ಧೋನಿ ಅಭಿಮಾನಿಗಳಿಗೆ ಹಾಗೂ ಪಂತ್ ರವರಿಗೆ ಹೊಸ ಸಲಹೆ ನೀಡಿದ ಗಿಲ್‌ಕ್ರಿಸ್ಟ್ ! ಹೇಳಿದ್ದೇನು ಗೊತ್ತಾ?

ಧೋನಿ ಅಭಿಮಾನಿಗಳಿಗೆ ಹಾಗೂ ಪಂತ್ ರವರಿಗೆ ಹೊಸ ಸಲಹೆ ನೀಡಿದ ಗಿಲ್‌ಕ್ರಿಸ್ಟ್ ! ಹೇಳಿದ್ದೇನು ಗೊತ್ತಾ?

ಸೀಮಿತ ಓವರ್‌ಗಳ ಆಟದಲ್ಲಿ ಧೋನಿ ಅವರ ವಿಕೆಟ್ ಕೀಪರ್ ಸ್ಥಾನಕ್ಕೆ ಪಂತ್ ಆಯ್ಕೆಯಾದ ಕ್ಷಣದಿಂದಲೂ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಳ ಕೋಪವನ್ನು ಎದುರಿಸುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ರವರ ಸ್ಥಾನವನ್ನು ನೀನು ತುಂಬಲು ಸಾಧ್ಯವಿಲ್ಲ, DRS ನಿಯಮವನ್ನು ನೀನು ಮಹೇಂದ್ರ ಸಿಂಗ್ ರವರಂತೆ ಅತಿಯಾದ ಆತ್ಮವಿಶ್ವಾದಿಂದ ನಿರ್ಣಯ ತೆಗೆದುಕೊಳ್ಳಬೇಡ ಎಂದು ಟೀಕೆ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೇ, ಬ್ಯಾಟಿಂಗ್ ಕೌಶಲ್ಯ ಹಾಗೂ ವಿಕೆಟ್ ಕೀಪಿಂಗ್ ಕೌಶಲ್ಯ ವನ್ನು ಪ್ರಶ್ನೆ ಮಾಡಿ ರಿಷಬ್ ಪಂತ್ ರವರ ಮೇಲೆ ಕಿಡಿ ಕಾರುತ್ತಿದ್ದಾರೆ. ಆದರೆ ಇದೀಗ ಇವರ ಬೆಂಬಲಕ್ಕೆ ನಿಂತಿರುವ ಆಸ್ಟ್ರೇಲಿಯಾದ ಮಾಜಿ ವಿಕೆಟ್‌ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ರವರು, ಧೋನಿ ಅಭಿಮಾನಿಗಳು ಒಪ್ಪಿಕೊಳ್ಳುವಂತಹ ಮಾತುಗಳನ್ನು ಮಾತನಾಡಿ, ಪಂತ್ ರವರಿಗೂ ಹೊಸ ಸಲಹೆಯನ್ನು ನೀಡಿದ್ದಾರೆ. ಮತ್ತಷ್ಟು ಸುದ್ದಿಗಳಿಗಾಗಿ ರೈಟ್ ಸ್ವೀಪ್ ಮಾಡಿ (ಬಲಕ್ಕೆ ಎಳೆಯಿರಿ), ಹಾಗೂ ನಮ್ಮ ಪುಟ ವನ್ನು ಫಾಲೋ ಮಾಡಿ.

ಈ ವಿಷಯದ ಕುರಿತು ಮಾತನಾಡಿರುವ ಆಸ್ಟ್ರೇಲಿಯಾದ ಮಾಜಿ ವಿಕೆಟ್‌ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ರವರು, ನಾನು ಮೊದಲೇ ಹೇಳಿದಂತೆ ಹೋಲಿಕೆಗಳಲ್ಲಿ ನಾನು ದೊಡ್ಡವನಲ್ಲ. ಆದರೆ ಭಾರತೀಯ ಅಭಿಮಾನಿಗಳು ಪಂತ್ ರವರನ್ನು ಮಹೇಂದ್ರ ಸಿಂಗ್ ಧೋನಿ ಅವರಿಗೆ ಹೋಲಿಸಲು ಪ್ರಯತ್ನಿಸಬಾರದು ಎಂದು ನಾನು ಭಾವಿಸುತ್ತೇನೆ. ಮಹೇಂದ್ರ ಸಿಂಗ್ ಧೋನಿ ರವರು ತಮ್ಮ ಆಟದ ಮೂಲಕ ವಿಕೆಟ್ ಕೀಪರ್ ಒಬ್ಬರಿಗೆ ಉನ್ನತ ಮಾನ ದಂಡವನ್ನು ನಿಗದಿಪಡಿಸಿದ್ದಾರೆ. ಒಂದು ದಿನ ಯಾರಾದರೂ ಅದನ್ನು ಸರಿ ತೂಗಿಸಬಹುದು, ಆದರೆ ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಸರಿತೂಗಿಸುವುದು ಬಹುಶಃ ಅಸಂಭವವಾಗಿದೆ.

ರಿಷಭ್ ಪಂತ್ ರವರು ಬಹಳ ಪ್ರತಿಭಾವಂತ ಯುವ ಆಟಗಾರ, ಆದರೆ ಬಹು ಬೇಗನೆ ಅವರ ಮೇಲೆ ಹೆಚ್ಚು ಒತ್ತಡ ಹೇರ ಬಾರದು ಮತ್ತು ಅವನು ಮುಂದೊಂದು ದಿನ ಆತ ಮಹೇಂದ್ರ ಸಿಂಗ್ ಧೋನಿ ರವರಂತೆ ಒಬ್ಬ ಉತ್ತಮ ವಿಕೆಟ್ ಕೀಪರ್ ಆಗುತ್ತಾನೆ. ಇನ್ನು ಅದೇ ರೀತಿ ರಿಷಬ್ ಪಂತ್ ರವರು ಕೂಡ, ಮಹೇಂದ್ರ ಸಿಂಗ್ ಧೋನಿಯಿಂದ ನೀವು ಮಾಡಬಹುದಾದ ಎಲ್ಲವನ್ನೂ ಕಲಿಯಿರಿ. ಆದರೆ ಧೋನಿಯಾಗಲು ಪ್ರಯತ್ನಿಸಬೇಡಿ. ನಿಮಗೆ ಸಾಧ್ಯವಾದಷ್ಟು ಉತ್ತಮ ರಿಷಭ್ ಪಂತ್ ಆಗಲು ಪ್ರಯತ್ನಿಸಿ ಎಂದು ಸಲಹೆ ನೀಡಿದ್ದಾರೆ.