ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಮಕ್ಕಳ ಕಷ್ಟವನ್ನು ನೋಡಿ ಅಮಿತ್ ಶಾ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ನಮ್ಮೆಲ್ಲರ ಆದರ್ಶ ಹೀರೋ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ರವರು ನಮ್ಮ ಜೊತೆ ಇಲ್ಲ. ಇವರು ನಮ್ಮೆಲ್ಲರನ್ನೂ ತೊರೆದು ಹೋದ ಮೇಲೆ ಸರ್ಕಾರ ಇವರ ಮಕ್ಕಳ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ. ಆದರೆ ಅಮಿತ್ ಶಾ ಹಿಂದೆ ಮುಂದೆ ಯೋಚನೆ ಮಾಡದೇ ಕ್ಷಣ ಮಾತ್ರದಲ್ಲಿ ತಾವು ಅಂದು ದೃಢ ನಿರ್ಧಾರ ತೆಗೆದುಕೊಂಡರು. ನಾವು ಇಲ್ಲಿ ಯಾವ ಪಕ್ಷದ ರಾಜಕೀಯ ನಾಯಕನ ಬೆಂಬಲಕ್ಕಾಗಿ ಹೇಳುತ್ತಿಲ್ಲ.ಈ ಘಟನೆ ನಮ್ಮ ಸುತ್ತ ಮುತ್ತ ಇರುವ ಎಲ್ಲ ರಾಜಕೀಯ ನಾಯಕರಲ್ಲಿ ಅರಿವು ಮೂಡಿಸಬೇಕು, ಈ ಸುದ್ದಿಯನ್ನು ನೀವೇ ಎಲ್ಲರಿಗೂ ಶೇರ್ ಮಾಡಿ ತಲುಪಿಸಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ, ಪಿಎಸ್ಐ ಮಲ್ಲಿಕಾರ್ಜುನ ಬಂಡೆರವರು ೨೦೧೪ ರಲ್ಲಿ ತಮ್ಮ ಕರ್ತವ್ಯದ ಭಾಗವಾಗಿ ಜನವರಿ ೮ ನೇ ತಾರೀಕಿನಂದು ಶಾರ್ಪ್ ಶೂಟರ್ ಎಂದೇ ಕುಖ್ಯಾತಿ ಪಡೆದುಕೊಂಡಿದ್ದ ಗೂಂಡಾ ಮುನ್ನಾ ಜೊತೆ ನಡೆದಿದ್ದ ಗುಂಡಿನ ಕಾಳಗದಲ್ಲಿ ಗುಂಡೇಟು ತಿಂದಿದ್ದರು. ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಸಹ ದುರದೃಷ್ಟವಶಾತ್ ಎದೆಗೆ ಗುಂಡೇಟು ಬಿದ್ದಿದ್ದ ಕಾರಣ ಹಲವಾರು ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಹುತಾತ್ಮ ರಾಗಿದ್ದರು. ತದ ನಂತರ ಇವರ ಕುಟುಂಬ ಅನಾಥವಾಯಿತು. ಸರ್ಕಾರವು ಪಿಂಚಣಿ ನೀಡುತ್ತಿದ್ದ ಹಣದಲ್ಲಿ ಬದುಕುತಿತ್ತು. ಆದರೆ ಪಿಎಸ್ಐ ಪತ್ನಿ ಮಲ್ಲಮ್ಮ ಬಂಡೆ ರವರು ಮೆದುಳು ಸಂಬಂಧಿತ ಮಕ್ಕಳನ್ನು ಅನಾಥರನ್ನಾಗಿ ಮಾಡಿ ಹೊರಟು ಹೋದರು.

ಸರ್ಕಾರಿ ಕಾನೂನಿನ ಪ್ರಕಾರ ಹೆಂಡತಿ ಇರುವ ವರೆಗೂ ಮಾತ್ರ ಪಿಂಚಣಿ ಸೌಲಭ್ಯ ದೊರೆಯುತ್ತದೆ. ಆದರೆ ಮಕ್ಕಳು ತಂದೆ, ತಾಯಿಯನ್ನು ಕಳೆದುಕೊಂಡಾಗ ಅಪ್ರಾಪ್ತರಾಗಿದ್ದ ಕಾರಣ ತಿಂಗಳಿಗೆ ಒಂದು ಸಾವಿರ ರೂ ನಂತೆ ಜೀವನ ಸಾಗಿಸಲು ಸರ್ಕಾರ ಹಣ ನೀಡುತಿತ್ತು. ಆದರೆ ನೀವೇ ಹೇಳಿ, ಇಂದಿನ ಜೀವದಲ್ಲಿ ಎರಡು ಮಕ್ಕಳು ತಿಂಗಳಿಗೆ ಒಂದು ಸಾವಿರ ರೂ ನಲ್ಲಿ ಹೇಗೆ ಜೀವನ ಮಾಡಬೇಕು? ಆದರೆ ಅದು ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಅರ್ಥವಾಗಲಿಲ್ಲ. ಸರ್ಕಾರ ಆ ಪುಟ್ಟ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲಿಲ್ಲ. ವಿಪರ್ಯಾಸವೆಂದರೇ, ಈ ಸುದ್ದಿಯನ್ನು ಯಾವ ಮಾಧ್ಯಮಗಳು ತೋರಿಸಲಿಲ್ಲ. ಗಂಟೆಗಟ್ಟಲೆ ಪ್ರೋಗ್ರಾಮ್ ನಡೆಸಲಿಲ್ಲ. ಒಹ್ ಅವರಿಗೆ TRP ಸಿಗುವುದಿಲ್ಲ ಅದಕ್ಕಾಗಿ ಇರಬೇಕು.

ಈ ಎಲ್ಲದರ ನಡುವೆ ಉದ್ದುದ್ದ ಭಾಷಣಗಳನ್ನು ಬಿಗಿಯುವ ಯಾವ ರಾಜಕೀಯ ನಾಯಕರು ಇದರ ಬಗ್ಗೆ ಗಮನ ಹರಿಸಲಿಲ್ಲ. ಆದರೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ರವರು ಇದನ್ನು ಗಮನಿಸಿ, ಬಿಜೆಪಿ ಪಕ್ಷದ ವಿಭಾಗೀಯ ಮಟ್ಟದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಅಮಿತ್ ಶಾ ರವರ ಮುಂದೆ ಮಕ್ಕಳ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿ, ಸರ್ಕಾರ ತಿಂಗಳಿಗೆ ಕೇವಲ ಒಂದು ಸಾವಿರ ರೂಪಾಯಿ ಹಣ ಮಾತ್ರ ನೀಡುತ್ತಿದೆ ಎಂದು ಹೇಳಿದರು. ಈ ವಿಷಯಕ್ಕೆ ತಕ್ಷಣ ಸ್ಪಂದಿಸಿದ ಅಮಿತ್ ಶಾ ರವರು, ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚ ಪಕ್ಷವೇ ಭರಿಸುವುದರ ಜೊತೆಗೆ ಇಬ್ಬರು ಮಕ್ಕಳನ್ನ ದತ್ತು ಪಡೆಯುವುದಾಗಿ ಘೋಷಣೆ ಮಾಡಿದರು. ಈ ಮಕ್ಕಳ ಜವಾಬ್ದಾರಿಯನ್ನು ಇನ್ನು ಮುಂದೆ ಸಂಪೂರ್ಣವಾಗಿ ನಾನೇ ಮುತುವರ್ಜಿ ವಹಿಸಿಕೊಂಡು ಕಾಳಜಿ ವಹಿಸುತ್ತೇನೆ ಎಂದು ತಿಳಿಸಿದರು ಹಾಗೂ ಇಂದಿನವರೆಗೂ ಈ ಕಾರ್ಯವನ್ನು ಮುಂದುವರೆಸುತ್ತಿದ್ದಾರೆ.

Facebook Comments

Post Author: RAVI