ಬಿಗ್ ಬ್ರೇಕಿಂಗ್: ಶಿವಸೇನಾ ಪಕ್ಷಕ್ಕೆ ಬಿಗ್ ಶಾಕ್ !ಠಾಕ್ರೆ ವಿರುದ್ಧ ಸಿಡಿದೆದ್ದ ಶಿವಸೇನಾ ಶಾಸಕರು ಯಾಕೆ ಗೊತ್ತಾ??

ಬಿಗ್ ಬ್ರೇಕಿಂಗ್: ಶಿವಸೇನಾ ಪಕ್ಷಕ್ಕೆ ಬಿಗ್ ಶಾಕ್ !ಠಾಕ್ರೆ ವಿರುದ್ಧ ಸಿಡಿದೆದ್ದ ಶಿವಸೇನಾ ಶಾಸಕರು ಯಾಕೆ ಗೊತ್ತಾ??

ಇದೀಗ ಮಹಾರಾಷ್ಟ್ರದಲ್ಲಿ ರಾಜಕೀಯ ಅತಂತ್ರ ಸ್ಥಿತಿ ತಲುಪಿದೆ. ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡು ಬಹುಮತ ಗಳಿಸಿದರೂ ಸಹ ಶಿವಸೇನಾ ಹಾಗೂ ಬಿಜೆಪಿ ಪಕ್ಷಗಳು ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿರುವ ಕಾರಣ ಸರ್ಕಾರ ಇನ್ನೂ ರಚನೆಯಾಗಿಲ್ಲ. ಇದರ ಬೆನ್ನಲ್ಲೇ ಇಂದು ಶಿವಸೇನಾ ಪಕ್ಷವು ಬಿಜೆಪಿ ಪಕ್ಷದ ಜೊತೆ ನಡೆಯಬೇಕಿದ್ದ ಸಭೆಯನ್ನು ರದ್ದು ಮಾಡಿದೆ. ಉದ್ಧವ್ ಠಾಕ್ರೆ ರವರ ಈ ನಡೆ ಇದೀಗ ಶಿವಸೇನಾ ಪಕ್ಷಕ್ಕೆ ಮಾರಕವಾಗಿದೆ.

ಶಿವಸೇನಾ ಪಕ್ಷದ ಜೊತೆ ಅಂದು ಕೊಂಡಂತೆ ಸರ್ಕಾರ ರಚನೆ ಮಾಡಲು ಮಹಾರಾಷ್ಟ್ರ ಬಿಜೆಪಿ ನಾಯಕರು ವಿಫಲವಾದ ಕಾರಣ ಶಿವಸೇನಾ ಪಕ್ಷದ ನಾಯಕರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತೆ ಮನವೊಲಿಸಲು ದೆಹಲಿಯಿಂದ ಅಮಿತ್ ಶಾ ರವರು ಬಂದು ಶಿವಸೇನಾ ಪಕ್ಷದ ನಾಯಕರಾದ ಉದ್ಧವ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ ಅವರ ಜೊತೆ ಮಾತುಕತೆ ನಡೆಸಲು ನಿರ್ಧಾರ ಮಾಡಿದ್ದರು. ಆದರೆ ಇಂದು ನಡೆದ ಮಾಧ್ಯಮ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ರವರು ಯಾವುದೇ ಕಾರಣಕ್ಕೂ ಶಿವಸೇನಾ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದರು.

ಮೊದಲಿನಿಂದಲೂ ಮುಖ್ಯಮಂತ್ರಿ ಸ್ಥಾನ ಹಂಚಿಕೆಯ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದ ಫಡ್ನವಿಸ್ ರವರು ನಾವು 50:50 ಮಾತುಕತೆ ನಡೆಸುವಾಗ ಬೇರೆ ಸ್ಥಾನಗಳ ಬಗ್ಗೆ ಮಾತುಕತೆ ನಡೆದಿದೆ. ಆದರೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಶಿವಸೇನಾ ಪಕ್ಷವು ದೇವೇಂದ್ರ ಫಡ್ನವಿಸ್ ರವರ ವಿರುದ್ಧ ಕಿಡಿಕಾರಿ, ಶಿವಸೇನಾ ಪಕ್ಷದ ನಾಯಕ ಉದ್ಧವ್ ಠಾಕ್ರೆ ರವರು ಹಳೆಯ ವಿಡಿಯೋವನ್ನು ರಿಲೀಸ್ ಮಾಡಿ ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ ಹಾಗೂ ನಾಳೆ ನಡೆಯಬೇಕಿದ್ದ ಸಭೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.

ಇದರಿಂದ ಒಂದೆಡೆ ಬಿಜೆಪಿ ಪಕ್ಷದ ನಾಯಕರಲ್ಲಿ ಆಕ್ರೋಶ ಮನೆ ಮಾಡಿದರೇ ಮತ್ತೊಂದೆಡೆ ಸುಮಾರು ಶಿವಸೇನಾ ಪಕ್ಷದ 45 ಶಾಸಕರು ಉದ್ಧವ್ ಠಾಕ್ರೆ ಅವರ ಆದೇಶದ ವಿರುದ್ಧ ಮುನಿಸಿಕೊಂಡು ನಮಗೆ ದೇವೇಂದ್ರ ಫಡ್ನವಿಸ್ ರವರೇ ಮುಖ್ಯಮಂತ್ರಿ ಯಾಗಬೇಕು ಎಂಬ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಕೇವಲ ನಿನ್ನೆಯಷ್ಟೇ ಶಿವಸೇನಾ ಪಕ್ಷದ 56 ನೂತನ ಶಾಸಕರು ಬೇರೆ ಪಕ್ಷಕ್ಕೆ ಜಿಗಿಯುವ ಆತಂಕವನ್ನು ವ್ಯಕ್ತಪಡಿಸಿ, ಯಾರಾದರೂ ಪಕ್ಷಾಂತರ ಮಾಡಿದರೇ ಅವರ ರಾಜಕೀಯ ಜೀವನ ಅಂತ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ಉದ್ಧವ ಠಾಕ್ರೆ ರವರು ಇಂದು ಮತ್ತೊಮ್ಮೆ 43 ಶಾಸಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿ ರುವುದನ್ನು ಕಂಡು ಶಾಕ್ ಆಗಿದ್ದಾರೆ.