ಕೊಹ್ಲಿ ರವರ ಮೇಲಿದ್ದ ಕಳಂಕವನ್ನು ತೆಗೆದು ಹಾಕಿದ ದಾದಾ ! ತಪ್ಪು ಆಪಾದನೆ ಮಾಡಿದ ಎಲ್ಲರಿಗೂ ತಕ್ಕ ತಿರುಗೇಟು !

ಕೊಹ್ಲಿ ರವರು ಭಾರತ ತಂಡದ ನಾಯಕರಾದ ಮೇಲೆ ಮೈದಾನದಲ್ಲಿ ಅಪ್ರತಿಮ ನಾಯಕನಾಗಿ ಮೆರೆಯುತ್ತಿದ್ದಾರೆ. ಮೈದಾನದಲ್ಲಿ ವಿರೋಧಿಗಳ ವಿರುದ್ಧ ಅಗ್ರೆಸ್ಸಿವ್ ಆಗಿ ಆಡುವ ಕಾರಣ ವಿರಾಟ್ ಕೊಹ್ಲಿ ರವರನ್ನು ಹಲವಾರು ಜನ ಟೀಕೆ ಮಾಡುತ್ತಾರೆ. ಆದರೆ ಆಟದಲ್ಲಿ ಆ ಕಿಚ್ಚು ಇರದೇ ಇದ್ದರೇ, ಎದುರಾಳಿಗಳನ್ನು ಸೋಲಿಸಿದರೂ ಮಜಾ ಸಿಗುವುದಿಲ್ಲ ಎಂದು ಮತ್ತಷ್ಟು ಜನ ಇವರ ಬೆಂಬಲಕ್ಕೆ ನಿಲ್ಲುತ್ತಾರೆ.

ಈ ಎಲ್ಲಾ ವಾದ ವಿವಾದಗಳ ನಡುವೆ ಮೊದಲಿಂದಲೂ ವಿರಾಟ್ ಕೊಹ್ಲಿ ರವರು ಬಿಸಿಸಿಐ ಸಂಸ್ಥೆಯನ್ನು ಕೈಗೊಂಬೆ ಮಾಡಿಕೊಂಡಿದ್ದಾರೆ, ಅದೇ ಕಾರಣಕ್ಕೆ ಆಯ್ಕೆ ಸಮಿತಿ ವಿಚಾರದಲ್ಲಿ ಕೊಹ್ಲಿ ಮೂಗು ತೂರಿಸಿ ಪ್ರಭುತ್ವ ಸ್ಥಾಪಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಷ್ಟೇ ಅಲ್ಲದೇ ಇಡೀ ವಿಶ್ವದ ಬಹುತೇಕ ತಂಡಗಳು ಒಪ್ಪಿಕೊಂಡಿರುವ ಹಗಲು ರಾತ್ರಿಯ ಪಂದ್ಯಕ್ಕೆ ಬಿಸಿಸಿಐ ಸಂಸ್ಥೆ ಒಪ್ಪಿಗೆ ನೀಡದೇ ಇರಲು ಮುಖ್ಯ ಕಾರಣ ಕೊಹ್ಲಿ ರವರು ಎಂದು ಕೆಲವರು ಆರೋಪ ಮಾಡಿದ್ದರು.

ಜನರು ಇಂದಿನ ಜೀವನ ಶೈಲಿಯಲ್ಲಿ ಕೆಲಸವನ್ನು ಬಿಟ್ಟು ಟೆಸ್ಟ್ ಪಂದ್ಯವನ್ನು ವೀಕ್ಷಣೆ ಮಾಡಲು ಬರುವುದಿಲ್ಲ. ಆ ಕಾರಣಕ್ಕಾಗಿ ಡೇ-ನೈಟ್ ಪಂದ್ಯವು ಟೆಸ್ಟ್ ಮಾದರಿಯನ್ನು ಉಳಿಸಬೇಕು ಎಂದರೆ ಅತ್ಯಗತ್ಯ ಆದರೆ ಕೊಹ್ಲಿ ರವರು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಜರಿದಿದ್ದರು. ಆದರೆ ಇಲ್ಲಿ ಡೇ ನೈಟ್ ಟೆಸ್ಟ್ ಪಂದ್ಯವಾದಳು ಬಿಸಿಸಿಐ ಸಂಸ್ಥೆ ಸಮ್ಮತಿ ನೀಡಿರಲಿಲ್ಲ. ಬದಲಾಗಿ ಕೊಹ್ಲಿ ರವರ ಹಸ್ತಕ್ಷೇಪವಿಲ್ಲ ಎಂಬುದು ತಿಳಿದು ಬಂದಿದೆ.

ಆದರೆ ಈ ಎಲ್ಲಾ ವಾದ ವಿವಾದಗಳನ್ನು ತೆಗೆದು ಹಾಕಿರುವ ಬಿಸಿಸಿಐ ಸಂಸ್ಥೆಯ ನೂತನ ಅಧ್ಯಕ್ಷ ನಮ್ಮೆಲ್ಲ ನೆಚ್ಚಿನ ಸೌರವ್ ಗಂಗೂಲಿ ರವರು, ಇಷ್ಟು ದಿವಸ ಮಾಡಿದ ಆರೋಪಗಳೆಲ್ಲವೂ ಸುಳ್ಳು, ಕೊಹ್ಲಿ ರವರು ಸಹ ಹಗಲು ರಾತ್ರಿಯ ಟೆಸ್ಟ್ ಪಂದ್ಯ ಆಡಲು ತುದಿಗಾಗಲಿ ನಿಂತಿದ್ದಾರೆ. ನಾವು ಕೇಳಿದ ಮೊದಲ ಪ್ರಶ್ನೆಯೇ ಅದು ! ನಿಮಗೆ ಹಗಲು ರಾತ್ರಿಯ ಟೆಸ್ಟ್ ಪಂದ್ಯ ಆಡಲು ಇಷ್ಟವೇ ಎಂದಾಗ ಕೇವಲ ಮೂರು ಸೆಕೆಂಡ್ ಗಳಲ್ಲಿ ಹೌದು, ಇದು ಬಹಳ ಅತ್ಯಗತ್ಯ. ಕಾಲಿ ಮೈದಾನದಲ್ಲಿ ನಾವು ಎಷ್ಟೇ ಅದ್ಭುತ ಪ್ರದರ್ಶನ ನೀಡಿದರೂ ಪ್ರಯೋಜನವಿಲ್ಲ ಎಂದು ಕೊಹ್ಲಿ ಉತ್ತರಿಸಿದ್ದಾರೆ ಎಂದಿದ್ದಾರೆ.

Facebook Comments

Post Author: RAVI