ಬಿಗ್ ಬ್ರೇಕಿಂಗ್: ಡಿಸಿಎಂ ಪೋಸ್ಟ್ ಕಳೆದುಕೊಳ್ಳುವ ಭೀತಿಯಲ್ಲಿ ಲಕ್ಷ್ಮಣ್ ಸವದಿ !

ಬಿಗ್ ಬ್ರೇಕಿಂಗ್: ಡಿಸಿಎಂ ಪೋಸ್ಟ್ ಕಳೆದುಕೊಳ್ಳುವ ಭೀತಿಯಲ್ಲಿ ಲಕ್ಷ್ಮಣ್ ಸವದಿ !

ರಾಜ್ಯ ರಾಜಕೀಯದಲ್ಲಿ ಇದೀಗ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಡೀ ರಾಜ್ಯವು ಅನರ್ಹ ಶಾಸಕರ ರಾಜೀನಾಮೆ ಇಂದ ತೆರವಾಗಿರುವ ಸ್ಥಾನಗಳಿಗೆ ನಡೆಯಲಿರುವ ಉಪ ಚುನಾವಣೆಯನ್ನು ಎದುರು ನೋಡುತ್ತಿವೆ. ಈ ಎಲ್ಲಾ ವಿದ್ಯಮಾನಗಳ ನಡುವೆ ಅಧಿಕಾರಯುತ ಪಕ್ಷದ ನಾಯಕ ಲಕ್ಷ್ಮಣ್ ಸವದಿ ರವರು ತಮ್ಮ ಉಪ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಬಿಜೆಪಿ ಪಕ್ಷದ ಹೈಕಮಾಂಡ್ ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ಲಕ್ಷ್ಮಣ್ ಸವದಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಕಂಡರೂ ಸಹ ಬಿಜೆಪಿ ಪಕ್ಷ ಅಧಿಕಾರ ರಚಿಸಿದ ಕ್ಷಣದಲ್ಲಿಯೇ ಯಾವುದೇ ಲಾಬಿ ನಡೆಸದೇ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದರು. ಆದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಭಾರತ ಸಂವಿಧಾನದ ಪ್ರಕಾರ ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಕೊಳ್ಳಬೇಕು ಎಂದರೆ ಚುನಾವಣೆಯಲ್ಲಿ ಗೆದ್ದು ಬರಬೇಕು ಅಥವಾ ಅಧಿಕಾರಕ್ಕೇರಿದ ನಿರ್ದಿಷ್ಟ ತಿಂಗಳಲ್ಲಿ ಚುನಾವಣೆಯನ್ನು ಎದುರಿಸಿ ಗೆಲ್ಲಬೇಕು ಅಥವಾ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಬೇಕು.

ಆದರೆ ಇದೀಗ ರಾಜ್ಯದಲ್ಲಿ ಉಪಚುನಾವಣೆಯೂ ನಡೆಯುತ್ತಿದ್ದರೂ ಲಕ್ಷ್ಮಣ್ ಸವದಿ ರವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗುವ ಸಾಧ್ಯತೆಗಳು ಕಡಿಮೆಯಾಗಿವೆ. ಅಥಣಿ ಕ್ಷೇತ್ರದಿಂದ ಅನರ್ಹ ಶಾಸಕ ಕುಮಟಳ್ಳಿ ರವರು ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಇದರ ನಡುವೆ ವಿಧಾನಪರಿಷತ್ ನಲ್ಲಿ ಲಕ್ಷ್ಮಣ್ ಸವದಿ ಅವರಿಗೆ ಯಾವೊಬ್ಬ ಬಿಜೆಪಿ ನಾಯಕರು ಸ್ಥಾನ ಬಿಟ್ಟು ಕೊಡಲು ತಯಾರಿಲ್ಲ ಎಂಬ ಸುದ್ದಿ ಹೊರ ಬಿದ್ದಿದೆ. ಲಕ್ಷ್ಮಣ್ ಸವದಿ ರವರಿಗಾಗಿ ಬಿಜೆಪಿ ಪಕ್ಷದ ವಿಧಾನಪರಿಷತ್ ಸದಸ್ಯರು ಸ್ಥಾನ ಬಿಟ್ಟುಕೊಡಲು ಸಿದ್ಧವಿಲ್ಲ, ಅವರ ಅಧಿಕಾರಕ್ಕಾಗಿ ನಾವ್ಯಾಕೆ ತ್ಯಾಗ ಮಾಡಬೇಕು ಎಂದು ಮರುಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ನಲ್ಲಿ ತನ್ನ ಬಲವಿದೆ ಎಂದು ಸ್ಥಳೀಯ ಬಿಜೆಪಿ ನಾಯಕರನ್ನು ಎದುರು ಹಾಕಿಕೊಂಡ ಕಾರಣ ಲಕ್ಷ್ಮಣ್ ಸವದಿ ರವರಿಗೆ ಈ ಪರಿಸ್ಥಿತಿ ಎದುರಾಗಿದೆ ಎಂದು ಅಭಿಪ್ರಾಯಗಳು ಕೇಳಿಬಂದಿವೆ. ಅಷ್ಟೇ ಅಲ್ಲದೆ ಕೆಲವು ರಾಜ್ಯ ಬಿಜೆಪಿ ನಾಯಕರೂ ಸಹ ಲಕ್ಷ್ಮಣ್ ಸವದಿ ರವರ ವಿರುದ್ಧ ಮುನಿಸಿ ಕೊಂಡಿರುವ ಕಾರಣ ಲಕ್ಷ್ಮಣ್ ಸವದಿ ರವರ ಉಪ ಮುಖ್ಯಮಂತ್ರಿ ಕುರ್ಚಿ ಇದೀಗ ಅತಂತ್ರ ಸ್ಥಿತಿ ತಲುಪಿದೆ. ಒಂದು ವೇಳೆ ನಿರ್ದಿಷ್ಟ ಸಮಯದಲ್ಲಿ ಯಾವುದಾದರೂ ಒಂದು ಸ್ಥಾನದಲ್ಲಿ ಗೆಲ್ಲದೇ ಹೋದರೆ ತಮಗೆ ನೀಡಿರುವ ಉಪ ಮುಖ್ಯಮಂತ್ರಿ ಸ್ಥಾನವನ್ನು ಲಕ್ಷ್ಮಣ್ ಸವದಿ ರವರು ಕಳೆದುಕೊಳ್ಳಲಿದ್ದಾರೆ.