ಚೀನಾ ದೇಶಕ್ಕೆ ತಿರುಗೇಟು ನೀಡಲು ಮಹತ್ವದ ಹೆಜ್ಜೆ ಇಟ್ಟ ಸೇನೆ ! ಉತ್ತರಕಾಂಡ್ ಸಿಎಂ ಮನವಿಗೆ ಸ್ಪಂದಿಸಿ ಮಹತ್ವದ ನಿರ್ಧಾರ ತೆಗೆದುಕೊಂಡ ಬಿಪಿನ್ ರಾವತ್

ಇನ್ನು ಮುಂದೆ ಉತ್ತರಾಖಂಡ್ ಗಡಿಯಲ್ಲಿ ಭಾರತ ಸೇನೆ ಆರ್ಭಟ ಮಾಡಲಿದೆ, ಚೀನಾ ದೇಶವು ಬಾಲ ಬಿಚ್ಚಿದರೆ ತಕ್ಕ ತಿರುಗೇಟು ನೀಡಲು ಹೆಚ್ಚು ಸಮಯ ಬೇಕಾಗಿಲ್ಲ. ಭಾರತ ಹಾಗೂ ಚೀನಾ ದೇಶದ ಗಡಿಯಲ್ಲಿ ತನ್ನ ಪ್ರದೇಶವನ್ನು ಹಂಚಿಕೊಂಡಿರುವ ಉತ್ತರಕಾಂಡ ರಾಜ್ಯವು ಕಳೆದ ಅರವತ್ತು ವರ್ಷಗಳಿಂದ ಅಭಿವೃದ್ಧಿಯನ್ನು ಕಂಡಿರಲಿಲ್ಲ.

ಭಾರತ ದೇಶದ ವಿರುದ್ಧ ಸದಾ ಕತ್ತಿ ಮಸೆಯುತ್ತಿದ್ದ ಚೀನಾ ದೇಶವು ಈ ಪ್ರದೇಶದಲ್ಲಿ ಭಾರತದ ಬೆನ್ನಿಗೆ ಚೂರಿ ಹಾಕುವಂತಹ ಹಲವಾರು ಕುತಂತ್ರಗಳನ್ನು ಮಾಡಿತ್ತು. ಆದರೆ ಅಂದು ಭಾರತದಿಂದ ಈ ವಿಷಯಗಳಲ್ಲಿ ಯಾವುದೇ ಪ್ರತಿರೋಧ ವ್ಯಕ್ತವಾಗಿರಲಿಲ್ಲ, ಸೇನೆಯನ್ನು ಸರ್ಕಾರ ಸಂಪೂರ್ಣವಾಗಿ ಕಟ್ಟಿಹಾಕಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ, ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿರುವ ಕೇಂದ್ರ ಸರ್ಕಾರವು ಯಾವುದೇ ರೀತಿಯ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಮೋದನೆ ನೀಡಿ ಬೇಕಾದ ಬಜೆಟ್ಟನ್ನು ನೀಡಲು ಹಿಂದೆ ಮುಂದೆ ನೋಡುತ್ತಿಲ್ಲ.

ಅಷ್ಟೇ ಅಲ್ಲದೆ ಚೀನಾದೇಶವು ಒಂದು ವೇಳೆ ಭಾರತದ ಮೇಲೆ ದಾಳಿ ಮಾಡಲು ನಿರ್ಧಾರ ಮಾಡಿದ್ದಾರೇ ಏಕಾಏಕಿ ತನ್ನ ಬೃಹತ್ ಯುದ್ಧ ವಿಮಾನಗಳ ಮೂಲಕ ಮುಂದೆಬಂದರೆ ಭಾರತದೇಶವು ಯುದ್ಧ ತಯಾರಿ ಮಾಡುವಷ್ಟರಲ್ಲಿ ಯಾರೂ ಊಹಿಸಲಾಗದ ಹಾನಿ ನಡೆದು ಹೋಗುವ ಸಾಧ್ಯತೆಯೇ ಹೆಚ್ಚಾಗಿತ್ತು. ಅದೇ ಕಾರಣದಿಂದ ಇದೀಗ ಉತ್ತರಾಖಂಡ್ ಮುಖ್ಯಮಂತ್ರಿಗಳು ಭಾರತೀಯ ಸೇನಾ ಅಧ್ಯಕ್ಷರಾಗಿರುವ ಬಿಪಿನ್ ರಾವತ್ ಅವರ ಬಳಿ ಹೊಸದೊಂದು ಮನವಿ ಮಾಡಿದ್ದರು. ಗಡಿಯಲ್ಲಿ ಈ ಕೂಡಲೇ ಚೀನಾ ದೇಶ ಬಾಲ ಬಿಚ್ಚಿದ ತಕ್ಷಣ ತಿರುಗೇಟು ನೀಡುವಂತಹ ಸಿದ್ಧತೆ ಮಾಡಬೇಕಾಗಿ ವಿನಂತಿ ಮಾಡಿದ್ದರು.

ಇದಕ್ಕೆ ಸ್ಪಂದನೆ ನೀಡಿರುವ ಬಿಪಿನ್ ರಾವತ್ ರವರು ಉತ್ತರಾಖಂಡ್ ಗಡಿಯಲ್ಲಿ ಭಾರತೀಯ ವಾಯುಸೇನೆಯ ಮುಂಗಡ ನಿಲ್ದಾಣಗಳನ್ನು ನಿರ್ಮಾಣ ಮಾಡಿ ಹೆಚ್ಚು ಸಂಖ್ಯೆಯಲ್ಲಿ ವಾಯುಪಡೆಯ ನಿಯೋಜನೆ ಮಾಡಲು ಹಸಿರು ನಿಶಾನೆ ತೋರಿದ್ದಾರೆ. ಪಾಕಿಸ್ತಾನ ಹಾಗೂ ಚೀನಾ 2 ಗಡಿಯಲ್ಲಿ ಅತಿ ಹೆಚ್ಚು ಜನರನ್ನು ಸಂಪರ್ಕ ನಡೆಸಲು ಸಾಧ್ಯವಾಗುವಂತಹ ವ್ಯವಸ್ಥೆಯನ್ನು ಕೂಡಲೇ ಸಿದ್ಧಪಡಿಸುವುದಕ್ಕೆ ಘೋಷಣೆ ಮಾಡಿರುವ ಬಿಪಿನ್ ರಾವತ್ ರವರು ಕೇಂದ್ರ ಸರ್ಕಾರದ ಅನುಮೋದನೆ ಪಡೆಯದೆ ಕ್ಷಣಮಾತ್ರದಲ್ಲಿ ಸಿಎಂ ಮನವಿಗೆ ಸ್ಪಂದಿಸಿದ ಕಾರಣ, ಉತ್ತರಖಂಡ್ ಸಿಎಂ ರವರು ಭಾರತೀಯ ಸೇನೆಗೆ ಈ ರೀತಿಯ ಸಂಪೂರ್ಣ ಸ್ವತಂತ್ರ ನೀಡಿರುವ ಕಾರಣಕ್ಕಾಗಿ ನರೇಂದ್ರ ಮೋದಿ ರವರಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

Facebook Comments

Post Author: Ravi Yadav