ಸೋನಿಯಾ ತಿರಸ್ಕಾರ ಮಾಡಿದ ಮೇಲೆ ಮತ್ತೊಂದು ರಾಜಕೀಯ ತಂತ್ರ ಹೂಡಿದ ಶಿವಸೇನಾ ! ಏನು ಗೊತ್ತಾ?

ಇದೀಗ ಶಿವಸೇನಾ ಪಕ್ಷದ ಕೂಗನ್ನು ಯಾವ ಪಕ್ಷಗಳು ಕೇಳಿಸಿ ಕೊಳ್ಳುವಂತೆ ಕಾಣುತ್ತಿಲ್ಲ. ಇಷ್ಟು ದಿವಸ ಕಾಂಗ್ರೆಸ್ ಪಕ್ಷದ ಬದ್ಧ ವೈರಿ ಯಾಗಿ ಸದಾ ಕಿಡಿಕಾರುತ್ತಿದ್ದ ಶಿವಸೇನಾ ಪಕ್ಷವೂ ಇದೀಗ ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಮನವಿಯನ್ನು ಮುಂದೆಯಿಟ್ಟು ಸೋನಿಯಾ ಗಾಂಧಿಯವರು ಮೈತ್ರಿ ಬೇಡ ಎಂದು ಖಡಕ್ಕಾಗಿ ಹೇಳಿದ ಕಾರಣ ಬಾರಿ ಮುಜುಗರಕ್ಕೆ ಒಳಗಾಗಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ.

ಮೊದಲು ಬಿಜೆಪಿ ಪಕ್ಷ ಜೊತೆ ಮೈತ್ರಿ ಎಂದು ತದ ನಂತರ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ಅಧಿಕಾರಕ್ಕೆ ಆಸೆ ಬಿದ್ದು ಮೈತ್ರಿ ಸರ್ಕಾರ ರಚನೆ ಮಾಡಲು ಹೊರಟಿದ್ದ ಶಿವಸೇನಾ ಪಕ್ಷವು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ರವರು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಮನವಿಯನ್ನು ತಿರಸ್ಕಾರ ಮಾಡಿದ ಮೇಲೆ ಮತ್ತೊಂದು ರಾಜಕೀಯ ತಂತ್ರವನ್ನು ಪ್ರಯೋಗಿಸಿದೆ‌. ಈ ತಂತ್ರದ ಮೂಲಕ ಶಿವಸೇನಾ ಪಕ್ಷವು ಮತ್ತೊಮ್ಮೆ ಟೀಕೆಗಳಿಗೆ ಗುರಿಯಾಗಿದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಶಿವಸೇನಾ ಪಕ್ಷವು ಅಧಿಕಾರಕ್ಕಾಗಿ ಮತ್ತೊಮ್ಮೆ ಬಿಜೆಪಿ ಪಕ್ಷದ ಬಾಗಿಲು ತಟ್ಟಿದೆ.

ಹೌದು ಬೇರೆ ಪಕ್ಷಗಳ ಜೊತೆ ಮೈತ್ರಿ ಮಾಡಲು ಸಾಧ್ಯವಿಲ್ಲ ಎಂದು ತಿಳಿದ ಬಳಿಕ ಮತ್ತೊಮ್ಮೆ ಶಿವಸೇನಾ ಪಕ್ಷವು ಬಿಜೆಪಿ ಪಕ್ಷದ ಕದ ತಟ್ಟಿದೆ. ಆದರೆ ಈ ಬಾರಿ ನೇರವಾಗಿ ಬಿಜೆಪಿ ಪಕ್ಷದ ಜೊತೆ ಮಾತುಕತೆ ನಡೆಸದೆ ಆರೆಸ್ಸೆಸ್ ಸಂಘ ಸಂಸ್ಥೆಯನ್ನು ಎಳೆದು ತಂದಿದೆ. ಆರೆಸ್ಸೆಸ್ ಸಂಘ ಸಂಸ್ಥೆಗೆ ಪತ್ರ ಬರೆದಿರುವ ಶಿವಸೇನಾ ಪಕ್ಷದ ನಾಯಕರು ಈ ಕೂಡಲೇ ಮಧ್ಯ ಪ್ರವೇಶಿಸಿ ಮಹಾರಾಷ್ಟ್ರ ರಾಜ್ಯದಲ್ಲಿ ಬಿಜೆಪಿ ಹಾಗೂ ಶಿವಸೇನಾ ಪಕ್ಷಗಳ ನಡುವೆ ಮೈತ್ರಿ ಏರ್ಪಡುವಂತೆ ಮಾತುಕತೆ ನಡೆಸಲು ಕೋರಿವೆ. ಆದರೆ ಶಿವಸೇನಾ ಪಕ್ಷದ ಮನವಿಗೆ ಆರೆಸ್ಸೆಸ್ ಸಂಘ ಸಂಸ್ಥೆಯು ಯಾವುದೇ ಉತ್ತರವನ್ನು ನೀಡದೇ ಮೌನ ವಹಿಸಿದೆ ಎಂಬುದು ತಿಳಿದುಬಂದಿದೆ.

ಇನ್ನು ಇದರ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಬಿಜೆಪಿ ಪಕ್ಷದ ನಾಯಕರು ಶಿವಸೇನಾ ಪಕ್ಷವು ಯಾವ ಕಾರಣಕ್ಕಾಗಿ ಈ ರೀತಿ ಅತಂತ್ರ ಸ್ಥಿತಿ ತಲುಪಿದೆ ಎಂದು ಆಲೋಚಿಸಲು ಸಾಧ್ಯವಾಗುತ್ತಿಲ್ಲ. ಶಿವಸೇನಾ ಪಕ್ಷದ ನಾಯಕರು ಇಲ್ಲಿಯವರೆಗೂ ಯಾವುದೇ ಕುರ್ಚಿಗೆ ಆಸೆ ಬಿದ್ದವರಲ್ಲ. ಆದರೆ ಈ ಬಾರಿ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೂ ಸಹ ತನಗೆ ನೀಡಿದ ಅರ್ಧ ಕ್ಷೇತ್ರಗಳನ್ನು ಸಹ ಗೆಲ್ಲಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅದೇಗೆ ಎರಡೂವರೆ ವರ್ಷಗಳ ಕಾಲ ಅಧಿಕಾರವನ್ನು ಇದೇ ಮೊಟ್ಟ ಮೊದಲ ಬಾರಿಗೆ ಶಾಸಕರಾಗಿರುವ ಆದಿತ್ಯ ಅವರಿಗೆ ನೀಡಲಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

Facebook Comments

Post Author: Ravi Yadav