ಪಾಕಿಸ್ತಾನದ ಪರ ನಿಂತ ಮಲೇಷಿಯಾಗೆ ಬಾರಿ ಗುದ್ದು ನೀಡಿದ ಭಾರತ! ಪರಿಸ್ಥಿತಿ ಮತ್ತಷ್ಟು ಕಠಿಣ

ಪಾಕಿಸ್ತಾನದ ಪರ ನಿಂತ ಮಲೇಷಿಯಾಗೆ ಬಾರಿ ಗುದ್ದು ನೀಡಿದ ಭಾರತ! ಪರಿಸ್ಥಿತಿ ಮತ್ತಷ್ಟು ಕಠಿಣ

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಕೇಂದ್ರ ಸರ್ಕಾರವು ಕಾಶ್ಮೀರದ ವಿಚಾರದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳಲು ತಯಾರಿಲ್ಲ. ಜಮ್ಮು ಹಾಗೂ ಕಾಶ್ಮೀರ ಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ಮೂಲಕ ಇಡೀ ದೇಶದ ಜನರಿಗೆ ಹಾಗೂ ನಮ್ಮ ದೇಶವನ್ನು ಕಾಯುತ್ತಿರುವ ಸೈನಿಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದ ಕೇಂದ್ರ ಸರ್ಕಾರವು, ಈ ನಿರ್ಣಯದಿಂದ ಪಾಕಿಸ್ತಾನವು ಎಷ್ಟೇ ಗುಟುರು ಹಾಕುತ್ತಿದ್ದರು ಯಾವುದಕ್ಕೂ ಕ್ಯಾರೇ ಎನ್ನದೆ ತನ್ನ ಕೆಲಸ ತಾನು ಮಾಡುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಈ ವಿಚಾರದಲ್ಲಿ ಬೆಂಬಲಿಸಲು ವಿಶ್ವದ ಬಲಾಢ್ಯ ರಾಷ್ಟ್ರಗಳು ಮುಂದೆ ಬಂದಿಲ್ಲ ಯಾಕೆಂದರೆ ನರೇಂದ್ರ ಮೋದಿ ರವರು ರಾಜತಾಂತ್ರಿಕತೆಯಿಂದ ಪಾಕಿಸ್ತಾನವನ್ನು ಏಕಾಂಗಿ ಮಾಡಿದ್ದರು. ಆದರೆ ಇತ್ತೀಚೆಗೆ ಸುಖಾಸುಮ್ಮನೆ ಇರಲಾರದೆ ಟರ್ಕಿ ಹಾಗೂ ಮಲೇಶಿಯಾ ದೇಶಗಳು ಪಾಕಿಸ್ತಾನದ ಪರ ನಿಂತು ಕಾಶ್ಮೀರದ ವಿಚಾರದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಧ್ವನಿ ಎತ್ತಲು ಪ್ರಯತ್ನ ಪಟ್ಟಿದ್ದರು.

ಈಗಾಗಲೇ ವಿಶ್ವದ ಬಹುತೇಕ ಬಲಾಢ್ಯ ರಾಷ್ಟ್ರಗಳು ಭಾರತಕ್ಕೆ ಬೆಂಬಲ ಘೋಷಿಸಿರುವ ಕಾರಣ ಹಾಗೂ ಭಾರತದ ನಿಲುವಿನಲ್ಲಿ ತಪ್ಪು ಇಲ್ಲ ಎಂದು ಒಪ್ಪಿಕೊಂಡಿರುವ ಕಾರಣ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಜಯ ಲಭಿಸಿತ್ತು. ಆದರೆ ಜಯ ಸಿಕ್ಕ ತಕ್ಷಣ ಸುಮ್ಮನಾಗದ ಭಾರತ ದೇಶವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪರ ನಿಂತಿದ್ದ ಟರ್ಕಿ ಹಾಗೂ ಮಲೇಶಿಯಾ ದೇಶಗಳಿಗೆ ತಕ್ಕ ತಿರುಗೇಟು ನೀಡಲು ಮುಂದಾಗಿದೆ. ಈಗಾಗಲೇ ಟರ್ಕಿ ದೇಶಕ್ಕೆ ಶಾಕ್ ನೀಡಿರುವ ನರೇಂದ್ರ ಮೋದಿ ರವರು ಹಲವಾರು ಒಪ್ಪಂದಗಳನ್ನು ಸ್ಥಗಿತಗೊಳಿಸಿ ತಾವು ಪೂರ್ವ ನಿಯೋಜನೆ ಮಾಡಿಕೊಂಡಿದ್ದ ಟರ್ಕಿ ದೇಶದ ಪ್ರವಾಸವನ್ನೂ ಸಹ ಕ್ಯಾನ್ಸಲ್ ಮಾಡಿದ್ದಾರೆ. ಇದೀಗ ಮಲೇಶಿಯಾ ದೇಶದ ಸರದಿ ಆರಂಭವಾಗಿದೆ. ಹೌದು ಇದೀಗ ಮಲೇಶಿಯಾ ದೇಶಕ್ಕೆ ತಿರುಗೇಟು ನೀಡಲು ಮುಂದಾಗಿದೆ ಈ ಮೂಲಕ ಪಾಕಿಸ್ತಾನದ ಪರ ನಿಂತಿದ್ದ ಪರಿಣಾಮ ಏನಾಗುತ್ತದೆ ಎಂಬುದನ್ನು ಭಾರತ ತೋರಿಸಲು ಸಜ್ಜಾಗಿದೆ.

ಇಡೀ ವಿಶ್ ಮಲೇಶಿಯಾ ದೇಶವು ಅಡುಗೆ ತೈಲ ಹಾಗೂ ತಾಳೆ ಆಧಾರಿತ ಉತ್ಪನ್ನಗಳನ್ನು ರಫ್ತು ಮಾಡುವ ಎರಡನೇ ದೊಡ್ಡ ದೇಶವಾಗಿದೆ ಇನ್ನೂ ಭಾರತದ ಕುರಿತು ಮಾತನಾಡುವುದಾದರೆ ಇಡೀ ವಿಶ್ವದಲ್ಲಿ ಅಡುಗೆ ಎಣ್ಣೆ ಹಾಗೂ ತಾಳೆ ಎಣ್ಣೆಯನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. ಮಲೇಶಿಯಾ ದೇಶದಿಂದ ಸಂಪೂರ್ಣ ತಾಳೆ ಎಣ್ಣೆ ಹಾಗೂ ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತದೇಶವು ಕೇವಲ ಕಳೆದ ಒಂದು ವರ್ಷದಲ್ಲಿ 6.84 ಬಿಲಿಯನ್ ಡಾಲರ್ ಗಳಷ್ಟು ಮೌಲ್ಯದ ಅಡುಗೆ ಎಣ್ಣೆ ಹಾಗೂ ತಾಳೆ ಆಧಾರಿತ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಇದೀಗ ಕೇಂದ್ರ ಸರ್ಕಾರವು ಭಾರತದ ಉನ್ನತ ಅಡುಗೆ ತೈಲ ಸಂಸ್ಥೆಯ ಮೊರೆಹೋಗಿ ಈ ಕ್ಷಣದಿಂದ ಮಲೇಶಿಯಾ ದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ಅಡುಗೆ ಎಣ್ಣೆ ಹಾಗೂ ತಾಲೂಕು ಸ್ತನಗಳನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿದೆ. ಭಾರತದ ಹಿತಾಸಕ್ತಿಗಳಿಗೆ ವಿಶ್ವಸಂಸ್ಥೆಯಲ್ಲಿ ವಿರುದ್ಧವಾಗಿ ಧ್ವನಿ ಎತ್ತಿದ ಕಾರಣಕ್ಕಾಗಿ ಈ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮಲೇಶಿಯಾದಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗಿದೆ.