ರಮೇಶ್ ಜಾರಿಕಿಹೊಳಿ ಕೊಟ್ಟ ಏಟಿಗೆ ತತ್ತರಿಸಿದ ಸಿದ್ದು, ಕಾಂಗ್ರೆಸ್ ! ಅರಳಲಿದೆಯೇ ಕಮಲ??

ರಮೇಶ್ ಜಾರಿಕಿಹೊಳಿ ಕೊಟ್ಟ ಏಟಿಗೆ ತತ್ತರಿಸಿದ ಸಿದ್ದು, ಕಾಂಗ್ರೆಸ್ ! ಅರಳಲಿದೆಯೇ ಕಮಲ??

ಇದೀಗ ಈಗಾಗಲೇ ರಾಜ್ಯದಲ್ಲಿ ಉಪ ಚುನಾವಣೆಯ ಕಾವು ಏರ ತೊಡಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ತೊರೆದಿರುವ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಣೆಗೊಂಡ ಮರು ಕ್ಷಣ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದು ಕೊಳ್ಳಲಿದ್ದಾರೆ. ಇದರಿಂದ ಕುಪಿತಗೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಸರ್ಕಾರ ಉರುಳಿಸಿರುವ ಕಾರಣ ಹಾಗೂ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋತರೆ ಸರ್ಕಾರ ಉರುಳಲಿರುವ ಕಾರಣ ಹೇಗಾದಾರೂ ಮಾಡಿ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೋಲುಣಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿ ಕೊಳ್ಳುತ್ತಿವೆ.

ಇಷ್ಟೇ ಅಲ್ಲದೇ ಹರಿಯಾಣ ಹಾಗೂ ಮಹಾರಾಷ್ಟ್ರ ಚುನಾವಣೆಯಲ್ಲಿ ಪಕ್ಷಾಂತರ ಮಾಡಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಬಹುತೇಕ ಶಾಸಕರು ಸೋಲನ್ನು ಕಂಡಿರುವ ಕಾರಣ ಕರ್ನಾಟಕ ರಾಜ್ಯ ದಲ್ಲಿಯೂ ಅದೇ ರೀತಿಯ ಫಲಿತಾಂಶ ಕಾಣಬಹುದು ಎಂದು ಅಂದಾಜು ಮಾಡಲಾಗುತ್ತದೆ. ಆದರೆ ಅಷ್ಟರಲ್ಲೇ ಇದೀಗ ಗೋಕಾಕ್ ಕ್ಷೇತ್ರದ ಸಾಹುಕಾರ ರಮೇಶ್ ಜಾರಕಿಹೊಳಿ ರವರು ತಮ್ಮ ಆಟ ಆರಂಭಿಸಿದ್ದಾರೆ.

ಹೌದು, ಒಂದು ಕಡೆ ರಮೇಶ್ ಜಾರಕಿಹೊಳಿ ರವರ ವಿರುದ್ಧ ಸಹೋದರ ಸತೀಶ್ ಜಾರಕಿಹೊಳಿ ರವರು ಕಿಡಿ ಕಾರುತ್ತಿರುವ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿರುವ ರಮೇಶ್ ಜಾರಕಿಹೊಳಿ ರವರು ಒಂದೇ ಫೋನ್ ಕಾಲ್ ನಿಂದ ಗೋಕಾಕ್ ತಾಲೂಕು ಪಂಚಾಯಿತ್ ನ 23 ಕ್ಕೂ ಹೆಚ್ಚು ಸದಸ್ಯರನ್ನು ರಾಜೀನಾಮೆ ನೀಡುವಂತೆ ಮಾಡಿದ್ದಾರೆ. ಕೇವಲ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷವು ಈ ಎಲ್ಲಾ ತಾಲೂಕು ಸದಸ್ಯರ ಬೆಂಬಲವಿಲ್ಲದೆ ಗೋಕಾಕ್ ಕ್ಷೇತ್ರದಲ್ಲಿ ಗೆಲುವು ಕಾಣುವುದು ಅಸಾಧ್ಯ ಎಂದೇ ಹೇಳಲಾಗುತ್ತಿದೆ. ಕ್ಷೇತ್ರದ ಮೇಲೆ ಬಿಗಿ ಹಿಡಿತವನ್ನು ಇಟ್ಟಿರುವ ರಮೇಶ್ ಜಾರಕಿಹೊಳಿ ರವರು, ಒಂದು ವೇಳೆ ತಾವು ಸ್ಪರ್ಧಿಸದೇ ಇರಲು ಸಾಧ್ಯವಾಗದೆ ಇದ್ದಲ್ಲಿ ತಮ್ಮ ಅಳಿಯ ರವರನ್ನು ಸ್ಪರ್ಧೆ ಮಾಡುವಂತೆ ಮಾಡಿ ಗೆಲ್ಲಿಸಿಕೊಂಡು ವಿಧಾನಸೌಧಕ್ಕೆ ಕಳುಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಒಟ್ಟಿನಲ್ಲಿ ಬಾರಿ ಕುತೂಹಲ ಮೂಡಿಸಿರುವ ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆದ್ದು ಸರ್ಕಾರ ಉಳಿಸಿಕೊಳ್ಳುತ್ತಾ ಅಥವಾ ಸರ್ಕಾರ ಬಹುಮತ ಕಳೆದುಕೊಂಡು ರಾಜ್ಯ ಮತ್ತೊಂದು ಮಧ್ಯಂತರ ಚುನಾವಣೆಯನ್ನು ಕಾಣುತ್ತಾ ಎಂಬುದನ್ನು ಕಾದು ನೋಡಬೇಕಿದೆ.