ಸ್ಪೀಕರ್ ಅವರಿಗೆ ಏಕವಚನ ಬಳಸಿ ಯುಟರ್ನ್ ನೋಡಿದ ಸಿದ್ದು ! ಟ್ವೀಟ್ ಮೂಲಕ ತಕ್ಕ ತಿರುಗೇಟು ನೀಡಿದ ಸುರೇಶ್ ಕುಮಾರ್

ಸ್ಪೀಕರ್ ಅವರಿಗೆ ಏಕವಚನ ಬಳಸಿ ಯುಟರ್ನ್ ನೋಡಿದ ಸಿದ್ದು ! ಟ್ವೀಟ್ ಮೂಲಕ ತಕ್ಕ ತಿರುಗೇಟು ನೀಡಿದ ಸುರೇಶ್ ಕುಮಾರ್

ಕಳೆದ ವಿಧಾನಸಭಾ ಕಲಾಪದಲ್ಲಿ ವಿಪಕ್ಷ ಸ್ಥಾನದ ನಾಯಕರಾಗಿರುವ ಸಿದ್ದರಾಮಯ್ಯ ನವರು ನೀಡುತ್ತಿರುವ ಕಾಲಾವಕಾಶ ಸಾಕಾಗುತ್ತಿಲ್ಲ ಎಂದು ಸ್ಪೀಕರ್ ಅವರ ವಿರುದ್ಧ ಗುಡುಗಿದ್ದರು. ಸಿದ್ದರಾಮಯ್ಯ ರವರು ವಿಧಾನಸಭಾ ಕಲಾಪದ ಬಹುತೇಕ ಸಮಯವನ್ನು ತಾವೇ ಚರ್ಚೆ ಮಾಡಲು ತೆಗೆದುಕೊಂಡಿದ್ದ ಕಾರಣ ಸ್ಪೀಕರ್ ಅವರು ಸಿದ್ದರಾಮಯ್ಯ ರವರಿಗೆ ಬೇರೆ ನಾಯಕರಿಗೂ ಮಾತನಾಡಲು ಅವಕಾಶ ನೀಡುವಂತೆ ಕೋರಿದರು.

ಆದರೆ ಸಿದ್ದರಾಮಯ್ಯರವರು ಸ್ಪೀಕರ್ ಅವರಿಗೆ ಯಾವುದೇ ಗೌರವವನ್ನು ನೀಡದೆ ಏಕವಚನದಲ್ಲಿ ನಿಂದಿಸಿದ ನಿಮ್ಮ ಮಾತು ಕೇಳಬೇಕು ಎಂದು ಯಾವ ಕಾನೂನಿನಲ್ಲಿ ಬರೆದಿಲ್ಲ ಎಂದೆಲ್ಲಾ ಮಾತನಾಡಿ ಎಲ್ಲರ ಹುಬ್ಬೇರಿಸಿದ್ದರು. ಮಾಜಿ ಮುಖ್ಯಮಂತ್ರಿ ಯೊಬ್ಬರು ಮತ್ತೊಂದು ಸರ್ಕಾರ ರಚನೆಯಾದ ಸಂದರ್ಭದಲ್ಲಿ ಸ್ಪೀಕರ್ ಅವರಿಗೆ ನೀಡಬೇಕಾದ ಕನಿಷ್ಠ ಗೌರವವನ್ನು ನೀಡದೆ ಏಕವಚನದಲ್ಲಿ ಮಾತನಾಡಿದ್ದು ಎಷ್ಟು ಸರಿ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗುರಿಯಾಗಿತ್ತು.

ಇದೀಗ ಇದೇ ವಿಚಾರ ಮತ್ತೊಮ್ಮೆ ಸದ್ದು ಮಾಡುತ್ತಿದೆ, ಒಂದೆಡೆ ಸಿದ್ದರಾಮಯ್ಯ ರವರು ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದರೆ, ಮತ್ತೊಂದೆಡೆ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ರವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ವ್ಯಂಗ್ಯಭರಿತ ಮಾತುಗಳ ಮೂಲಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯರವರು ಸ್ಪೀಕರ್ ರವರನ್ನು ಏಕವಚನದಲ್ಲಿ ನಿಂದಿಸಿದ ಮಾತುಗಳು ಪ್ರಸಾರವಾಗಿದ್ದರೂ ಇದೀಗ ಬಿಜೆಪಿ ಪಕ್ಷ ಹಕ್ಕುಚುತಿ ಮಂಡಿಸಲು ಮುಂದಾಗಿರುವ ಕಾರಣ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿರುವ ಸಿದ್ದರಾಮಯ್ಯರವರು ನಾನು ಸ್ಪೀಕರ್ ಅವರನ್ನು ಏಕವಚನದಲ್ಲಿ ನಿಂದನೆ ಮಾಡಿಲ್ಲ, ಕ್ಷಮೆ ಕೇಳುವ ಪ್ರಸಂಗವೇ ಬರುವುದಿಲ್ಲ. ಬಿಜೆಪಿ ಪಕ್ಷ ಹಕ್ಕುಚ್ಯುತಿ ಮಂಡನೆ ಮಾಡಿಕೊಳ್ಳಿ, ಆದರೆ ನಾನು ಏಕವಚನದಲ್ಲಿ ನಿಂದನೆ ಮಾಡಿಲ್ಲ ಎಂದರೆ ಯಾಕೆ ಕ್ಷಮೆ ಕೇಳಬೇಕು ಎಂದು ಮರುಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ರವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡುತ್ತಿರುವ ಸುರೇಶ್ ಕುಮಾರ್ ರವರು, ಮೊನ್ನೆಯಷ್ಟೇ ಒಹ್ ದೇವರೇ ರಾಜ್ಯದ ಪ್ರತಿಪಕ್ಷ ಸ್ಥಾನದ ನಾಯಕನಿಗೆ ವಿಧಾನಸಭಾ ಕಲಾಪದಲ್ಲಿ ಸಭಾಧ್ಯಕ್ಷರನ್ನು ಏಕವಚನದಲ್ಲಿ ನಿಂದಿಸ ಬಾರದಂತೆ ಬುದ್ಧಿ ಕೊಡು ಎಂದು ವ್ಯಂಗ್ಯಭರಿತ ಮಾತುಗಳ ಮೂಲಕ ಕಾಲೆಳೆದಿದ್ದರು. ಇದೀಗ ಸಿದ್ದರಾಮಯ್ಯ ರವರು ಯು ಟರ್ನ್ ನೋಡಿದ ಮೇಲೆ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿರುವ ಸುರೇಶ್ ಕುಮಾರ್ ರವರು ಸಿದ್ದರಾಮಯ್ಯನವರೇ ನೀವು ಎಂದಾದರೂ ನಿಮಗಿಂತ ವಯಸ್ಸಿನಲ್ಲಿ ಚಿಕ್ಕವರಿರುವಾಗ ಗಾಂಧಿ ಅವರನ್ನು ಏಕವಚನದಲ್ಲಿ ಮಾತನಾಡಿದ್ದೀರಾ ಎಂದು ಪ್ರಶ್ನೆ ಮಾಡುವ ಮೂಲಕ ಮತ್ತೊಮ್ಮೆ ವ್ಯಂಗ್ಯಭರಿತ ಮಾತುಗಳ ಮೂಲಕ ತಿವಿದಿದ್ದಾರೆ, ಇನ್ನು ವಾಕ್ಸಮರ ಮತ್ತಷ್ಟು ಹೆಚ್ಚಾಗಿದ್ದು ಮುಂದೆ ಎಲ್ಲಿಯ ಮಟ್ಟಕ್ಕೆ ಹೋಗಿ ನಿಲ್ಲುತ್ತದೆ ಎಂಬುದನ್ನು ಕಾದುನೋಡಬೇಕಿದೆ.