ಬಿಜೆಪಿಗೆ ಕೈ ಕೊಟ್ಟು ಮತ್ತೊಂದು ಚುನಾವಣೆಯ ಕೂಗು ಕೂಗಿದ ಶಿವಸೇನಾ! ಹಿಂದುತ್ವ ಮಾತ್ರ ಬಿಡಲ್ಲ ಎಂದ ಠಾಕ್ರೆ !ಹೇಳಿದ್ದೇನು ಗೊತ್ತಾ??

BJPಗೆ ಕೈ ಕೊಟ್ಟು ಮತ್ತೊಂದು ಚುನಾವಣೆಯ ಕೂಗು ಕೂಗಿದ ಶಿವಸೇನಾ ! ಹಿಂದುತ್ವ ಮಾತ್ರ ಬಿಡಲ್ಲ ಎಂದ ಠಾಕ್ರೆ !ಹೇಳಿದ್ದೇನು ಗೊತ್ತಾ??

ಮಹಾರಾಷ್ಟ್ರ ರಾಜ್ಯದಲ್ಲಿ ಇದೀಗ ಮತ್ತೊಮ್ಮೆ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಬಿಜೆಪಿ ಪಕ್ಷಕ್ಕೆ ಶಿವಸೇನಾ ಪಕ್ಷವು ಕೊನೆ ಸಮಯದಲ್ಲಿ ಕೈಕೊಟ್ಟಿರುವ ಕಾರಣ ಮತ್ತೊಮ್ಮೆ ವಿಧಾನಸಭೆ ಚುನಾವಣೆ ನಡೆದರೇ ಅಚ್ಚರಿ ಪಡಬೇಕಿಲ್ಲ ಯಾಕೆಂದರೇ, ಇದೀಗ ಈ ಮಾತನ್ನು ಉದ್ಧವ್ ಠಾಕ್ರೆ ರವರೇ ಆಡಿದ್ದಾರೆ. ಆದರೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಸಂಪೂರ್ಣ ಮಾಹಿತಿಗಳಿಗಾಗಿ ಕೆಳಗಡೆ ಹೋದಿ ಹಾಗೂ ಮತ್ತಷ್ಟು ಸುದ್ದಿಗಳಿಗಾಗಿ ಬಲಕ್ಕೆ ಸ್ವೈಪ್ ಮಾಡಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಹಲವಾರು ವರ್ಷಗಳಿಂದ ಶಿವಸೇನಾ ಹಾಗೂ ಬಿಜೆಪಿ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡು ಚುನಾವಣೆಗಳನ್ನು  ಎದುರಿಸುತ್ತಾ ಮಹಾರಾಷ್ಟ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಕಳೆದ ಬಾರಿ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಜೊತೆ ಮೈತ್ರಿಯನ್ನು ತೊರೆದು ಚುನಾವಣೆಯನ್ನು ಎದುರಿಸಿದ್ದ ಶಿವಸೇನಾ ಪಕ್ಷವು ಹಿಂದೆಂದೂ ಕಾಣದಂತಹ ಹೀನಾಯ ಸೋಲನ್ನು ಕಂಡಿತ್ತು. ಚುನಾವಣೆ ನಡೆಯುವ ಸಂದರ್ಭದಲ್ಲಿ ನಾವು ಇನ್ನು ಮುಂದೆ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎನ್ನುತ್ತಿದ್ದ ಶಿವಸೇನಾ ಪಕ್ಷವು ಸ್ಥಳೀಯ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಬೇರೆ ದಾರಿಯಿಲ್ಲದೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಿ ಗೆಲುವು ಕಂಡಿತ್ತು. ಇದರ ಬೆನ್ನಲ್ಲೇ ವಿಧಾನಸಭಾ ಚುನಾವಣೆಯನ್ನು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಎರಡು ಪಕ್ಷಗಳು ಎದುರಿಸಿ ಇದೀಗ ಬಹುಮತ ಗಳಿಸುವುದರಲ್ಲಿ ಯಶಸ್ವಿಯಾಗಿವೆ.

ಆದರೆ ಇದೇ ಮೊದಲ ಬಾರಿಗೆ ಶಿವಸೇನಾ ಪಕ್ಷದ ಅಧ್ಯಕ್ಷರ ಕುಟುಂಬದ ಸದಸ್ಯರೊಬ್ಬರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರೇ ಉದ್ಧವ್ ಠಾಕ್ರೆ ರವರ ಮಗ ಆದಿತ್ಯ ಠಾಕ್ರೆ. ಯುವಕರಲ್ಲಿ ಭಾರೀ ಛಾಪನ್ನು ಮೂಡಿಸಿರುವ ಆದಿತ್ಯ ಠಾಕ್ರೆ ರವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಇದೇ ಸುದ್ದಿ ಇದೀಗ ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಚುನಾವಣಾಪೂರ್ವ ಮೈತ್ರಿಯಲ್ಲಿ ಕೇವಲ ಸೀಟು ಹಂಚಿಕೆಯಲ್ಲಿ ಮಾತ್ರ ಒಪ್ಪಂದ ಮಾಡಿಕೊಂಡಿದ್ದ ಶಿವಸೇನಾ ಪಕ್ಷವು ಚುನಾವಣೆ ಮುಗಿದ ಬಳಿಕ ಶಿವಸೇನ ಪಕ್ಷಕ್ಕೆ ಎರಡುವರೆ ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡಬೇಕು, ಖಾತೆ ಹಂಚಿಕೆಯಲ್ಲಿ ಅರ್ಧದಷ್ಟು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯ ಮಾಡುತ್ತಿದೆ.

ಬಿಜೆಪಿ ಪಕ್ಷವು ಶಿವಸೇನಾ ಪಕ್ಷಕ್ಕಿಂತ ಹೆಚ್ಚು ಸೀಟುಗಳಲ್ಲಿ ಗೆಲುವು ಕಂಡಿದ್ದರೂ ಸಹ ಶಿವಸೇನಾ ಪಕ್ಷವು ತನ್ನ ಪಟ್ಟನ್ನು ಮಾತ್ರ ಬಿಡುತ್ತಿಲ್ಲ. ಇದರಿಂದ ಎರಡು ಪಕ್ಷಗಳು ಬಹುಮತ ಸ್ಥಾಪಿಸಿದರೂ ಸರ್ಕಾರ ರಚನೆ ಮಾಡಲು ಮುಂದಾಗಿಲ್ಲ. ಇದೀಗ ಮತ್ತೊಂದು ಹೇಳಿಕೆ ನೀಡಿರುವ ಉದ್ಧವ್ ಠಾಕ್ರೆ ರವರು ಬಿಜೆಪಿ ಪಕ್ಷವು ನಮ್ಮ ಶರತ್ತುಗಳಿಗೆ ಒಪ್ಪಿ ಕೊಂಡು ಲಿಖಿತವಾಗಿ ಎಲ್ಲಾ ಶರತ್ತುಗಳನ್ನು ಬರೆದು ಸಹಿ ಮಾಡಿಕೊಡಬೇಕು. ಇಲ್ಲವಾದಲ್ಲಿ ನಮ್ಮ ದಾರಿ ನಮ್ಮದು ಎಂದಿದ್ದಾರೆ.

ಇನ್ನು ಮಾಧ್ಯಮದವರು ಬೇರೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದಾಗ, ಹಿಂದುತ್ವದ ವಿಚಾರಗಳ ಮೇಲೆ ಬಿಜೆಪಿ ಪಕ್ಷ ಕೆಲಸ ಮಾಡುತ್ತಿರುವ ಕಾರಣ ನಾವು ಬಿಜೆಪಿ ಪಕ್ಷದ ಜೊತೆ ಮೈತ್ರಿಯನ್ನು ಬಯಸುತ್ತಿದ್ದೇವೆ. ಇನ್ನುಳಿದವರು ಜೊತೆ ಮೈತ್ರಿ ಮಾಡಿಕೊಳ್ಳುವ ಆಲೋಚನೆ ಬರುವುದೇ ಇಲ್ಲ. ಮೈತ್ರಿ ಮಾಡಿಕೊಂಡರೆ ಬಿಜೆಪಿ ಪಕ್ಷದ ಜೊತೆ ಮಾತ್ರ ಮೈತ್ರಿ ಮಾಡಿಕೊಂಡಿದೆ, ಒಂದು ವೇಳೆ ಬೇರೊಂದು ಪಕ್ಷಗಳು ಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿದರು ನಮಗೆ ಬೇಡ, ಮತ್ತೊಮ್ಮೆ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದಿದ್ದಾರೆ.