ಈಗಲೇ ಮುಂದಿನ ಐಪಿಎಲ್ ಪರ್ಪಲ್ ಕ್ಯಾಪ್ ಮೇಲೆ ಕಟ್ಟಿಟ್ಟ ಭಾರತೀಯ ಯುವ ಬೌಲರ್ !

ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ಬೌಲರ್ ಗಳ ಸಾಲಿನಲ್ಲಿ ನಿಲ್ಲುವ ಸೂಚನೆ ನೀಡಿರುವ ಯುವ ಆಟಗಾರ ಇದೀಗ ಇನ್ನು ಐಪಿಎಲ್ ಟೂರ್ನಿಯು ಹಲವಾರು ತಿಂಗಳುಗಳ ಕಾಲ ಇರುವಾಗಲೇ ಪರ್ಪಲ್ ಕ್ಯಾಪ್ ಮೇಲೆ ಕಣ್ಣಿಟ್ಟಿದ್ದಾರೆ. ಈ ಕುರಿತು ಅವರೇ ಇಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದು ಶುಭಾಶಯಗಳ ಮಹಾ ಪೂರಾ ಹರಿದು ಬಂದಿದೆ. ಅಷ್ಟಕ್ಕೂ ಅದು ಯಾರು ಗೊತ್ತಾ? ಹಾಗೂ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದು ಏನು ಗೊತ್ತಾ?ತಿಳಿಯಲು ಒಮ್ಮೆ ಓದಿ. ಮತ್ತಷ್ಟು ಸುದ್ದಿಗಳಿಗಾಗಿ ಬಲಕ್ಕೆ ಸ್ವೀಪ್ ಮಾಡಿ.

ಕಳೆದ ಕೆಲವು ದಿನಗಳ ಹಿಂದೆ ಹಿಂದಿ ಅವರರಿಣಿಕೆಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಅಮಿತಾಬ್ ರವರು ಸ್ಪರ್ಧಿಯೊಬ್ಬರಿಗೆ 2019 ಸಾಲಿನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಆಟಗಾರ ಯಾರು ಎಂದು ಪ್ರಶ್ನೆ ಮಾಡಿದ್ದರು. ಇದರಲ್ಲಿ ದಕ್ಷಿಣ ಆಫ್ರಿಕಾದ ಖ್ಯಾತ ಬೌಲರ್ ಗಳಾದ ಇಮ್ರಾನ್ ತಾಹಿರ್, ಕಗಿಸೊ ರಬಾಡಾ ಹಾಗೂ ಭಾರತೀಯ ಬೌಲರ್ ಗಳಾದ ದೀಪಕ್ ಚಾಹರ್ ಹಾಗೂ ಶ್ರೇಯಸ್ ಗೋಪಾಲ್ ರವರ ನಾಲ್ಕು ಹೆಸರನ್ನು ಆಯ್ಕೆಯಾಗಿ ನೀಡಿದ್ದರು.

ಇದೀಗ ಇದೇ ಪೋಸ್ಟರ್ ಅನ್ನು ಪೋಸ್ಟ್ ಮಾಡಿರುವ ದೀಪಕ್ ಚಾಹರ್ ರವರು, ಈ ಪ್ರಶ್ನೆಗೆ ಅಂದು ಉತ್ತರ ಬೇರೆಯದ್ದಾಗಿತ್ತು, ಬಹುಶಃ ಮುಂದಿನ ವರ್ಷ 2020 ರಲ್ಲಿ ಉತ್ತರ ನಾನಾಗಿರುತ್ತೇನೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ. ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಬೌಲರ್ ಆಗಿ ಆಡಿದ್ದ ದೀಪಕ್ ಚಾಹರ್ ರವರು ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಭಾರತೀಯ ತಂಡದಲ್ಲಿ ಸ್ಥಾನ ಪಡೆದು ಕೆಲವೊಂದು ಅವಕಾಶಗಳನ್ನು ಉತ್ತಮವಾಗಿ ಬಳಸಿ ಕೊಂಡಿದ್ದರು. ಕಳೆದ ಐಪಿಎಲ್ ನಲ್ಲಿ 17 ಪಂದ್ಯಗಳನ್ನು ಆಡಿ 22 ವಿಕೆಟ್ ಕಬಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು. ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ೨೬ ವಿಕೆಟ್ ಕಬಳಿಸಿದ ತಾಹಿರ್ ಹಾಗೂ ರಬಾಡಾ ನಿಂತಿದ್ದರು.

Facebook Comments

Post Author: RAVI