ಟಿಪ್ಪುವಿನ ಪಠ್ಯದ ಕುರಿತು ಶಾಸಕರ ಮನವಿಗೆ ಸ್ಪಂದಿಸಿ ಮಹತ್ವದ ಹೆಜ್ಜೆಯಿಟ್ಟ ಶಿಕ್ಷಣ ಸಚಿವ ಸುರೇಶ್ ಕುಮಾರ್ !

ಟಿಪ್ಪುವಿನ ಪಠ್ಯದ ಕುರಿತು ಶಾಸಕರ ಮನವಿಗೆ ಸ್ಪಂದಿಸಿ ಮಹತ್ವದ ಹೆಜ್ಜೆಯಿಟ್ಟ ಶಿಕ್ಷಣ ಸಚಿವ ಸುರೇಶ್ ಕುಮಾರ್ !

ಇದೀಗ ರಾಜ್ಯದಲ್ಲಿ ಮತ್ತೊಮ್ಮೆ ಟಿಪ್ಪು ಸುಲ್ತಾನ್ ವಿಚಾರದಲ್ಲಿ ವಿವಾದ ಹೆಚ್ಚಾಗಿದೆ. ಇಷ್ಟು ದಿವಸ ಟಿಪ್ಪು ಜಯಂತಿ ಆಚರಣೆಯ ವಿರುದ್ಧ ಭಾರಿ ವಿರೋಧ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಶಾಂತಿ ಕಾಪಾಡಲು ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿರುವುದಾಗಿ ಘೋಷಣೆ ಮಾಡಿದ ಬಳಿಕ ಮತ್ತೊಂದು ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಹೊಸ ಸವಾಲು ಎದುರಾಗಿದೆ.

ಇತ್ತೀಚೆಗೆ ಮಡಿಕೇರಿಯ ಶಾಸಕ ಅಪ್ಪಚ್ಚು ರಂಜನ್ ರವರು ಟಿಪ್ಪು ಸುಲ್ತಾನ್ ರವರ ಬಗ್ಗೆ ಶಾಲೆಯಲ್ಲಿ ಇರುವ ಪಠ್ಯ ಕ್ರಮಗಳನ್ನು ತೆಗೆದು ಹಾಕುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಅಪ್ಪಚ್ಚು ರಂಜನ್ ರವರ ಈ ಮನವಿಗೆ ರಾಜ್ಯದ ಬಹುತೇಕ ಜನರು ಬೆಂಬಲವನ್ನು ಸೂಚಿಸಿದ್ದರು, ಇನ್ನು ಕೆಲವು ಜನ ವಿರೋಧ ವ್ಯಕ್ತಪಡಿಸಿದರೇ, ಮತ್ತಷ್ಟು ಜನ ಟಿಪ್ಪು ಸುಲ್ತಾನ್ ರವರ ಬಗ್ಗೆ ಶಾಲಾ ಪುಸ್ತಕಗಳಲ್ಲಿ ಇರಬೇಕು ಆದರೆ ಇದೀಗ ಮಕ್ಕಳು ಓದುತ್ತಿರುವ ಸುಳ್ಳು ಸುದ್ದಿಯನ್ನು ತೆಗೆದು ಆತನ ನೈಜ ಜೀವನದ ಕೃತ್ಯಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದು ಅಭಿಪ್ರಾಯಗಳನ್ನು ಹೊರಹಾಕಿದ್ದರು.

ಇದೀಗ ಅಪ್ಪಚ್ಚು ರಂಜನ್ ರವರ ಮನವಿಗೆ ಸ್ಪಂದನೆ ನೀಡಿರುವ ರಾಜ್ಯ ಸರ್ಕಾರವು ಇನ್ನು ಕೇವಲ ಮೂರೇ ಮೂರು ದಿನಗಳಲ್ಲಿ ತನ್ನ ನಿರ್ಧಾರವನ್ನು ಪ್ರಕಟಣೆ ಮಾಡುವುದಾಗಿ ತಿಳಿಸಿದೆ. ಇದರ ಕುರಿತು ಇಂದೇ ಮಹತ್ವದ ಹೆಜ್ಜೆ ಇಟ್ಟಿರುವ ಸುರೇಶ್ ಕುಮಾರ್ ರವರು ಕೂಡಲೇ ಪಠ್ಯ ಪುಸ್ತಕ ರಚನಾ ಸಮಿತಿಯ ಸಭೆ ಕರೆಯಲು ನಿರ್ಧಾರ ಮಾಡಿದ್ದಾರೆ. ಇತಿಹಾಸ ಪಠ್ಯ ಪುಸ್ತಕ ರಚನಾ ಸಮಿತಿ ಸಭೆಯನ್ನು ಕರೆಯಲು ಸೂಚನೆ ನೀಡುವ ಮೂಲಕ ತುರ್ತು ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಸಭೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮಕ್ಕಳ ಇತಿಹಾಸ ಪುಸ್ತಕಗಳಲ್ಲಿ  ಟಿಪ್ಪು ಸುಲ್ತಾನ್ ರವರ ಬಗ್ಗೆ ಇರುವ ಪಠ್ಯದ ಅಗತ್ಯತೆ ಕುರಿತು ಹಾಗೂ ಮಕ್ಕಳಿಗೆ ಆ ಪಾಠವನ್ನು ಬೋಧಿಸ ಬೇಕೋ ಅಥವಾ ಬೇಡವೇ ಎಂಬುದರ ಬಗ್ಗೆ ಸಂಪೂರ್ಣವಾಗಿ ಚರ್ಚೆ ಮಾಡಿ ಇನ್ನು ಕೇವಲ ಮೂರು ದಿನಗಳ ನಂತರ ನಿರ್ಧಾರ ಪ್ರಕಟಣೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಮೊದಲಿನಿಂದಲೂ ಬಿಜೆಪಿ ಪಕ್ಷ ಟಿಪ್ಪು ಸುಲ್ತಾನ್ ರವರ ವಿರುದ್ಧ ಹೋರಾಟ ಮಾಡುತ್ತಿರುವ ಕಾರಣ ಈ ಸಭೆಯ ಫಲಿತಾಂಶವು ಬಹುತೇಕ ಟಿಪ್ಪು ಸುಲ್ತಾನ್ ರವರ ಪಠ್ಯಗಳನ್ನು ತೆಗೆಯುವ ನಿರ್ಧಾರವಾಗಿರುತ್ತದೆ ಎಂದು ಎಲ್ಲೆಡೆ ಮಾತುಗಳು ಕೇಳಿಬರುತ್ತಿದೆ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.