ಸಿಎಂ ಕನಸು ಕಂಡಿದ್ದ ಆದಿತ್ಯ ರವರ ಶಾಸಕ ಸ್ಥಾನ ಢಮಾರ್??ಮಹಾ ನ್ಯಾಯವಾದಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಆದಿತ್ಯ ಠಾಕ್ರೆ

ಸಿಎಂ ಕನಸು ಕಂಡಿದ್ದ ಆದಿತ್ಯ ರವರ ಶಾಸಕ ಸ್ಥಾನ ಢಮಾರ್??ಮಹಾ ನ್ಯಾಯವಾದಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಆದಿತ್ಯ ಠಾಕ್ರೆ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲಿನಿಂದಲೂ ಶಿವಸೇನಾ ಪಕ್ಷದ ಅಧ್ಯಕ್ಷ ಕುಟುಂಬವಾದ ಠಾಕ್ರೆ ಕುಟುಂಬವು ಅಧಿಕಾರದ ಬೆನ್ನಿಗೆ ಬಿದ್ದಿರಲಿಲ್ಲ. ಸದಾ ಹಿಂದುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದ ಶಿವಸೇನಾ ಪಕ್ಷವು ಇದೀಗ ಇದೇ ಮೊಟ್ಟ ಮೊದಲ ಬಾರಿಗೆ ಠಾಕ್ರೆ ಕುಟುಂಬ ವ್ಯಕ್ತಿಯೊಬ್ಬರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಶಾಸಕರಾದ ಬಳಿಕ ನೇರವಾಗಿ ಮುಖ್ಯಮಂತ್ರಿ ಸ್ಥಾನದ ಕುರ್ಚಿಗೆ ಕಣ್ಣಿಟ್ಟು, ಮಹಾರಾಷ್ಟ್ರ ರಾಜ್ಯದ ಸರ್ಕಾರ ರಚನೆಯನ್ನು ಅತಂತ್ರ ಸ್ಥಿತಿಯಲ್ಲಿ ಇರಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಠಾಕ್ರೆ ಕುಟುಂಬಕ್ಕೆ ದೊಡ್ಡ ಶಾಕ್ ಎದುರಾಗಿದೆ.

ಚುನಾವಣಾ ಪೂರ್ವ ಮೈತ್ರಿಯನ್ನು ಬಿಜೆಪಿ ಪಕ್ಷದ ಜೊತೆ ಮಾಡಿಕೊಂಡು ಕಣಕ್ಕಿಳಿದು 63 ಕ್ಷೇತ್ರಗಳಲ್ಲಿ ಜಯ ಗಳಿಸಿರುವ ಶಿವಸೇನಾ ಪಕ್ಷವು ಇದೀಗ ಬಿಜೆಪಿ ಪಕ್ಷ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುವುದಿಲ್ಲ ಎಂದು ತಿಳಿದ ಮೇಲೆ, ಇಷ್ಟು ದಿವಸ ಯಾವುದೇ ಕಾರಣಕ್ಕೂ ಹಿಂದುತ್ವ ವಿರೋಧಿಯಾದ ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸುವುದಿಲ್ಲ ಎಂದು ಕಿಡಿಕಾರುತ್ತಿದ್ದನ್ನು ಮರೆತು ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಏರಲು ತಯಾರಾಗಿದೆ. ಇನ್ನೇನು ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮುಂದೆ ತಲೆಬಾಗಿಸಿ ಅಧಿಕಾರಕ್ಕೆ ಏರುವ ಸಂದರ್ಭದಲ್ಲಿ ಆದಿತ್ಯ ಠಾಕ್ರೆ ರವರಿಗೆ ಅತಿ ದೊಡ್ಡ ಶಾಕ್ ಎದುರಾಗಿದೆ.

ಹೌದು, ಮುಖ್ಯ ಮಂತ್ರಿ ಕುರ್ಚಿಯ ಕನಸು ಕಾಣುತಿದ್ದ ಆದಿತ್ಯ ಠಾಕ್ರೆ ರವರು ಇದೀಗ ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ. ತನ್ನ ಮಗನನ್ನು ಮುಖ್ಯ ಮಂತ್ರಿ ಮಾಡಬೇಕು ಎಂದು ಕೊಂಡಿದ್ದ ಉದ್ಧವ್ ಠಾಕ್ರೆ ರವರು ಇದೀಗ ಶತಾಯ ಗತಾಯ ತಮ್ಮ ಮಗನನ್ನು ಶಾಸಕ ಸ್ಥಾನವನ್ನಾದರೂ ಉಳಿಸಿಕೊಳ್ಳುವ ಮೂಲಕ ಮುಜುಗರಕ್ಕೆ ಒಳಗಾಗದಂತೆ ನೋಡಿಕೊಳ್ಳಲು ಇನ್ನಿಲ್ಲದ ಸರ್ಕಸ್ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದಕೆಲ್ಲ ಕಾರಣ ಮಹಾರಾಷ್ಟ್ರದ ಸಾಮಾಜಿಕ ನ್ಯಾಯವಾದಿ. ಆದಿತ್ಯ ಠಾಕ್ರೆ ಅವರ ನಾಮಪತ್ರ ದಲ್ಲಿರುವ ಭಾರಿ ತಪ್ಪನ್ನು ಹುಡುಕಿರುವ ಸಾಮಾಜಿಕ ನ್ಯಾಯವಾದಿ ಯೊಬ್ಬರು ಆದಿತ್ಯ ಠಾಕ್ರೆಯವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.

ತಾವು ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಆದಿತ್ಯ ಠಾಕ್ರೆಯವರು ತಮ್ಮ ಬಳಿ ಇರುವ ಟಾಪ್ ಎಂಡ್ ಬಿಎಂಡಬ್ಲ್ಯೂ ಕಾರಿನ ಮೊತ್ತವನ್ನು ಕೇವಲ ಆರು ಲಕ್ಷ ರೂಪಾಯಿಗಳು ಎಂದು ತಿಳಿಸಿದ್ದಾರೆ. ಆದರೆ ಬಿ ಎಂ ಡಬ್ಲ್ಯೂ ಕಾರಿನ ನಾಲ್ಕು ಟೈರುಗಳು ಮೊತ್ತ 6 ಲಕ್ಷಕ್ಕಿಂತಲೂ ಹೆಚ್ಚು ಎಂಬುದು ಸಾಮಾನ್ಯ ಜ್ಞಾನ. ಇದೇ ವಿಷಯವನ್ನು ಇದೀಗ ಹೊರಗಡೆ ತೆಗೆದಿರುವ ಸಾಮಾಜಿಕ ನ್ಯಾಯವಾದಿ ಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಲು ನಿರ್ಧಾರ ಮಾಡಿ, ನಾಮಪತ್ರದಲ್ಲಿ ತಪ್ಪು ಮಾಹಿತಿ ಸಲ್ಲಿಸಿರುವ ಕಾರಣ ಈ ಕೂಡಲೇ ಶಾಸಕ ಸ್ಥಾನದಿಂದ ಅನರ್ಹ ಮಾಡಬೇಕು ಎಂದು ಮನವಿ ಮಾಡಲಿದ್ದಾರೆ ಎಂಬುದು ತಿಳಿದುಬಂದಿದೆ.