ಉಪ ಚುನಾವಣೆಯಲ್ಲಿ ಬಿಎಸ್ವೈ ಕಾರ್ಯತಂತ್ರ ಕಂಡು ಕಾಂಗ್ರೆಸ್ ಜೆಡಿಎಸ್ ಸುಸ್ತೋ ಸುಸ್ತು !

ಉಪ ಚುನಾವಣೆಯಲ್ಲಿ ಬಿಎಸ್ವೈ ಕಾರ್ಯತಂತ್ರ ಕಂಡು ಕಾಂಗ್ರೆಸ್ ಜೆಡಿಎಸ್ ಸುಸ್ತೋ ಸುಸ್ತು !

ಇದೀಗ ರಾಜ್ಯದ ಎಲ್ಲೆಡೆ ಉಪ ಚುನಾವಣೆಯ ಕಾವು ಏರತೊಡಗಿದೆ. ಒಂದೆಡೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಹಲವಾರು ಕ್ಷೇತ್ರಗಳಿಗೆ ಘೋಷಣೆ ಮಾಡಿ ಚುನಾವಣೆಯ ತಯಾರಿ ನಡೆಸುತ್ತಿದ್ದರೆ, ಮತ್ತೊಂದೆಡೆ ಅನರ್ಹ ಶಾಸಕರು ಸುಪ್ರೀಂಕೋರ್ಟಿನಲ್ಲಿ ತೀರ್ಪಿಗಾಗಿ ಕಾಯುತ್ತಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ತಡವಾಗಿ ರುವ ಕಾರಣ ಅನರ್ಹ ಶಾಸಕರ ಭವಿಷ್ಯ ಇನ್ನೂ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಇದೆ. ಆದರೆ ಹುಣಸೂರು ವಿಧಾನಸಭಾ ಕ್ಷೇತ್ರ ಇದಕ್ಕೆ ಕೊಂಚ ವಿಭಿನ್ನ ವಾಗಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ವಿಶ್ವನಾಥ್ ರವರು ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿರುವ ಕಾರಣ ಬಿಜೆಪಿ ಪಕ್ಷವು ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಯಾರಿ ನಡೆಸಿದೆ. ಇದೇ ವಿಷಯದಲ್ಲಿ ಇದೀಗ ಬಿಜೆಪಿ ಪಕ್ಷದ ಹಿರಿಯ ನಾಯಕ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ರಾಜಕೀಯ ತಂತ್ರವನ್ನು ಹೆಣೆದಿದ್ದಾರೆ. ಎಲ್ಲರೂ ವಿಶ್ವನಾಥ್ ರವರು ಪುತ್ರನಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಅಂದಾಜು ನಡೆಸುತ್ತಿದ್ದರು, ಅಷ್ಟೇ ಅಲ್ಲದೆ ಟಿಕೆಟ್ ರೇಸಿನಲ್ಲಿ ಸಿ.ಪಿ ಯೋಗೇಶ್ವರ್ ಅವರ ಹೆಸರು ಕೂಡ ಕೇಳಿ ಬಂದಿತ್ತು.

ಈ ಎರಡು ವಿಷಯಗಳು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಹುಮ್ಮಸ್ಸು ನೀಡಿದ್ದು ಸುಳ್ಳಲ್ಲ. ಯಾಕೆಂದರೆ ಒಂದು ವೇಳೆ ವಿಶ್ವನಾಥ್ ರವರ ಪುತ್ರ ಸ್ಪರ್ಧೆ ಮಾಡಿದರೇ ಅನರ್ಹ ಶಾಸಕರ ಪುತ್ರ ಎಂಬ ಟೀಕೆಗಳನ್ನು ಮಾಡಿ, ಕ್ಷೇತ್ರದಲ್ಲಿ ಅಷ್ಟಾಗಿ ಜನ ಬೆಂಬಲವನ್ನು ಹೊಂದಿಲ್ಲ ಎಂಬಂತೆ ಬಿಂಬಿಸಿ ಗೆಲುವು ಕಾಣುವುದು ಎರಡು ಪಕ್ಷಗಳ ಯೋಚನೆಯಾಗಿತ್ತು. ಇನ್ನು ಸಿ.ಪಿ ಯೋಗೇಶ್ವರ್ ಅವರು ಸ್ಪರ್ಧೆ ಮಾಡಿದರೇ, ಬೇರೊಂದು ಕ್ಷೇತ್ರದ ಅಭ್ಯರ್ಥಿ ಎಂದು ಟೀಕೆಗಳನ್ನು ಮಾಡಿ ಸ್ವಕ್ಷೇತ್ರದಲ್ಲಿ ಗೆಲ್ಲದ ಇವರನ್ನು ಬಿಜೆಪಿ ಪಕ್ಷ ಆಪರೇಷನ್ ಕಮಲ ಮಾಡಿದ ಕಾರಣಕ್ಕೆ ಇಲ್ಲಿ ಸ್ಪರ್ಧೆ ಮಾಡುವಂತೆ ಟಿಕೆಟ್ ನೀಡಿದೆ ಎಂಬ ಆರೋಪಗಳ ಸುರಿಮಳೆಯನ್ನು ಸುರಿಸಲು ಸಿದ್ಧವಾಗಿದ್ದವು.

ಆದರೆ ಇದೀಗ ಬಿಜೆಪಿ ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ನವರು ಎಚ್ ವಿಶ್ವನಾಥ್ ಅವರ ಪುತ್ರ ಹಾಗೂ ಸಿಪಿ ಯೋಗೇಶ್ವರ್ ಅವರನ್ನು ಪಕ್ಕಕ್ಕೆ ಇಟ್ಟು ಹೊಸ ಕಾರ್ಯತಂತ್ರವನ್ನು ಹೆಣೆದಿದ್ದು, ಸ್ಥಳೀಯವಾಗಿ ಪ್ರಬಲ ಬೆಂಬಲವನ್ನು ಹೊಂದಿರುವ ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷರಾಗಿರುವ ಯೋಗಾನಂದ ಕುಮಾರ್ ರವರಿಗೆ ಟಿಕೆಟ್ ನೀಡಲು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಹುಣಸೂರು ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈಗಾಗಲೇ ಯೋಗಾನಂದ ರವರು ಉಪಚುನಾವಣೆಗೆ ತಮ್ಮ ತಯಾರಿಯನ್ನು ಆರಂಭ ಮಾಡಿದ್ದು ಸ್ಥಳೀಯ ನಾಯಕರ ಜೊತೆ ನಿರಂತರ ಸಭೆಗಳನ್ನು ನಡೆಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಪುಟಗಳನ್ನು ತೆರೆದು ಭರ್ಜರಿ ಪ್ರಚಾರ ನಡೆಸಿದ್ದಾರೆ.