ಶಿವಸೇನಾ ಪಕ್ಷದ ರಾಜಕೀಯ ಅಂತ್ಯಗೊಳಿಸಲು ಎನ್ಸಿಪಿ-ಕಾಂಗ್ರೆಸ್ ರೂಪಿಸಿದ ಸ್ಕೆಚ್ ಏನು ಗೊತ್ತಾ??

ಶಿವಸೇನಾ ಪಕ್ಷದ ರಾಜಕೀಯ ಅಂತ್ಯಗೊಳಿಸಲು ಎನ್ಸಿಪಿ-ಕಾಂಗ್ರೆಸ್ ರೂಪಿಸಿದ ಸ್ಕೆಚ್ ಏನು ಗೊತ್ತಾ??

ಇದೀಗ ಇಡೀ ದೇಶದ ಛಿತ್ತ ಮಹಾರಾಷ್ಟ್ರ ರಾಜ್ಯದತ್ತ ನೆಟ್ಟಿದೆ. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಭರ್ಜರಿಯಾಗಿ ಗೆಲುವು ದಾಖಲಿಸಿದರೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿ ಹಾಗೂ ಶಿವಸೇನಾ ಪಕ್ಷಗಳ ನಡುವೆ ಕಾಳಗ ತಾರಕಕ್ಕೇರಿರುವ ಕಾರಣ ಮಹಾರಾಷ್ಟ್ರದಲ್ಲಿ ಫಲಿತಾಂಶ ಹೊರ ಬಂದು ಹತ್ತು ದಿನಗಳು ಕಳೆದರೂ ಸಹ ಸರಕಾರ ರಚನೆಗೆ ಮುಂದಾಗಿಲ್ಲ. ಎರಡೂ ಪಕ್ಷಗಳು ಮುಖ್ಯಮಂತ್ರಿ ಕುರ್ಚಿಯನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಈ ಎಲ್ಲಾ ವಿದ್ಯಮಾನಗಳ ನಡುವೆ ಹಲವಾರು ರಾಜಕೀಯ ಲೆಕ್ಕಾಚಾರಗಳು ಆರಂಭಗೊಂಡಿವೆ. ಆದರೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ಇದೇ ವಿವಾದವನ್ನು ಮುಂದಿಟ್ಟುಕೊಂಡು ಶಿವಸೇನಾ ಪಕ್ಷದ ರಾಜಕೀಯವನ್ನು ಅಂತ್ಯಗೊಳಿಸಲು ಹೊಸ ಸ್ಕೆಚ್ ರೂಪಿಸಿವೆ.

ಹೌದು, ಇದೀಗ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ಸೇರಿಕೊಂಡು ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನಾ ಪಕ್ಷವನ್ನು ಇಲ್ಲದಂತೆ ಮಾಡಲು ಸಂಚು ರೂಪಿಸಿವೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ಶಿವಸೇನಾ ಪಕ್ಷವು ತನ್ನ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂದರೇ ತನಗೂ ಹಾಗೂ ಎನ್ಡಿಎ ಮೈತ್ರಿಕೂಟಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಬಹಿರಂಗವಾಗಿ ಘೋಷಣೆ ಮಾಡಬೇಕು ಎಂಬ ಷರತ್ತನ್ನು ವಿಧಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಅದು ನಡೆದು ಶಿವಸೇನಾ ಪಕ್ಷವು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡರೇ ಶಿವಸೇನಾ ಪಕ್ಷದ ಅಂತ್ಯ ಖಚಿತ ಎಂದು ಹೇಳಲಾಗುತ್ತದೆ.

ಯಾಕೆಂದರೇ, ಶಿವಸೇನಾ ಪಕ್ಷಕ್ಕೆ ಮತ ನೀಡುತ್ತಿರುವ ಬಹುತೇಕ ಜನರು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ವಿರೋಧಿ ಗಳಾಗಿದ್ದಾರೆ. ಅಷ್ಟೇ ಅಲ್ಲದೆ ಹಿಂದುತ್ವದ ಫೈಯರ್ ಬ್ರಾಂಡ್ ಎಂದೇ ಖ್ಯಾತಿ ಪಡೆದುಕೊಂಡು ತಮ್ಮ ಹಿಂದುತ್ವದ ಮೌಲ್ಯಗಳ ಮೂಲಕ ಮಹಾರಾಷ್ಟ್ರ ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿ ಶಿವಸೇನಾ ಪಕ್ಷವನ್ನು ಕಟ್ಟಿದ್ದ ಬಾಳಾಠಾಕ್ರೆ ಮೊದಲಿನಿಂದಲೂ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ಕಾದಾಡಿ ಬೆಳೆದು ಬಂದಿದ್ದಾರೆ. ಬಹುತೇಕ ಶಿವಸೇನಾ ಪಕ್ಷದ ಕಾರ್ಯಕರ್ತರು ಬಾಳಾಠಾಕ್ರೆ ಅವರ ಅಪ್ಪಟ ಅಭಿಮಾನಿಗಳು ಆಗಿದ್ದಾರೆ.

ಹೀಗಿರುವಾಗ ಒಂದು ವೇಳೆ ಶಿವಸೇನಾ ಪಕ್ಷವು ಕೇವಲ ಮುಖ್ಯಮಂತ್ರಿ ಕುರ್ಚಿಗಾಗಿ ಹಿಂದುತ್ವ ವಿರೋಧಿ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ಮೈತ್ರಿಯನ್ನು ಮಾಡಿಕೊಂಡರೇ ಲಕ್ಷಾಂತರ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಆಕ್ರೋಶದ ಕಟ್ಟೆ ಹೊಡೆಯಲಿದೆ. ಅಷ್ಟೇ ಅಲ್ಲದೆ ಮತ ನೀಡುತ್ತಿರುವ ಮತಬಾಂಧವರು ಶಿವಸೇನಾ ಪಕ್ಷಕ್ಕೆ ಮತ ನೀಡುವುದಿಲ್ಲ ಎಂದೂ ಕಾಂಗ್ರೆಸ್ ಹಾಗೂ ಎನ್ಸಿಪಿ ಈ ಪಕ್ಷಗಳಿಗೆ ಈಗಾಗಲೇ ತಿಳಿದಿದೆ. ಇದೇ ಕಾರಣದಿಂದ ಶಿವಸೇನಾ ಪಕ್ಷವನ್ನು ಅಂತ್ಯಗೊಳಿಸಲು ಈ ರೀತಿಯ ಪ್ಲಾನ್ ಮಾಡಿವೆ. ಆದರೆ ಈ ಶರತ್ತಿಗೆ ಶಿವಸೇನ ಪಕ್ಷವು ಒಪ್ಪಿಗೆ ನೀಡಿಲ್ಲ ಎಂಬ ಮಾತು ಕೇಳಿಬಂದಿದೆ. ಮೈತ್ರಿ ಮಾಡಿಕೊಳ್ಳುತ್ತೇವೆ ಆದರೆ ಎನ್ಡಿಎ ಮೈತ್ರಿಕೂಟವಿಲ್ಲ ಎಂದು ಘೋಷಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.