ತ್ರಿವರ್ಣ ಧ್ವಜಕ್ಕೆ ಗೌರವವಿಲ್ಲ ! ಕಲಾಂ ರವರಿಗೂ ಗೌರವ ನೀಡದ ಜಗನ್ ರೆಡ್ಡಿ ! ಪಕ್ಷ, ಪಿತೃ ವಾತ್ಸಲ್ಯವೇ ಮುಖ್ಯ ! ಈತ ಮಾಡುತ್ತಿರುವುದಾದರೂ ಏನು ಗೊತ್ತಾ??

ಇದೀಗ ಆಂಧ್ರಪ್ರದೇಶದ ಪರಿಸ್ಥಿತಿ ಹೇಗಾಗಿದೆ ಎಂದರೇ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಕಾಣುತ್ತಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ ಜಗಮೋಹನ್ ರೆಡ್ಡಿ ರವರು ತಮ್ಮ ಅಧಿಕಾರಕ್ಕೇರಿರುವ ಮಹತ್ವವನ್ನು ಮರೆತು ಜನರ ಕಷ್ಟಗಳಿಗೆ ಸ್ಪಂದನೆ ನೀಡುವ ಬದಲು ಇನ್ನಿಲ್ಲದ ವಿವಾದಗಳನ್ನು ಸೃಷ್ಟಿಸಿ ದೇಶಕ್ಕೆ ಹಾಗೂ ಮಹಾನ್ ವ್ಯಕ್ತಿಗಳಿಗೆ ಅಗೌರವ ತೋರುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಆಂಧ್ರಪ್ರದೇಶ ರಾಜ್ಯದಲ್ಲಿ ಸ್ಥಳೀಯರಿಗೆ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ನೀಡುವ ಮೂಲಕ ಜಗಮೋಹನ್ ರೆಡ್ಡಿ ರವರು ನಾನು ಆಂಧ್ರ ಪ್ರದೇಶವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ ಎಂದು ದೊಡ್ಡ ದೊಡ್ಡ ಭಾಷಣಗಳನ್ನು ಮಾಡಿದರು. ಆದರೆ ಈ ಕೆಲಸದ ನಂತರ ಜಗಮೋಹನ್ ರೆಡ್ಡಿ ರವರು ಮಾಡುತ್ತಿರುವ ಕೆಲಸಗಳನ್ನು ನೋಡಿದರೇ ಜನರು ಇವರ ಕೈಗೆ ಯಾಕಾದರೂ ಅಧಿಕಾರ ನೀಡಿದರೋ ಎಂಬ ಭಾವನೆ ಮೂಡುತ್ತಿದೆ. ಒಟ್ಟಿನಲ್ಲಿ ಆಂಧ್ರಪ್ರದೇಶದಲ್ಲಿ ಇದೀಗ ಮುಖ್ಯಮಂತ್ರಿ ಕುರ್ಚಿ ಮಂಗನ ಕೈಗೆ ಮಾಣಿಕ್ಯ ನೀಡಿದಂತಾಗಿದೆ.

ಮೊದಲಿಂದಲೂ ಆಂಧ್ರ ಪ್ರದೇಶದಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜದ ಬಣ್ಣಗಳನ್ನು ಬಳಿಯಲಾಗಿತ್ತು ಆದರೆ ಕೇವಲ ತನ್ನ ಪಕ್ಷದ ಜಾಹೀರಾತು ಗಾಗಿ ತ್ರಿವರ್ಣ ಧ್ವಜ ಇರುವ ಬಣ್ಣ ಬದಲಾಯಿಸಿ ತನ್ನ ಪಕ್ಷದ ಚಿನ್ಹೆಯನ್ನು ಬರೆಸಿ ಬಾರಿ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದರು. ಆದರೆ ಜಗನ್ಮೋಹನ್ ರೆಡ್ಡಿ ರವರು ತದನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಆಕ್ರೋಶ ವ್ಯಕ್ತವಾದ ಮೇಲೆ ಗೃಹ ಸಚಿವಾಲಯ ಖಡಕ್ ಆದೇಶ ಹೊರಡಿಸಿದ ಕಾರಣ ಸರ್ಕಾರಿ ಕಟ್ಟಡಗಳ ಮೇಲೆ ಮತ್ತೊಮ್ಮೆ ತ್ರಿವರ್ಣ ಧ್ವಜದ ಪೇಂಟ್ ಮಾಡಲಾಗಿತ್ತು.

ಈ ಘಟನೆ ಮರೆಮಾಚುವ ಮುನ್ನವೇ ಇದೀಗ ಹಲವಾರು ವರ್ಷಗಳಿಂದ ಆಂಧ್ರ ಪ್ರದೇಶದ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಶಾಲಾ ಮಟ್ಟದಲ್ಲಿ ಅಜಾತಶತ್ರು ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಇದರ ಮೇಲೆ ವಕ್ರದೃಷ್ಟಿ ತೋರಿಸಿರುವ ಜಗಮೋಹನ್ ರೆಡ್ಡಿ ರವರು ಅಬ್ದುಲ್ ಕಲಾಂರವರ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡದೇ ವೈಎಸ್ಆರ್ ಪ್ರತಿಭಾ ಪುರಸ್ಕಾರ ಎಂದು ಹೆಸರು ಬದಲಾಯಿಸಿದ್ದಾರೆ. ಮಕ್ಕಳಿಗೆ ಅಬ್ದುಲ್ ಕಲಾಂರವರ ಹೆಸರಿನಲ್ಲಿ ಪುರಸ್ಕಾರ ನೀಡಿ, ಉತ್ತೇಜಿಸಿ ಅಬ್ದುಲ್ ಕಲಾಂ ರವರ ದಾರಿಯಲ್ಲಿ ನಡೆಸುವ ಬದಲು ಪಿತೃ ವಾತ್ಸಲ್ಯಕ್ಕೆ ಮರುಳಾಗಿ ಅವರ ತಂದೆ ಹೆಸರು ಇಟ್ಟಿರುವುದು ಎಷ್ಟು ಸರಿ ಎಂಬುದು ನಮ್ಮ ಅಭಿಪ್ರಾಯ.

Facebook Comments

Post Author: Ravi Yadav