು ಹೇಳಬೇಕು ಎಂದರೇ ಪದಗಳು ಸಾಲುವುದಿಲ್ಲ.

ಹೀಗೆ ದೇಶವನ್ನು ಕಾಯುತ್ತಿರುವ ಸೈನಿಕರಿಗಾಗಿ ಕೇಂದ್ರ ಸರ್ಕಾರ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಭಾರತೀಯ ಸೇನೆಯನ್ನು ಬಲಿಷ್ಠಗೊಳಿಸಲು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಲಕ್ಷಾಂತರ ಕೋಟಿಗಳನ್ನು ಮುಡಿಪಾಗಿಟ್ಟಿದೆ. ಸೇನೆಯನ್ನು ಬಲಿಷ್ಠ ಗೊಳಿಸುವುದರ ಜೊತೆಗೆ ಕೇಂದ್ರ ಸರ್ಕಾರವು ಇದೀಗ ಸೈನಿಕರ ವೈಯಕ್ತಿಕ ಜೀವನದ ಬಗ್ಗೆಯೂ ಆಲೋಚನೆ ಮಾಡಿ, ಭಾರತೀಯ ಸೈನಿಕರ ಜೀವನವನ್ನು ಸುಧಾರಿಸಲು ಮತ್ತೊಂದು ಐತಿಹಾಸಿಕ ನಿರ್ಧಾರ ಘೋಷಣೆ ಮಾಡಿದೆ. ಗೃಹ ಸಚಿವರಾಗಿರುವ ಅಮಿತ್ ಶಾ ರವರು ಇಂದು ಇದರ ಕುರಿತು ಆದೇಶ ಹೊರಡಿಸಿದ್ದಾರೆ.

ಹೌದು ಇದೀಗ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇನ್ನು ಮುಂದೆ ಭಾರತೀಯ ಸೈನಿಕರು ವರ್ಷದಲ್ಲಿ ಬರೋಬ್ಬರಿ ಒಮ್ಮೆಲೆ ನೂರು ದಿನಗಳ ಕಾಲ ರಜೆ ಯನ್ನು ತೆಗೆದುಕೊಂಡು ತಮ್ಮ ಕುಟುಂಬದವರ ಜೊತೆ ಕಾಲ ಕಳೆಯಬಹುದು ಆಗಿದೆ. ಈ ಸೌಲಭ್ಯ ಎಲ್ಲಾ ಕೇಂದ್ರೀಯ ಸಶಸ್ತ್ರ ಪೋಲಿಸ್ ಪಡೆಗಳಿಗೆ ಅನ್ವಯವಾಗಲಿದೆ. ಈ ಕುರಿತು ಹೊಸ ಆದೇಶವನ್ನು ಹೊರಡಿಸಿರುವ ಅಮಿತ್ ಶಾ ರವರು ಕೂಡಲೇ ಇದನ್ನು ಜಾರಿಗೊಳಿಸಲು ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿಯ ನೇತೃತ್ವವನ್ನು ಸಿಆರ್ಪಿಎಫ್ ಹೆಚ್ಚುವರಿ ಪ್ರಧಾನ ನಿರ್ದೇಶಕರಾಗಿರುವ ಅತುಲ್ ರವರಿಗೆ ನೀಡಲಾಗಿದೆ. ಕೇವಲ ನಾಲ್ಕು ವಾರಗಳ ಗಡುವನ್ನು ನೀಡಿರುವ ಕೇಂದ್ರ ಸರ್ಕಾರವು ಯೋಜನೆಯನ್ನು ಜಾರಿಗೆ ತರಲು ಬೇಕಾಗಿರುವಂತಹ ಸಿದ್ಧತೆಗಳನ್ನು ನಡೆಸಿ ರೂಪುರೇಷೆಯನ್ನು ಸಿದ್ದಪಡಿಸುವಂತೆ ಆದೇಶ ನೀಡಿದೆ.

Facebook Comments

Post Author: Ravi Yadav